Murder case: ಪ್ರೇಮಿಗಳ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಬೆಂಗಳೂರು: (Murder case) ಪ್ರೇಮಿಗಳ ನಡುವೆ ಜಗಳ ಪ್ರಾರಂಭವಾಗಿದ್ದು ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ರಾಮೂರ್ತಿನಗರದ ಟಿಸಿ ಪಾಳ್ಯದಲ್ಲಿ ಇಂದು ನಡೆದಿದೆ. ನೇಪಾಳ ಮೂಲದ ಕೃಷ್ಣಕುಮಾರಿ(23 ವರ್ಷ) ಎಂಬಾಕೆಯೇ ಕೊಲೆಯಾದ ದುರ್ದೈವಿಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕೃಷ್ಣಕುಮಾರಿಯನ್ನ ನೇಪಾಳ ಮೂಲದ ಸಂತೋಷ್ ದಾಮಿ(27) ಎನ್ನುವಾತ ಪ್ರೀತಿಸುತ್ತಿದು ಇಂದು ಆಕೆಯನ್ನು ಕೊಲೆ (Murder case) ಮಾಡಿದ್ದಾನೆ. ಕೊಲೆಯಾದ ಕೃಷ್ಣಕುಮಾರಿ ನಗರದ ಹೊರಮಾವು ಯೂನಿಸೆಕ್ಸ್ ಸ್ಪಾದಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದಳು ಹಾಗೂ ಆರೋಪಿ ಸಂತೋಷ್ ದಾಮಿ ಟಿಸಿ ಪಾಳ್ಯದಲ್ಲಿ ಬಾರ್ಬರ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.

ಇಬ್ಬರಿಗೂ ಪರಿಚಯವಾಗಿ ಪ್ರೀತಿ ಹುಟ್ಟಿಕೊಂಡಿತ್ತು. ರಾಮೂರ್ತಿನಗರದ ಟಿಸಿ ಪಾಳ್ಯದಲ್ಲಿ ಇಬ್ಬರೂ ಒಂದೇ ರೂಂ ಬಾಡಿಗೆ ಪಡೆದು ಲಿವಿಂಗ್ ರಿಲೇಷನ್ ಶಿಪ್‌ನಲ್ಲಿದ್ದರು ಎಂದು ತಿಳಿದು ಬಂದಿದೆ.ಇಂದು ಬೆಳಿಗ್ಗೆ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಪ್ರೀತಿಯಲ್ಲಿ ಕೊನೆಗೊಳ್ಳಬೇಕಾಗಿದ್ದ ಜಗಳ ತಾರಕಕ್ಕೇರಿದ್ದು, ಕೃಷ್ಣಕುಮಾರಿಯನ್ನ ಸಂತೋಷ್ ದಾಮಿ ಕೊಲೆ ಮಾಡಿದ್ದಾನೆ.

ಘಟನಾ ಸ್ಥಳಕ್ಕೆ ರಾಮೂರ್ತಿನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಆರೋಪಿ ಸಂತೋಷ್‌ ದಾಮಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನ ಆರಂಭಿಸಿದ್ದಾರೆ.

ಇದನ್ನೂ ಓದಿ : Fire accident-6 died: ಭೀಕರ ಅಗ್ನಿ ದುರಂತ: 4 ಮಕ್ಕಳು ಸೇರಿ 6 ಮಂದಿ ಸಜೀವ ದಹನ

ಇದನ್ನೂ ಓದಿ : Vikram Kirloskar: ಟೊಯೋಟ ಕಿರ್ಲೋಸ್ಕರ್‌ ಮೋಟಾರ್‌ ಉಪಾಧ್ಯಕ್ಷ ವಿಕ್ರಮ್‌ ಕಿರ್ಲೋಸ್ಕರ್‌ ನಿಧನ

ಇದನ್ನೂ ಓದಿ : Kumble Sundar Rao: ಹಿರಿಯ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ್‌ ರಾವ್‌ ವಿಧಿವಶ

(Murder case) An incident that started with a quarrel between lovers and ended in murder took place today in TC Palya, Ramurthynagar, Bengaluru. Krishna Kumari (23 years old), a native of Nepal, is the victim of the murder, the accused has been arrested by the police and is being interrogated.

Comments are closed.