ಮಣಕುಲ ದೇಗುಲದ ಲಕ್ಷ್ಮಿ ಆನೆ ವಿಧಿವಶ: ಭಕ್ತರಿಂದ ಅಂತಿಮ ನಮನ

ಪುದುಚೇರಿ: (Lakshmi elephant died) ಪುದುಚೇರಿಯ ಪ್ರಸಿದ್ಧ ದೇವಾಲಯ ಮಣಕುಲ ವಿನಾಯಕ ದೇಗುಲಕ್ಕೆ ಸೇರಿದ್ದ ಆನೆಯೊಂದು ವಿಹರಿಸುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದೆ. ಆನೆಯನ್ನು ನೋಡಿಕೊಳ್ಳುತ್ತಿದ್ದ ಸರ್ಕಾರದ ಪಶುವೈದ್ಯರು ಸ್ಥಳದಲ್ಲಿ ಹಾಜರಿದ್ದು, ಆನೆ ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಹೇಳಿದ್ದಾರೆ.

ಆನೆಯ ಆರೋಗ್ಯ ಉತ್ತಮವಾಗಿತ್ತು, ಯಾವುದೇ ತೊಂದರೆ ಇರಲಿಲ್ಲ ಎಂದು ಆನೆಯನ್ನು ನೋಡಿಕೊಳ್ಳುತ್ತಿದ್ದ ಪಶುವೈದ್ಯರು ಪಿಟಿಐಗೆ ತಿಳಿಸಿದರು. ಸರ್ಕಾರಿ ಕಾಲೇಜೊಂದರ ಸಮೀಪದ ರಸ್ತೆಯಲ್ಲಿ ಆನೆ ಕುಸಿದು ಮೃತಪಟ್ಟಿದೆ (Lakshmi elephant died). ಲಕ್ಷ್ಮಿ ಎಂಬ ಹೆಸರಿನ ಆನೆಯನ್ನು ಕೈಗಾರಿಕೋದ್ಯಮಿಯೊಬ್ಬರು 1995ರಲ್ಲಿ ದೇವಸ್ಥಾನಕ್ಕೆ ಧಾನ ಮಾಡಿದ್ದರು. ದೇವಸ್ಥಾನದಲ್ಲಿ ವಾಸಿಸುತ್ತಿದ್ದ ಈ ಆನೆಯ ಆಶೀರ್ವಾದವನ್ನು ಪಡೆಯಲು ಊರ ಭಕ್ತರಷ್ಟೇ ಅಲ್ಲದೆ ವಿದೇಶಿ ಭಕ್ತರು ಕೂಡ ಬರುತ್ತಿದ್ದರು.

ಕ್ರೇನ್ ಸಹಾಯದಿಂದ ಆನೆಯನ್ನು ಟ್ರಕ್‌ ಮೂಲಕ ಅಂತಿಮ ಯಾತ್ರೆಯಲ್ಲಿ ಸಾಗಿಸಲು ಮುಂದಾಗಿದ್ದಾರೆ. ಬಳಿಕ ಮುತ್ಯಾಲಪೇಟೆಯಲ್ಲಿರುವ ದೇವಸ್ಥಾನಕ್ಕೆ ಸೇರಿದ ವಿಸ್ತಾರವಾದ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರನ್ ತಿಳಿಸಿದ್ದಾರೆ. ಆನೆಯ ಸಾವಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕ ಕಡೆಗಳಿಂದ ಜನರು ಆನೆ ಕೊನೆಯ ದರ್ಶನ ಪಡೆಯಲು ಆಗಮಿಸಿದ್ದಾರೆ.

ಇದನ್ನೂ ಓದಿ : Murder case: ಪ್ರೇಮಿಗಳ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಇದನ್ನೂ ಓದಿ : Fire accident-6 died: ಭೀಕರ ಅಗ್ನಿ ದುರಂತ: 4 ಮಕ್ಕಳು ಸೇರಿ 6 ಮಂದಿ ಸಜೀವ ದಹನ

ಇದರ ಜೊತೆಗೆ ಲಕ್ಷ್ಮೀ ಆನೆಯ ದರ್ಶನ ಪಡೆಯಲು ಬಂದ ಜನರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಯಿತು. ಪುದುಚೇರಿಯಲ್ಲಿ ಮಣಕುಲ ವಿನಾಯಕ ದೇವಸ್ಥಾನವು ಆನೆಯನ್ನು ಹೊಂದಿರುವ ಏಕೈಕ ದೇವಾಲಯವಾಗಿದೆ. ಇದೀಗ ದೇವಾಲಯದ ಲಕ್ಷ್ಮಿ ಆನೆ ಸಾವನ್ನಪ್ಪಿದೆ.

(Lakshmi elephant died) An elephant belonging to Puducherry’s famous temple Manakula Vinayaka Temple died of heart attack while walking. The government veterinarian who was attending to the elephant attended the spot and said that the elephant died due to heart attack.

Comments are closed.