MLA Election 2023 Siddaramaiah : ಸಿದ್ದರಾಮಯ್ಯಗೆ ಸೂಚನೆ ಕೊಟ್ಟ ಮನೆ ದೇವರು : 2 ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ದೈವವಾಣಿ

ಮಂಡ್ಯ : MLA Election 2023 Siddaramaiah : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯ ಅವರ ಮನೆ ದೇವರಾಗಿರುವ ಆದಿನಾಡು ಚಿಕ್ಕಮ್ಮ ದೇವಿ ಸೂಚನೆಯನ್ನು ಕೊಟ್ಟಿದೆ. ಒಂದು ಕಡೆ ನಿಂತ್ರೆ ಒಲವಿಲ್ಲ, ಎರಡು ಕಡೆ ನಿಲ್ಲುವಂತೆ ದೇವರು ಭವಿಷ್ಯ ನುಡಿದಿದೆ.

ಮಂಡ್ಯ ಜಿಲ್ಲೆಯ ಚೊಟ್ಟನಹಳ್ಳಿಯ ಬೆಟ್ಟದಲ್ಲಿರುವ ಆದಿನಾಡು ಚಿಕ್ಕಮ್ಮ ದೇವಿ ದೇವಸ್ಥಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು ಭೇಟಿ ನೀಡಿದ್ದರು. ಈ ವೇಳೆಯಲ್ಲಿ ಚಿಕ್ಕಮ್ಮದೇವಿ ದೇಗುಲದ ಅರ್ಚಕರಾಗಿರುವ ಡಾ.ಲಿಂಗಣ್ಣ ಅವರ ಮೈ ಮೇಲೆ ಬಂದಿರುವ, ದೇವಿ ಸಿದ್ದರಾಮಯ್ಯ ಅವರ ಮುಂದಿನ ರಾಜಕೀಯ ಭವಿಷ್ಯದ ಕುರಿತು ಸೂಚನೆಯನ್ನು ಕೊಟ್ಟಿದ್ದಾಳೆ. ಡಾ.ಯತೀಂದ್ರ ಅವರ ಬಳಿಯಲ್ಲಿ ನನ್ನ ಸೂಚನೆಯನ್ನು ನಿಮ್ಮ ತಂದೆಗೆ ತಿಳಿಸಬೇಕು, ಅಲ್ಲದೇ ಸಿದ್ದರಾಮಯ್ಯ ಅವರನ್ನು ಖುದ್ದು ದೇವಸ್ಥಾನಕ್ಕೆ ಬರುವಂತೆ ಸೂಚಿಸಿದೆ.

ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಅನ್ನುವ ಕುರಿತು ಚರ್ಚೆ ನಡೆಯುತ್ತಿದೆ. ಒಂದೆಡೆಯಲ್ಲಿ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಖಚಿತ ಮಾಡಿದ್ದರೂ ಕೂಡ ಮತ್ತೊಂದು ಕ್ಷೇತ್ರದ ಹುಡುಕಾಟವನ್ನು ಸಿದ್ದರಾಮಯ್ಯ ನಡೆಸುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರ ಹಾಗೂ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧೆಯನ್ನು ಮಾಡಿದ್ದರು. ಆದರೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋಲನ್ನು ಕಂಡಿದ್ದರು. ಈ ಬಾರಿಯೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ನಡುವಲ್ಲೇ ದೈವವಾಣಿ ನುಡಿದಿದೆ.

ಸಿದ್ದರಾಮಯ್ಯ ಅವರು ಕೂಡ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಮನಸ್ಸು ಮಾಡಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತ್ರ ಒಬ್ಬ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಮಾತ್ರವೇ ಸ್ಪರ್ಧೆ ಮಾಡಬೇಕು ಎಂದು ಸೂಚಿಸಿದ್ದರು. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಎರಡು ಕ್ಷೇತ್ರದ ಸ್ಪರ್ಧೆಯ ಆಸೆಗೆ ಕುತ್ತು ಬಂದಿತ್ತು. ಆದ್ರೀಗ ಕೋಲಾರದಿಂದ ಸ್ಪರ್ಧೆಯನ್ನು ಸಿದ್ದರಾಮಯ್ಯ ಖಚಿತ ಪಡಿಸಿದ್ದರೂ ಕೂಡ ಹಲವು ಕ್ಷೇತ್ರಗಳಿಂದಲೂ ಸಿದ್ದರಾಮಯ್ಯ ಅವರಿಗೆ ಆಫರ್ ಬಂದಿತ್ತು. ಆದರೆ ಸಿದ್ದರಾಮಯ್ಯ ಸ್ಪರ್ಧೆಯ ಕುರಿತು ಹೈಕಮಾಂಡ್ ಯಾವ ನಿರ್ಧಾರವನ್ನು ಕೈಗೊಳ್ಳಲಿದೆ ಅನ್ನೋದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : Union Minister Sharath Yadav: ಮಾಜಿ ಕೇಂದ್ರ ಸಚಿವ ಶರದ್‌ ಯಾದವ್‌ ವಿಧಿವಶ

ಇದನ್ನೂ ಓದಿ : ರಾಷ್ಟ್ರೀಯ ಯುವಜನೋತ್ಸವ : ಪ್ರಧಾನಿ ಮೋದಿ ಬರುವ ಹಾದಿಯಲ್ಲಿ ಅಪರಿಚಿತ ವಾಹನ ಪತ್ತೆ

MLA Election 2023 Ex CM Siddaramaiah was instructed by house God to contest in 2 constituencies

Comments are closed.