Sanju Samson at Fifa World Cup : ಟೀಮ್ ಇಂಡಿಯಾದಲ್ಲಿ ನಿರಂತರ ಅನ್ಯಾಯ, ಫಿಪಾ ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್

ಬೆಂಗಳೂರು: Sanju Samson at Fifa World Cup : ಕೇರಳದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್ (Sanju Samson) ಟೀಮ್ ಇಂಡಿಯಾದಲ್ಲಿ ಪದೇ ಪದೇ ಅವಕಾಶ ವಂಚಿತರಾಗುತ್ತಿದ್ದಾರೆ. ಭಾರತ ತಂಡದಲ್ಲಿ ನಿರಂತರ ಕಡೆಗಣನೆಗೊಳಗಾಗುತ್ತಿರುವ ಸ್ಯಾಮ್ಸನ್, ಕತಾರ್’ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್’ನಲ್ಲಿ (Fifa World Cup) ಕಾಣಿಸಿಕೊಂಡಿದ್ದಾರೆ. ಅಚ್ಚರಿಯಾದರೂ ಇದು ಸತ್ಯ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಸಂಜು ಸ್ಯಾಮ್ಸನ್ ಅವರನ್ನು ಹ್ಯಾಮಿಲ್ಟನ್’ನಲ್ಲಿ ನಡೆದ 2ನೇ ಏಕದಿನ ಪಂದ್ಯದ ಪ್ಲೇಯಿಂಗ್ XIನಿಂದ ಕೈ ಬಿಡಲಾಗಿತ್ತು. ಸ್ಯಾಮ್ಸನ್ ಬದಲು ಆಲ್ರೌಂಡರ್ ದೀಪಕ್ ಹೂಡಗೆ ಅವಕಾಶ ನೀಡಲಾಗಿತ್ತು. ಕಿವೀಸ್ ವಿರುದ್ಧ ಶುಕ್ರವಾರ ಆಕ್ಲೆಂಡ್’ನಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದಿದ್ದ ಸಂಜು ಸ್ಯಾಮ್ಸನ್ 38 ಎಸೆತಗಳಲ್ಲಿ 36 ರನ್ ಗಳಿಸಿದ್ದರು. ಆದರೆ 4ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದಿದ್ದ ಮತ್ತೊಬ್ಬ ವಿಕೆಟ್ ಕೀಪರ್ ರಿಷಭ್ ಪಂತ್ ಕೇವಲ 15 ರನ್ ಗಳಿಸಿ ಔಟಾಗಿದ್ದರು. ಆದರೂ 2ನೇ ಪಂದ್ಯಕ್ಕೆ ಪಂತ್ ಅವರನ್ನು ಉಳಿಸಿಕೊಂಡು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಸಂಜು ಸ್ಯಾಮ್ಸನ್ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಭಾರತ ತಂಡದ ಟೀಮ್ ಮ್ಯಾನೇಜ್ಮೆಂಟ್ ಮತ್ತು ಬಿಸಿಸಿಐ ವಿರುದ್ಧ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಸಂಜು ಸ್ಯಾಮ್ಸನ್’ಗೆ ಭಾರತ ತಂಡದಲ್ಲಿ ಪದೇ ಪದೇ ಅನ್ಯಾಯವಾಗುತ್ತಿರುವ ಹೊತ್ತಲ್ಲಿ ಫಿಫಾ ವಿಶ್ವಕಪ್’ನಲ್ಲಿ ಕೇರಳದ ಆಟಗಾರ ಸದ್ದು ಮಾಡಿದ್ದಾರೆ. ಸ್ಯಾಮ್ಸನ್ ಅವರಿಗೆ ಅನ್ಯಾಯವಾಗುತ್ತಿರುವುದನ್ನು ಕತಾರ್’ನಲ್ಲಿರುವ ಅವರ ಅಭಿಮಾನಿಗಳು ವಿನೂತನ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ಫಿಫಾ ವಿಶ್ವಕಪ್ ಪಂದ್ಯಗಳು ನಡೆಯುತ್ತಿರುವ ಕ್ರೀಡಾಂಗಣದ ಹೊರಗೆ ಸ್ಯಾಮ್ಸನ್ ಅವರ ಪೋಸ್ಟರ್ ಹಿಡಿದು ತಮ್ಮ ನೆಚ್ಚಿನ ಆಟಗಾರನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.”ಪಂದ್ಯ, ತಂಡ ಅಥವಾ ಆಟಗಾರ.. ಎಲ್ಲವನ್ನೂ ಮೀರಿ ನಾವು ನಿಮ್ಮ ಜೊತೆಗಿದ್ದೇವೆ ಸಂಜು ಸ್ಯಾಮ್ಸನ್” ಎಂದು ಪೋಸ್ಟರ್’ನಲ್ಲಿ ಬರೆಯಲಾಗಿದೆ.

ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಕಡೆಗಣಿಸುತ್ತಿರುವುದಕ್ಕೆ 1983ರ ವಿಶ್ವಕಪ್ ಹೀರೊ ಕೃಷ್ಣಮಾಚಾರಿ ಶ್ರೀಕಾಂತ್ ಕೂಡ ಆಕ್ರೋಶ ಹೊರ ಹಾಕಿದ್ದಾರೆ. “ಈ ಭಾರತ ತಂಡದ ಟೀಮ್ ಮ್ಯಾನೇಜ್ಮೆಂಟ್’ಗೆ ಒಂದೊಳ್ಳೆ ತಂಡವನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಔಟ್ ಆಫ್ ಫಾರ್ಮ್ ರಿಷಭ್ ಪಂತ್’ನನ್ನು 4ನೇ ಕ್ರಮಾಂಕದಲ್ಲಿ ಆಡಿಸುವ ಔಚಿತ್ಯವೇನು? ಹಾಗೆ ಮಾಡುವುದರಿಂದ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಕೆಳ ಕ್ರಮಾಂಕದಲ್ಲಿ ಆಡುವಂತೆ ಮಾಡಲಾಗುತ್ತಿದೆ. ಸಂಜು ಸ್ಯಾಮ್ಸನ್ ಕೈಗೆ ವಿಕೆಟ್ ಕೀಪಿಂಗ್ ಗ್ಲೌಸ್ ನೀಡಿ. ಸೂರ್ಯನನ್ನು 4ನೇ ಕ್ರಮಾಂಕದಲ್ಲಿ ಆಡಿಸಿ. ಸಂಜು 5ನೇ ಕ್ರಮಾಂಕದಲ್ಲಿ ಆಡಲಿ. 6ನೇ ಕ್ರಮಾಂಕಕ್ಕೆ ದೀಪಕ್ ಹೂಡ ಬರಲಿ. ಆ ಪಂತ್’ನನ್ನು ದೇಶೀಯ ಕ್ರಿಕೆಟ್’ಗೆ ಓಡಿಸಿ ಫಾರ್ಮ್ ಮರಳಿ ಪಡೆದು ಬರಲು ಹೇಳಿ” ಎಂದು ಶ್ರೀಕಾಂತ್ ಹೇಳಿದ್ದಾರೆ.

ಇದನ್ನೂ ಓದಿ : Vijay Hazare Trophy Karnataka : ಮೋದಿ ಸ್ಟೇಡಿಯಂನಲ್ಲಿ ನಾಳೆ ಕ್ವಾರ್ಟರ್ ಫೈನಲ್; ಪಂಜಾಬ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಕರ್ನಾಟಕ ?

ಇದನ್ನೂ ಓದಿ : MS Dhoni Dance : ಬರ್ತ್‌ಡೇ ಪಾರ್ಟಿಯಲ್ಲಿ ಪಾಂಡ್ಯ ಬ್ರದರ್ಸ್ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ಧೋನಿ

Indian cricket team Player Sanju Samson at Fifa World Cup

Comments are closed.