ಉಕ್ರೇನ್‌ನಲ್ಲಿ ವಿಮಾನ ದುರಂತ : ಆಂತರಿಕ ಸಚಿವರು ಸೇರಿ 18 ಮಂದಿ ಸಾವು

ಕೈವ್ : ಉಕ್ರೇನ್‌ ಪಟ್ಟಣದ ನರ್ಸರಿಯಲ್ಲಿ ಹೆಲಿಕಾಪ್ಟರ್‌ (Plane crash in Ukraine) ಅಪ್ಪಳಿಸಿ ಪರಿಣಾಮವಾಗಿ ದುರಂತವೊಂದು ಸಂಭವಿಸಿದೆ. ಈ ದುರ್ಘಟನೆಯಲ್ಲಿ ಉಕ್ರೇನ್‌ನ ಆಂತರಿಕ ಸಚಿವರು ಮತ್ತು ಮೂವರು ಮಕ್ಕಳು ಸೇರಿದಂತೆ 18 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ತುರ್ತು ಸೇವೆಗಳು ಘಟನಾ ಸ್ಥಳಕ್ಕೆ ಧಾವಿಸಿವೆ ಎಂದು ಅಧ್ಯಕ್ಷರ ಸಹಾಯಕರು ತಿಳಿಸಿದ್ದಾರೆ.

ಬುಧವಾರ ಉಕ್ರೇನ್‌ನ ರಾಜಧಾನಿ ಕೈವ್ ಬಳಿಯ ಬ್ರೋವರಿ ಪಟ್ಟಣದ ನರ್ಸರಿಗೆ ಹೆಲಿಕಾಪ್ಟರ್ ಅಪ್ಪಳಿಸಿದ ಪರಿಣಾಮ ಉಕ್ರೇನ್‌ನ ಆಂತರಿಕ ಸಚಿವರು ಮತ್ತು ಇತರ 18 ಜನರು ಸಾವನ್ನಪ್ಪಿದ್ದು ಅದರಲ್ಲಿ ಇಬ್ಬರು ಮಕ್ಕಳು ಕೂಡ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉಕ್ರೇನ್‌ನ ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥ ಇಹೋರ್ ಕ್ಲೈಮೆಂಕೊ ಪ್ರಕಾರ, ಆಂತರಿಕ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ, ಅವರ ಉಪ ಯೆವ್ಹೆನ್ ಯೆನಿನ್ ಮತ್ತು ಆಂತರಿಕ ವ್ಯವಹಾರಗಳ ಸಚಿವಾಲಯದ ರಾಜ್ಯ ಕಾರ್ಯದರ್ಶಿ ಯೂರಿ ಲುಬ್ಕೊವಿಚ್ ಎಂದು ಗುರುತಿಸಲಾಗಿದೆ. ಸುಮಾರು 11 ತಿಂಗಳ ಹಿಂದೆ ರಷ್ಯಾದೊಂದಿಗೆ ಯುದ್ಧ ಪ್ರಾರಂಭವಾದಾಗಿನಿಂದ ಮರಣ ಹೊಂದಿದ ಅತ್ಯಂತ ಹಿರಿಯ ಉಕ್ರೇನಿಯನ್ ಅಧಿಕಾರಿ ಮೊನಾಸ್ಟಿರ್ಸ್ಕಿ ಮೊದಲಿಗರು ಎನ್ನಲಾಗಿದೆ.

ಉಕ್ರೇನಿಯನ್ ರಾಜಧಾನಿಯ ಪೂರ್ವ ಉಪನಗರವಾದ ಬ್ರೋವರಿಯಲ್ಲಿ ಅಪಘಾತಕ್ಕೀಡಾದ ತುರ್ತು ಸೇವಾ ಹೆಲಿಕಾಪ್ಟರ್‌ನಲ್ಲಿ ಸಾವನ್ನಪ್ಪಿದವರಲ್ಲಿ ಒಂಬತ್ತು ಮಂದಿ ಇದ್ದರು ಎಂದು ಕ್ಲೈಮೆಂಕೊ ಹೇಳಿದರು. ಮೂವರು ಮಕ್ಕಳು ಸಹ ಸಾವನ್ನಪ್ಪಿದ್ದಾರೆ ಎಂದು ಕೈವ್ ಪ್ರಾದೇಶಿಕ ಗವರ್ನರ್ ಒಲೆಕ್ಸಿ ಕುಲೆಬಾ ಹೇಳಿದ್ದಾರೆ. ಇದಕ್ಕೂ ಮುನ್ನ ಹೆಲಿಕಾಪ್ಟರ್ ಶಿಶುವಿಹಾರದ ಬಳಿ ಪತನಗೊಂಡಿದೆ ಎಂದು ಅಧಿಕಾರಿಗಳು ಮತ್ತು ಮಾಧ್ಯಮ ವರದಿಗಳು ತಿಳಿಸಿವೆ.

ಇದನ್ನೂ ಓದಿ : Firing at the house: ಮನೆಯ ಮೇಲೆ ಗುಂಡಿನ ದಾಳಿ: ತಾಯಿ ಮಗು ಸೇರಿ 6 ಮಂದಿಯ ಭೀಕರ ಹತ್ಯೆ

ಇದನ್ನೂ ಓದಿ : Young Professionals Scheme : ವೃತ್ತಿಪರರಿಗಾಗಿ ಪ್ರಾರಂಭವಾಗಲಿದೆ ಹೊಸ ಯೋಜನೆ; ಎರಡು ವರ್ಷಗಳವರೆಗೆ ಬ್ರಿಟನ್‌ನಲ್ಲಿ ವಾಸ ಮತ್ತು ಕೆಲಸ

ಇದು ಅಪಘಾತವೋ ಅಥವಾ ರಷ್ಯಾದೊಂದಿಗಿನ ಯುದ್ಧದ ಪರಿಣಾಮವೇ ಎಂಬುದರ ಕುರಿತು ಇನ್ನು ತಿಳಿದು ಬಂದಿಲ್ಲ ಎಂದಿದ್ದಾರೆ. ಕೈವ್ ಪ್ರದೇಶದಲ್ಲಿ ಇತ್ತೀಚೆಗೆ ಯಾವುದೇ ಯುದ್ಧದ ವಾತಾವರಣ ಸೃಷ್ಟಿಯಾಗಿರುವುದಿಲ್ಲ ಎಂದು ವರದಿ ಹೇಳುತ್ತಿದೆ. 15 ಮಕ್ಕಳು ಸೇರಿದಂತೆ ಒಟ್ಟು 29 ಜನರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ತಿಳಿಸಿದ್ದಾರೆ. ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಅಧಿವೇಶನದಲ್ಲಿ ಭಾಗವಹಿಸುವ ಮೊದಲು ಉಕ್ರೇನ್ ಪ್ರಥಮ ಮಹಿಳೆ ಒಲೆನಾ ಝೆಲೆನ್ಸ್ಕಾ ಕಂಬನಿ ಮಿಡಿದಿದ್ದಾರೆ. ಫೋರಮ್ ಅಧ್ಯಕ್ಷ ಬೋರ್ಜ್ ಬ್ರೆಂಡೆ ಅವರು ಅಪಘಾತದಲ್ಲಿ ಸತ್ತ ಉಕ್ರೇನಿಯನ್ ಅಧಿಕಾರಿಗಳನ್ನು ಗೌರವಿಸಲು ಅಧಿವೇಶನವನ್ನು ಪ್ರಾರಂಭಿಸಿದ ನಂತರ 15 ಸೆಕೆಂಡುಗಳ ಕಾಲ ಮೌನ ಆಚರಣೆ ಮಾಡಿದರು.

Plane crash in Ukraine : 18 dead including interior minister

Comments are closed.