Accused remanded in judicial custody : ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ಆರೋಪಿಗಳಿಗೆ ಆ.11ರವರೆಗೆ ನ್ಯಾಯಾಂಗ ಬಂಧನ
ದಕ್ಷಿಣ ಕನ್ನಡ : Accused remanded in judicial custody : ದಕ್ಷಿಣ ಕನ್ನಡ : ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿರುವ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಇಂದು ಆರೋಪಿಗಳಾದ ಮೊಹಮ್ಮದ್ ಶಫೀಕ್ ಹಾಗೂ ಜಾಕೀರ್ನನ್ನು ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಎಸಿಜೆಎಂ ಕೋರ್ಟ್ಗೆ ಹಾಜರುಪಡಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳನ್ನು ಆಗಸ್ಟ್ 11ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಿ ಆದೇಶ ಹೊರಡಿಸಿದೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಸಖತ್ ಅಲರ್ಟ್ ಆಗಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಐದು ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿದೆ. ಎಸ್ಡಿಪಿಐ ಕಾರ್ಯಕರ್ತರು ಸೇರಿದಂತೆ ಒಟ್ಟು 27 ಮಂದಿಯನ್ನು ಪೊಲೀಸರು ಈವರೆಗೆ ವಶಕ್ಕೆ ಪಡೆದುಕೊಂಡಿದ್ದಾರೆ. ಇವರಲ್ಲಿ ಇಬ್ಬರ ಮೇಲೆ ಗುಮಾನಿ ಹೆಚ್ಚಾದ ಹಿನ್ನೆಲೆಯಲ್ಲಿ ಮೊಹಮ್ಮದ್ ಶಫೀಕ್ ಹಾಗೂ ಜಾಕೀರ್ನನ್ನು ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದರು.
ವಿಪರ್ಯಾಸ ಅಂದರೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮೊಹಮ್ಮದ್ ಶಫೀಕ್ ತಂದೆ ಇಬ್ರಾಹಿಂ ಕೊಲೆಯಾದ ಪ್ರವೀಣ್ ನೆಟ್ಟಾರು ಕೋಳಿ ಅಂಗಡಿಯಲ್ಲಿ ಮೂರು ತಿಂಗಳುಗಳ ಕಾಲ ಕೆಲಸ ಮಾಡಿದ್ದರು ಎನ್ನಲಾಗಿದೆ. ಟೆಲಿಗ್ರಾಂನಲ್ಲಿ ವಿದೇಶಿ ವ್ಯಕ್ತಿಗಳ ಜೊತೆ ಸಂಪರ್ಕ ಸಾಧಿಸಿದ್ದ ಶಫೀಕ್ ಪ್ರವೀಣ್ ನೆಟ್ಟಾರು ಹತ್ಯೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾನೆ ಎಂಬ ಗುಮಾನಿ ಇದೆ.
ಇನ್ನು ಮತ್ತೊಬ್ಬ ಬಂಧಿತ ಆರೋಪಿ ಜಾಕೀರ್ ಕೊಲೆಯಾಗುವ ದಿನದಂದು ಪ್ರವೀಣ್ ನೆಟ್ಟಾರು ಚಲನವಲನಗಳ ಮೇಲೆ ಗಮನವಿಟ್ಟಿದ್ದ ಎನ್ನಲಾಗಿದೆ. ಪ್ರವೀಣ್ ಕೊಲೆಯಾಗುವ ಕೆಲವೇ ನಿಮಿಷಗಳ ಮೂಲಕ ಚಿಕನ್ ಅಂಗಡಿಯ ಆಸುಪಾಸಿನಲ್ಲಿ ಕಾಣಿಸಿಕೊಂಡಿದ್ದ ಜಾಕೀರ್ ಪ್ರವೀಣ್ ಚಲನವಲನಗಳ ಮಾಹಿತಿಯನ್ನು ಹಂತಕರಿಗೆ ನೀಡಿರುವ ಸಾಧ್ಯತೆಯಿದೆ. ಜಾಕೀರ್ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಂಧನಕ್ಕೊಳಗಾಗಿರುವ ಜಾಕೀರ್ ಹಾಗೂ ಶಫೀಕ್ ಇಬ್ಬರೂ ನೇರವಾಗಿ ಪ್ರವೀಣ್ ಹತ್ಯೆಯಲ್ಲಿ ಭಾಗಿಯಾದವರಲ್ಲ. ಇನ್ನೂ ಈ ಕೊಲೆಯನ್ನು ಮಾಡಿದ್ದು ಯಾರು ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಆರೋಪಿಗಳು ಕೇರಳದ ನಂಬರ್ ಪ್ಲೇಟ್ ಹೊಂದಿದ್ದ ಬೈಕ್ನಲ್ಲಿ ಬಂದಿದ್ದರು ಎನ್ನಲಾಗಿದ್ದು ಹೀಗಾಗಿ ಮಂಗಳೂರು ಪೊಲೀಸರು ಕೇರಳಕ್ಕೂ ತೆರಳಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನು ಓದಿ : B.Y Vijayendra : ಮೃತ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಬಿ.ವೈ ವಿಜಯೇಂದ್ರ ಭೇಟಿ : ಕುಟುಂಬಸ್ಥರಿಗೆ ಸಾಂತ್ವನ
ಇದನ್ನೂ ಓದಿ : CT Ravi : ಪಿಎಫ್ಐ ಸಂಘಟನೆ ಬ್ಯಾನ್ ಮಾಡ್ತೇವೆ, ಯಾರೂ ಸಮೂಹ ಸನ್ನಿಗೆ ಒಳಗಾಗದಿರಿ : ಕಾರ್ಯಕರ್ತರಲ್ಲಿ ಸಿ.ಟಿ ರವಿ ಮನವಿ
Praveen Nettaru murder case: Accused remanded in judicial custody till August 11
Comments are closed.