Praveen Nettaru murder case : ಪ್ರವೀಣ್​ ನೆಟ್ಟಾರು ಹಂತಕರ ಪಿನ್​ ಟು ಪಿನ್ ಮಾಹಿತಿ ನೀಡಿದ ಎಡಿಜಿಪಿ ಅಲೋಕ್​ ಕುಮಾರ್​​

ಮಂಗಳೂರು : Praveen Nettaru murder case : ಹಿಂದೂ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣವನ್ನು ಭೇದಿಸಿರುವ ದಕ್ಷಿಣ ಕನ್ನಡ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಇಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ತನಿಖೆಯ ಬಗ್ಗೆ ಎಡಿಜಿಪಿ ಅಲೋಕ್​ ಕುಮಾರ್​​ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಇಂದು ಬೆಳಗ್ಗೆ ನಾವು ಪ್ರವೀಣ್​ ಹಂತಕರನ್ನು ಬಂಧಿಸಿದ್ದೇವೆ. ಇವರನ್ನು ತಲಪಾಡಿ ಚೆಕ್​ಪೋಸ್ಟ್​ನಲ್ಲಿ ವಶಕ್ಕೆ ಪಡೆಯಲಾಗಿದೆ. ಇವರು ಇಷ್ಟುದಿನ ಎಲ್ಲಿ ಇದ್ದರು..? ಇವರಿಗೆ ಆಶ್ರಯ ನೀಡಿದವರು ಯಾರು ..? ಹೀಗೆ ಎಲ್ಲದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಯಾವ ಉದ್ದೇಶಕ್ಕೆ ಪ್ರವೀಣ್​ರನ್ನು ಕೊಲೆ ಮಾಡಲಾಗಿದೆ ಎಂಬುದನ್ನೂ ತನಿಖೆ ಮಾಡುತ್ತೇವೆ. ಪೊಲೀಸ್​ ಕಸ್ಟಡಿಗೆ ಪಡೆದು ಮೂವರನ್ನು ಸಂಪೂರ್ಣ ತನಿಖೆಗೆ ಒಳಪಡಿಸಿ ಬಳಿಕ ಎನ್​ಐಎಗೆ ಒಪ್ಪಿಸುತ್ತೇವೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಸುಳ್ಯದ ಸಿಯಾಬ್(33), ರಿಯಾಜ್​ ಅಂಕತಡ್ಕ(27) ಹಾಗೂ ಬಶೀರ್​ (29) ಎಂಬವರನ್ನು ಬಂಧಿಸಿದ್ದೇವೆ. ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಜನರಲ್ಲೂ ಆತಂಕ ಮೂಡಿತ್ತು .ಪ್ರಕರಣವನ್ನು ಭೇದಿಸಲು ನಮ್ಮ ಮೇಲೂ ಸಾಕಷ್ಟು ಒತ್ತಡವಿತ್ತು. ಹೀಗಾಗಿ ಶತಾಯಗತಾಯವಾಗಿ ಈ ಪ್ರಕರಣವನ್ನು ಭೇದಿಸಬೇಕಿತ್ತು. ಈ ಪ್ರಕರಣದ ತನಿಖೆಯಲ್ಲಿ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ .ಹೀಗಾಗಿ ಅಧಿಕಾರಿಗಳ ತಂಡಕ್ಕೆ ಬಹುಮಾನವನ್ನು ಘೋಷಿಸಲಿದ್ದೇವೆ ಎಂದು ಹೇಳಿದರು.

ಮೇಲ್ನೋಟಕ್ಕೆ ಆರೋಪಿಗಳಿಗೆ ಪಿಎಫ್​ಐ ಹಾಗೂ ಎಸ್​ಡಿಪಿಐ ನಂಟಿದೆ ಎಂಬುದು ತಿಳಿದು ಬಂದಿದೆ. ತನಿಖೆಯಲ್ಲಿ ಇದು ಇನ್ನೂ ಸಾಬೀತಾಗಬೇಕಿದೆ. ಈ ಮೂವರು ಕೃತ್ಯವನ್ನು ನಡೆಸಿ ಮೊದಲು ಕಾಸರಗೋಡಿನಲ್ಲಿರುವ ಮಸೀದಿಗೆ ತೆರಳಿದ್ದಾರೆ. ಈ ಕೊಲೆಯನ್ನು ನಡೆಸಲು ಕಪ್ಪು ಬಣ್ಣದ ಸ್ಪೆಂಡರ್​ ಬೈಕ್​ ಬಳಕೆ ಮಾಡಲಾಗಿದೆ. ರಿಯಾಜ್​ ಕೋಳಿ ಸಪ್ಲೈ ಮಾಡುವ ಹೋಟೆಲ್​ನಲ್ಲಿ ಬಶೀರ್ ಕೆಲಸ ಮಾಡುತ್ತಿದ್ದ . ಸಿಯಾಬ್ ಕ್ಯಾಂಪ್ಕೋ ಕಂಪನಿಗೆ​ ಕೊಕೊ ಪೂರೈಕೆದಾರನಾಗಿದ್ದ ಎಂದು ಮಾಹಿತಿ ನೀಡಿದ್ದಾರೆ.

ಈ ಕೊಲೆಯನ್ನು ನಡೆಸಲು ಬೈಕ್​ ಮಾತ್ರವಲ್ಲದೇ ಕಾರು ಕೂಡ ಬಳಕೆಯಾಗಿದೆ. ಕೃತ್ಯಕ್ಕೆ ಬಳಕೆ ಮಾಡಲಾದ ಪ್ರತಿಯೊಂದು ವಸ್ತುವನ್ನೂ ವಶಕ್ಕೆ ಪಡೆಯುತ್ತೇವೆ.ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಯಾವುದೇ ಅಮಾಯಕರನ್ನು ನಾವು ಬಂಧಿಸಿಲ್ಲ. ಆದರೆ ಕೃತ್ಯದಲ್ಲಿ ಭಾಗಿಯಾದ ಯಾರೊಬ್ಬರನ್ನೂ ನಾವು ಬಿಡುವುದಿಲ್ಲ. ನಮ್ಮ ತನಿಖೆಗೆ ಜಾತಿ – ಧರ್ಮವೆಂಬ ಬಣ್ಣವಿಲ್ಲ ಎಂದು ಹೇಳಿದರು.

ಈ ಹಂತಕರಿಗೆ ಪ್ರವೀಣ್​ ಹೇಗೆ ಟಾರ್ಗೆಟ್​ ಆಗಿದ್ದ ಎನ್ನುವುದು ತನಿಖೆಯಲ್ಲಿ ತಿಳಿಯಬೇಕಿದೆ. ಅಲ್ಲದೆ ಈ ಮೂವರಿಗೆ ಆಶ್ರಯ ನೀಡಿದ್ದು ಯಾರು ಎಂಬುದನ್ನೂ ನಾವು ತಿಳಿದುಕೊಳ್ಳುತ್ತೇವೆ. ಈಗಾಗಲೇ ಪ್ರಕರಣ ಸಂಬಂಧ ಐದಾರು ವಾಹನಗಳನ್ನು ಸೀಜ್​ ಮಾಡಿದ್ದೇವೆ . ಪ್ರಕರಣಕ್ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿದ್ದರೂ ಅವರಿಗೆ ಬಂಧನ ತಪ್ಪಿದ್ದಲ್ಲ ಎಂದು ಮಂಗಳೂರಿನಲ್ಲಿ ಎಡಿಜಿಪಿ ಅಲೋಕ್​ ಕುಮಾರ್ ಎಚ್ಚರಿಕೆ ನೀಡಿದರು.

ಇದನ್ನು ಓದಿ : river fishes : ಕಡಲ ತೀರದಲ್ಲಿ ಮೀನಿನ ಸುಗ್ಗಿ : ರಾತ್ರಿಯಿಡೀ ಮೀನಿಗಾಗಿ ಸಮುದ್ರದಲ್ಲೇ ಕುಳಿತ ಮತ್ಸ್ಯಪ್ರಿಯರು

ಇದನ್ನೂ ಓದಿ : man tried to commit suicide : ಅರುಂಧತಿ ಸಿನಿಮಾದಿಂದ ಪ್ರೇರಣೆ ಪಡೆದು ಯುವಕನ ಹುಚ್ಚಾಟ:ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ

Praveen Nettaru murder case: ADGP Alok Kumar press conference

Comments are closed.