2nd PUC Supplementary Examination : ನಾಳೆಯಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ

ಬೆಂಗಳೂರು : 2nd PUC Supplementary Examination : ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ನಾಳೆಯಿಂದಲೇ ಪರೀಕ್ಷೆ ಆರಂಭಗೊಳ್ಳಲಿದೆ. ಆಗಸ್ಟ್​ 25ರವರೆಗೆ ದ್ವಿತೀಯ ಪಿಯುಸಿ ಕೊನೆಗಳ್ಳಲಿದೆ. ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಪ್ರಶ್ನೆ ಪತ್ರಿಕೆಯ ವಾಹನಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್​ ಅಳವಡಿಸುವುದು ಕಡ್ಡಾಯವಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ವಿತರಣೆ ಮಾಡಲು ಪ್ರತಿ ತಾಲೂಕಿನಲ್ಲಿ ಬಿಇಓ, ಪ್ರಾಂಶುಪಾಲರು ಹಾಗೂ ತಹಶೀಲ್ದಾರ್​​ರನ್ನು ಒಳಗೊಂಡ ಮೂವರು ಸದಸ್ಯರ ತಂಡವನ್ನು ರಚಿಸಲಾಗಿದೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ :

ಆಗಸ್ಟ್​ 12ರಂದು ಕನ್ನಡ, 13ಕ್ಕೆ ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ, 16ಕ್ಕೆ ಹಿಂದಿ, 17ಕ್ಕೆ ಐಚ್ಛಿಕ ಕನ್ನಡ, ರಸಾಯನಶಾಸ್ತ್ರ, ಗಣಿತ, 18ಕ್ಕೆ ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣಶಾಸ್ತ್ರ, ಗೃಹವಿಜ್ಞಾನ, 19ಕ್ಕೆ ರಾಜ್ಯಶಾಸ್ತ್ರ, ಗಣಿತಶಾಸ್ತ್ರ ,ಆಗಸ್ಟ್ 20ಕ್ಕೆ ತರ್ಕಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ, 22ಕ್ಕೆ ಇಂಗ್ಲೀಷ್, 23ಕ್ಕೆ ಅರ್ಥಶಾಸ್ತ್ರ, ಜೀವಶಾಸ್ತ್ರ, 24ಕ್ಕೆ ಇತಿಹಾಸ, ಸಂಖ್ಯಾಶಾಸ್ತ್ರ, 25ಕ್ಕೆ ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಯಾವುದೇ ಕಾರಣಕ್ಕೂ ಪರೀಕ್ಷಾ ಪತ್ರಿಕೆ ಸೋರಿಕೆಯಾಗದಂತೆ ಸಾಕಷ್ಟು ಮುಂಜಾಗ್ರತೆಯನ್ನು ವಹಿಸಲಾಗಿದೆ. ಪ್ರಶ್ನೆಪತ್ರಿಕೆಯನ್ನು ಪರೀಕ್ಷಾ ಕೇಂದ್ರಕ್ಕೆಸಾಗಿಸುವ ವಾಹನಗಳಿಗೆ ಪೊಲೀಸ್​ ಬಂದೋಬಸ್ತ್​ ಇರಲಿದೆ.ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮೊಬೈಲ್​ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್​​ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅನುಮತಿ ಇರುವುದಿಲ್ಲ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್​ ವ್ಯತ್ಯಯ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನು ಓದಿ : man tried to commit suicide : ಅರುಂಧತಿ ಸಿನಿಮಾದಿಂದ ಪ್ರೇರಣೆ ಪಡೆದು ಯುವಕನ ಹುಚ್ಚಾಟ:ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ

ಇದನ್ನೂ ಓದಿ : Praveen Nettaru murder case : ಪ್ರವೀಣ್​ ನೆಟ್ಟಾರು ಹಂತಕರ ಪಿನ್​ ಟು ಪಿನ್ ಮಾಹಿತಿ ನೀಡಿದ ಎಡಿಜಿಪಿ ಅಲೋಕ್​ ಕುಮಾರ್​​

ಇದನ್ನೂ ಓದಿ : Atal Pension Yojana : ಅಟಲ್‌ ಪಿಂಚಣಿ ಯೋಜನೆಯ ನಿಯಮ ಬದಲು: ನೀವೂ ಆ ನಿಯಮದ ಅಡಿಯಲ್ಲಿ ಬರ್‍ತೀರಾ; ಒಮ್ಮೆ ಚೆಕ್‌ ಮಾಡಿ

2nd PUC Supplementary Examination from 12th August PU Board Requests Police Security

Comments are closed.