Jasprit Bumrah meets mother : ತುಂಬಾ ದಿನಗಳ ನಂತರ ತಾಯಿ-ತಂಗಿಯನ್ನು ಭೇಟಿಯಾದ ವೇಗಿ ಜಸ್‌ಪ್ರೀತ್ ಬುಮ್ರಾ

ಮುಂಬೈ: (Jasprit Bumrah meets mother ) ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬಹು ದಿನಗಳ ನಂತರ ತಾಯಿಯನ್ನು ಭೇಟಿ ಮಾಡಿದ್ದಾರೆ. ಕ್ರಿಕೆಟ್ ಕಾರಣಗಳಿಂದ ಬುಮ್ರಾ ಹುಟ್ಟೂರು ಅಹ್ಮದಾಬಾದ್’ನಿಂದ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಪತ್ನಿ ಸಂಜನಾ ಗಣೇಶನ್ ಜೊತೆ ಜಸ್ಪ್ರೀತ್ ಬುಮ್ರಾ ಮುಂಬೈನಲ್ಲಿ ನೆಲೆಸಿದ್ದಾರೆ. ಆದರೆ ಬುಮ್ರಾ ಅವರ ತಾಯಿ ಮತ್ತು ಸಹೋದರಿ ಅಹ್ಮದಾಬಾದ್’ನಲ್ಲೇ ನೆಲೆಸಿದ್ದು, ತುಂಬಾ ದಿನಗಳ ನಂತರ ಕುಟುಂಬ ಸದಸ್ಯರನ್ನು ಬುಮ್ರಾ ಭೇಟಿ ಮಾಡಿದ್ದಾರೆ.

ತಾಯಿ ಹಾಗೂ ತಂಗಿಯನ್ನು ಬುಮ್ರಾ ಭೇಟಿ ಮಾಡಿರುವ ಚಿತ್ರವನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ. 28 ವರ್ಷದ ಬಲಗೈ ವೇಗದ ಬೌಲರ್ ಬುಮ್ರಾ ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಾರೆ.

ಕಳೆದ ಇಂಗ್ಲೆಂಡ್ ಪ್ರವಾಸದ ಬಳಿಕ ವಿಶ್ರಾಂತಿಯಲ್ಲಿದ್ದ ಜಸ್ಪ್ರೀತ್ ಬುಮ್ರಾ ಅವರಿಗೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ವಿಶ್ರಾಂತಿ ನೀಡಲಾಗಿತ್ತು. ಆದರೆ ಬೆನ್ನು ನೋವಿನ ಕಾರಣ ಏಷ್ಯಾ ಕಪ್ ಟಿ20 ಟೂರ್ನಿಗೂ ಬುಮ್ರಾ ಅಲಭ್ಯರಾಗಿದ್ದಾರೆ. ಬುಮ್ರಾ ಅವರ ಬದಲು ಬಲಗೈ ವೇಗಿ ಆವೇಶ್ ಖಾನ್ ಏಷ್ಯಾ ಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಬೆನ್ನು ನೋವಿನಿಂದ ಬಳಲುತ್ತಿರುವ ಕಾರಣ ಬುಮ್ರಾ ವಿಚಾರದಲ್ಲಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಬಿಸಿಸಿಐ ಸಿದ್ಧವಿಲ್ಲ. ಕಾರಣ ಇದೇ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್. ಸಣ್ಣ ಪ್ರಮಾಣದ ಬೆನ್ನು ನೋವು ಕಾಣಿಸಿಕೊಂಡಿರುವ ಕಾರಣ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬುಮ್ರಾ ಪುನಶ್ಚೇತನ ಶಿಬಿರಕ್ಕೆ ಹಾಜರಾಗಲಿದ್ದಾರೆ. ಬೆನ್ನು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡರೆ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲೇ ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧದ ಸೀಮಿತ ಓವರ್’ಗಳ ಸರಣಿಯಲ್ಲಿ ಬುಮ್ರಾ ಆಡಲಿದ್ದಾರೆ.

ಇದನ್ನೂ ಓದಿ :Mumbai Indians: ಮುಂಬೈ ಇಂಡಿಯನ್ಸ್ ಫ್ಯಾಮಿಲಿಗೆ ಮತ್ತಿಬ್ಬರ ಎಂಟ್ರಿ, ಎಂಐ ಎಮಿರೇಟ್ಸ್, ಎಂಐ ಕೇಪ್ ಟೌನ್ ತಂಡಗಳ ಅನಾವರಣ

ಇದನ್ನೂ ಓದಿ : Mumbai Indians: ಮುಂಬೈ ಇಂಡಿಯನ್ಸ್ ಫ್ಯಾಮಿಲಿಗೆ ಮತ್ತಿಬ್ಬರ ಎಂಟ್ರಿ, ಎಂಐ ಎಮಿರೇಟ್ಸ್, ಎಂಐ ಕೇಪ್ ಟೌನ್ ತಂಡಗಳ ಅನಾವರಣ

Jasprit Bumrah meets mother and Sisters

Comments are closed.