Rajashekara Swamiji death: ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ಸ್ವಾಮೀಜಿ ಶವವಾಗಿ ಪತ್ತೆ

ಕೊಳ್ಳೆಗಾಲ: (Rajashekara Swamiji death) ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ರಾಜಶೇಖರ ಸ್ವಾಮೀಜಿ ಅವರು ಕಾವೇರಿ ತೀರದ ವೆಸ್ಲಿ ಸೇತುವೆ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಕಾವೇರಿ ನದಿ ತೀರದಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿಯ ಮೇರೆಗೆ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹ ಸ್ವಾಮೀಜಿ ಅವರದ್ದು ಎಂದು ತಿಳಿದುಬಂದಿದೆ.

ಸುತ್ತೂರು ಜಾತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದ ರಾಜಶೇಖರ ಸ್ವಾಮೀಜಿ ಅವರು ಮತ್ತೆ ಮಠಕ್ಕೆ ಹಿಂದಿರುಗಿ ಬಂದಿರಲಿಲ್ಲ. ಸ್ವಾಮೀಜಿ ಅವರು ಮೊದಲೇ ಅನಾರೋಗ್ಯಪೀಡಿತರಾಗಿದ್ದರು. ಅನಾರೋಗ್ಯ ಪೀಡಿತರಾಗಿದ್ದ ಸ್ವಾಮೀಜಿ ಮಠಕ್ಕೆ ಹಿಂದಿರುಗದಿರುವುದನ್ನು ಕಂಡು ಮಠದಲ್ಲಿದ್ದ ಬೇರೆ ಸ್ವಾಮೀಜಿಗಳು ಅವರಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆದರೂ ಕೂಡ ಸ್ವಾಮೀಜಿ ಅವರು ಪತ್ತೆಯಾಗಿರಲಿಲ್ಲ. ಈ ಕಾರಣಕ್ಕೆ ಪೊಲೀಸರಿಗೆ ದೂರು ನಾಪತ್ತೆ ದೂರು ನೀಡಲಾಗಿತ್ತು.

ಅದೇ ಸಮಯಕ್ಕೆ ಕಾವೇರಿ ನದಿ ಸೇತುವೆಯ ಬಳಿ ಮೃತದೇಹ ಸಿಕ್ಕಿದೆ ಎಂಬ ಮಾಹಿತಿಯ ಮೇರೆಗೆ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಈ ವೇಳೆ ನದಿಯಲ್ಲಿ ಸಿಕ್ಕ ಮೃತದೇಹ ಸ್ವಾಮೀಜಿ ಅವರದ್ದೇ ಎಂದು ತಿಳಿದುಬಂದಿದೆ. ಕೂಡಲೇ ಮಠದವರಿಗೆ ಹಾಗೂ ಸ್ವಾಮೀಜಿ ಅವರ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಸ್ವಾಮೀಜಿ ಅವರಿಗೆ ಅನಾರೋಗ್ಯದ ಸಮಸ್ಯೆ ಇರುವುದಾಗಿ ಸ್ವಾಮೀಜಿ ಅವರ ಸಹೋದರ ತಿಳಿಸಿದ್ದಾರೆ.

ಅನಾರೋಗ್ಯವಿದ್ದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ನೀರಿನಲ್ಲಿ ಮುಳುಗಿ ಸತ್ತಿರಬಹುದು ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿದಸಿದ್ದಾರೆ. ಇದಾದ ಬಳಿಕ ಮೃತದೇಹವನ್ನು ಸಂಬಂಧಿಸಿದವರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Black magic crime case: ಸೊಸೆಗೆ ಸತ್ತ ಮಾನವ ಮೂಳೆಗಳ ಪುಡಿಯನ್ನು ತಿನ್ನುವಂತೆ ಒತ್ತಾಯ: ಪತಿ, ಅತ್ತೆ ವಿರುದ್ದ ದೂರು

ಇದನ್ನೂ ಓದಿ : Bomb threat to plane: ಗೋವಾ-ಮಾಸ್ಕೋ ವಿಮಾನಕ್ಕೆ ಬಾಂಬ್ ಬೆದರಿಕೆ: ಉಜ್ಬೇಕಿಸ್ತಾನ್‌ದಲ್ಲಿ ತುರ್ತು ಭೂಸ್ಪರ್ಶ

ಇದನ್ನೂ ಓದಿ : Truck-car collision: ನಿಂತಿದ್ದ ಟ್ರಕ್‌ಗೆ ಕಾರು ಢಿಕ್ಕಿ : 3 ಸಾವು, 2 ಮಂದಿಗೆ ಗಾಯ

Rajashekara Swamiji death: Swamiji, who went missing three days ago, was found dead

Comments are closed.