World Asthma Day 2022 : ವಾಯುಮಾಲಿನ್ಯದಿಂದ ಆಸ್ತಮಾ ಹೇಗೆ ಹೆಚ್ಚಾಗುತ್ತದೆ ಎಂಬುದು ನಿಮಗೆ ಗೊತ್ತಾ?

World Asthma Day 2022: ಆಸ್ತಮಾ, ಇದು ಶ್ವಾಸಕೋಶದ ಒಂದು ಖಾಯಿಲೆ. ಇದು ಶ್ವಾಸಕೋಶಕ್ಕೆ ವಾಯು ಪೂರೈಸುವ ವಾಯುಮಾರ್ಗಗಳು ಕಿರಿದಾದಾಗ ಉಂಟಾಗುತ್ತದೆ. ಕೆಮ್ಮುವಿಕೆ, ಉಬ್ಬಸ, ಉಸಿರಾಟದ ಕೊರತೆ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಆಸ್ತಮಾಕ್ಕೆ ಸರಿಯಾದ ಸಮಯದಲ್ಲಿ ಚಿಕತ್ಸೆ ಸಿಗದಿದ್ದರೆ ಶ್ವಾಸಕೋಶವೇ ಹಾನಿಗೊಳಗಾಗಬಹುದು. ಆಸ್ತಮಾವು ವಾತಾವರಣ ಮತ್ತು ಅನುವಂಶೀಯತೆಯಿಂದ ಕಾಣಿಸುತ್ತದೆ.

ವಾಯು ಮಾಲಿನ್ಯದಿಂದ ಆಸ್ತಮಾ ಬಾಧಿಸುವುದಾದರೂ ಹೇಗೆ?

ಓಝೋನ್‌ ಮೂಲಕ :
ವಾಯುಮಾಲಿನ್ಯವು ಶ್ವಾಸಕೋಶ ಮತ್ತು ಶ್ವಾಸನಾಳಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಓಝೋನ್‌ ಸಂಗ್ರಹವು ಆಸ್ತಮಾ ಬಾಧಿಸುವಂತೆ ಮಾಡುತ್ತದೆ.

ವಾಯುವಿನಲ್ಲಿರುವ ಕಣಗಳ ಮೂಲಕ :
ಉಸಿರಾಡುವಾಗ ವಾಯುವಿನ ಕಣಗಳು ಅಂದರೆ ಕಲುಷಿತ ಧೂಳು ಆಗಾಗ ಮೂಗಿನ ಮೂಲಕ ಶ್ವಾಸಕೋಸಕ್ಕೆ ಹೋಗುತ್ತವೆ ಮತ್ತು ಅವುಗಳು ಅಲ್ಲಿಯೇ ಸಂಗ್ರಹಗೊಳ್ಳುತ್ತವೆ. ಆಸ್ತಮಾ ರೋಗಿಗಳಲ್ಲಿ ಈ ಕಣಗಳು ಹೆಚ್ಚಾಗಿ ಕಾಣಿಸುತ್ತದೆ. ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ. ಕೆಲಮೊಮ್ಮೆ ವಾಸಿಸುವ ಪ್ರದೇಶದ ಗಾಳಿಯ ಗುಣಮಟ್ಟವು ಕಳಪೆಯಾಗಿದ್ದಾಗ ಮತ್ತು ವಾಯು ಮಾಲಿನ್ಯವು ಅತೀ ಹೆಚ್ಚಿನ ಪ್ರಮಾಣದಲ್ಲಿದ್ದಾಗ, ಶ್ವಾಸಕೋಶದ ಕಾರ್ಯ ಮತ್ತು ಉಸಿರಾಟದ ಮೇಲೆ ಪರಿಣಾಮ ಬೀರುವುದನ್ನು ತಪ್ಪಿಸಲು ಕೆಲವು ಅಭ್ಯಾಸಗಳನ್ನು ರೂಡಿಸಿಕೊಳ್ಳುವುದು ಉತ್ತಮ.

  • ಅಧಿಕ ವಾಯುಮಾಲಿನ್ಯದ ಸಮಯದಲ್ಲಿ ರಿಲೀವರ್‌ ಇನ್ಹೇಲರ್‌ ತೆಗೆದುಕೊಳ್ಳುವುದು ಸೂಕ್ತ.
  • ನೀವು ವಾಸಿಸುವ ಪ್ರದೇಶದ ಮಾಲಿನ್ಯ ಎಷ್ಟಿದೆ ಎಂದು ಪರಿಶೀಲಿಸಿಕೊಳ್ಳಿ.
  • ಮಾಲಿನ್ಯದ ಹಾಟ್‌ಸ್ಪಾಟ್‌ಗಳಾದ ಪ್ರಮುಖ ರಸ್ತೆಗಳು, ಜಂಕಷನ್‌, ಬಸ್‌ ಸ್ಟಾಂಡ್‌, ಕಾರ್‌ ಪಾರ್ಕ್‌ ಮುಂತಾದದವುಗಳಿಂದ ಆದಷ್ಟು ದೂರವಿರಿ.
  • ಸ್ವಲ್ಪ ಅಥವಾ ದೀರ್ಘಕಾಲದಿಂದ ಶ್ವಾಸಕೋಶದ ಅನಾರೋಗ್ಯ ಹೊಂದಿರುವ ರೋಗಿಗಳಿಗೆ ವೈದ್ಯರಿಂದ ಚಿಕಿತ್ಸೆ ಕೊಡಿಸಿ. ಒಂದು ವೇಳೆ
    ಗಂಭೀರ ಪರಿಸ್ಥತಿಯಿದ್ದರೆ ಅಂತಹವರನ್ನು ಆಸ್ಪತ್ರೆಗೆ ದಾಖಲು ಮಾಡಿ.
  • ಸಮಯಕ್ಕೆ ಸರಿಯಾಗಿ ಔಷಧಗಳನ್ನು ತೆಗೆದುಕೊಳ್ಳಿ.
  • ಆರೋಗ್ಯಕರ ಆಹಾರ ತಿನ್ನಿ.
  • ಸ್ಟೀಮ್‌ ತೆಗೆದುಕೊಳ್ಳಿ.
  • ಮನೆಯೊಳಗೆ ಸ್ವಚ್ಛ ಗಾಳಿ ಬರುವಂತೆ ನೋಡಿಕೊಳ್ಳಿ.
  • ಅವಶ್ಯಕತೆ ಇದ್ದರೆ ಮಾತ್ರು ಹೊರಗಡೆ ಹೋಗಿ.
  • ಹೊರಗಡೆ ಹೋಗುವಾಗ ಯಾವಾಗಲೂ ಮಾಸ್ಕ್‌ ತೊಡಿ.

ಈ ಕೆಳಗಿನ ಕೆಲವು ಬ್ರೀತಿಂಗ್‌ ವ್ಯಾಯಾಮ ಮಾಡಿ, ಆಸ್ತಮಾದಿಂದ ದೂರವಿರಿ:

  • ಭಸ್ತ್ರಿಕ ಪ್ರಾಣಾಯಾಮ
  • ಭ್ರಮರಿ ಪ್ರಾಣಾಯಾಮ
  • ಖಂಡ ಪ್ರಾಣಾಯಾಮ
  • ಧನುರ್‌ ಆಸನ
  • ಊಸ್ಟ್ರಾಸನ
  • ಅರ್ಧ ಚಂದ್ರಾಸನ
  • ಚಕ್ರಾಸನ

ಇದನ್ನೂ ಓದಿ : Beat the Heat : ಬಿಸಿಲಿನ ಬೇಗೆ ನೀಗಿಸಲು ಉತ್ತಮ ತಂಪು ತಂಪು ಎಳನೀರು ಮತ್ತು ಮಜ್ಜಿಗೆ!

ಇದನ್ನೂ ಓದಿ : Turmeric Health Tips : ಅರಿಶಿನವೆಂಬ ಸಂಜೀವಿನಿಯ ಬಗ್ಗೆ ನಿಮಗೆಷ್ಟು ಗೊತ್ತು…?

(World Asthma Day 2022 How air pollution causes asthma)

Comments are closed.