Rape Case : ಅತ್ಯಾಚಾರ ಸಂತ್ರಸ್ತೆಯ ವಯಸ್ಸು ನಿರ್ಧಾರಕ್ಕೆ ಶಾಲೆ ದಾಖಲೆ ಸೂಕ್ತ : ಹೈಕೋರ್ಟ್

ಕಲಬುರಗಿ : ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು (Rape Case)ಆಗಾಗ ವರದಿಯಾಗುತ್ತಲೇ ಇದೆ. ಅತ್ಯಾಚಾರ ಸಂತ್ರಸ್ತರ ವಯಸ್ಸಿನ ನಿರ್ಧಾರ ಮಾಡುವ ವಿಚಾರದಲ್ಲಿ ವೈದ್ಯರ ವೈದ್ಯಕೀಯ ಅಭಿಪ್ರಾಯಗಳೇ ಪ್ರಮುಖವಾಗುತ್ತಿದೆ. ಆದ್ರೀಗ ವೈದ್ಯರ ವರದಿಗಿಂತ ಶಾಲಾ ಪ್ರಮಾಣಪತ್ರ ಮುಖ್ಯ ಅಂತಾ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಘಟನೆ ವಿವರ :
ವಿವಾಹಿತ ವ್ಯಕ್ತಿಯೊಬ್ಬ ತನ್ನದೇ ಗ್ರಾಮದ ಅಪ್ರಾಪ್ತೆ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದು, ಘಟನೆ ಬಹಿರಂಗ ಪಡಿಸದಂತೆ ಬೆದರಿಕೆ ಹಾಕಿರುತ್ತಾನೆ. ಸಂತ್ರಸ್ತೆ ಗರ್ಭಿಣಿಯಾದಾಗ ಘಟನೆ ಬಹಿರಂಗವಾಗಿರುತ್ತದೆ. ಹೀಗಾಗಿ ಸಂತ್ರಸ್ತೆಯ ಪೋಷಕರು ಅತ್ಯಾಚಾರ, ಬೆದರಿಕೆ ಮತ್ತು ಮನೆ ಅತಿಕ್ರಮ ಪ್ರವೇಶ ಆರೋಪದ ಮೇಲೆ ದೂರನ್ನು ದಾಖಲಿಸಿರುತ್ತಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳಿಯ ಪೋಕ್ಸೋ ನ್ಯಾಯಲಯ ಆರೋಪಿಯನ್ನು ಖುಲಾಸೆಗೊಳಿಸಿದ್ದ ಆದೇಶ ರದ್ದು ಕೋರಿ ಸರಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆರೋಪಿಯ ಪರ ವಕೀಲರು, ಆರೋಪಿಯುಸಂತ್ರಸ್ತೆಯ ಸಮ್ಮತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಘಟನೆ ನಡೆದಾಗ ಸಂತ್ರಸ್ತೆ ವಯಸ್ಕಳಾಗಿದ್ದಳು. ತನ್ನ ವಯಸ್ಸು 19 ವರ್ಷ ಎಂದು ಸಂತ್ರಸ್ತೆ ಹೇಳಿಕೆ ನೀಡಿರುವುದಾಗಿ ಸಂತ್ರಸ್ತೆಯ ವೈದ್ಯಕೀಯ ತಪಾಸಣೆ ನಡೆಸಿರುವ ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

15 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಕಲಬುರಗಿ ಕೇರೂರ ತಾಲೂಕಿನ ನಿವಾಸಿ ಶರಣು(34)ಎಂಬಾತನನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಎಚ್‌.ಬಿ ಪ್ರಭಾಕರ ಶಾಸ್ತ್ರಿ ಅವರ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿರುತ್ತದೆ.

ಘಟನೆ ಸಂಭವಿಸಿದಾಗ ಸಂತ್ರಸ್ತೆ ವಯಸ್ಕಳಾಗಿದ್ದಳು ಎಂಬ ಆರೋಪಿಯ ವಾದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಪೀಠ, ಮೆಟ್ರಿಕ್ಯುಲೇಷನ್‌ ಅಥವಾ ಅದಕ್ಕೆ ಸಮಾನವಾದ ಪ್ರಮಾಣ ಪತ್ರ ಅಥವಾ ಶಾಲೆ, ನಗರ ಪಾಲಿಕೆ, ಪೌರಾಡಳಿತ ಪ್ರಾಧಿಕಾರ ಅಥವಾ ಪಂಚಾಯಿತಿ ನೀಡುವ ಜನನ ಪ್ರಮಾಣ ಪತ್ರ ಲಭ್ಯವಿಲ್ಲದೇ ಇದ್ದಾಗ ಮಾತ್ರ ಅಪ್ರಾಪ್ತರ ಅಥವಾ ಮಹಿಳೆ ವಯಸ್ಸು ನಿರ್ಧರಿಸಲು ವೈದ್ಯಕೀಯ ಅಭಿಪ್ರಾಯ ಕೋರಲಾಗುತ್ತದೆ ಎಂದು ನ್ಯಾಯಪೀಠ ತಿಳಿಸಿರುತ್ತದೆ.

ಆಸ್ಪತ್ರೆಯ ವೈದ್ಯಕೀಯ ದಾಖಲೆಗಳಲ್ಲಿ ಆಕೆ ನಮೂದಿಸಿರುವ ಹೆಸರು ಹಾಗೂ ವಯಸ್ಸನ್ನು ಸತ್ಯ ಎನ್ನುವುದಾಗಿ ಒಪ್ಪಬೇಕು, ಯಾಕೆಂದರೆ ಆಕೆಯ ವಯಸ್ಸನ್ನು ನಿರ್ಧರಿಸಲು ಇರುವುದು ಅದೊಂದೆ ಆಧಾರವಾಗಿದೆ ಎಂದು ಆರೋಪಿ ಹೇಳುತ್ತಾನೆ. ಆದರೆ ಸಂತ್ರಸ್ತೇ 8ನೇ ತರಗತಿಯವರೆಗೆ ಶಿಕ್ಷಣವನ್ನು ಪಡೆದಿರುತ್ತಾರೆ. ತನ್ನ ಸಾಕ್ಷ್ಯದಲ್ಲಿ ಜನ್ಮ ದಿನಾಂಕದ ಬಗ್ಗೆ ಮಾಹಿತಿ ನೀಡದಿದ್ದರೂ ವಿಚಾರಣಾ ನ್ಯಾಯಾಲಯದಲ್ಲಿ ತಾನು ಅಪ್ರಾಪ್ತೆ ಎಂಬುದಾಗಿ ಸ್ವತಃ ತಿಳಿಸಿದ್ದಾರೆ. ಘಟನೆ ನಡೆದಾಗ ತಾನು ವಯಸ್ಕಳಾಗಿದ್ದೆ ಎಂಬ ಸಂಗತಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾಳೆ ಎಂದು ನ್ಯಾಯಪೀಠ ತಿಳಿಸಿರುತ್ತದೆ.

ಇದನ್ನೂ ಓದಿ : Rape incident : 70 ರ ವೃದ್ದೆ ಮೇಲೆ 28 ರ ಯುವಕನಿಂದ ಅತ್ಯಾಚಾರ

ಇದನ್ನೂ ಓದಿ : Accident – 4 died : ಆಟೋ ಮೇಲೆ ಮರಳು ಡಂಪರ್ ಪಲ್ಟಿ ; 3 ವಿದ್ಯಾರ್ಥಿಗಳು ಸೇರಿ 4 ಮಂದಿ ಸಾವು

ಇದನ್ನೂ ಓದಿ : The secret of Chandrasekhar’s death : ಪೊಲೀಸರ ಕೈ ಸೇರಿದ ಡಯಾಟಮ್ ವರದಿ : ಬಯಲಾಗುತ್ತಾ ಹೊನ್ನಾಳಿ ಚಂದ್ರಶೇಖರ್ ಸಾವಿನ ರಹಸ್ಯ ?

ಅಲ್ಲದೇ ಸಂತ್ರಸ್ತೆ ಓದಿರುವ ಶಾಲೆಯ ಮುಖ್ಯೋಪಾಧ್ಯಾಯರು ನೀಡಿರುವ ಪ್ರಮಾಣ ಪತ್ರದಲ್ಲಿ ಸಂತ್ರಸ್ತೆಯೇ ತನ್ನ ಜನನ ದಿನಾಂಕದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ ಎನ್ನುವುದರ ಬಗ್ಗೆ ಅನುಮಾನ ಪಡಬಾರದು. ವೈದ್ಯಕೀಯ ದಾಖಲೆಗಳಿಂದ ಶಾಲಾ ಪ್ರಾಧಿಕಾರವು ನೀಡಿರುವ ಪ್ರಮಾಣಪತ್ರವು ಹೆಚ್ಚಿನ ಆದ್ಯತೆ ಹೊಂದಿರುತ್ತದೆ ಎಂದು ತಿಳಿಸಿದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿ, ಆರೋಪಿಗೆ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ.20 ಸಾವಿರ ದಂಡ ವಿಧಿಸಬೇಕಾಗಿದೆ. ಅಷ್ಟೇ ಅಲ್ಲದೇ ಘಟನೆ ವೇಳೆಯಲ್ಲಿ ಸಂತ್ರಸ್ತೆ ಅಪ್ರಾಪ್ತಳಾಗಿದ್ದು, ಸಂತ್ರಸ್ತೆ ಸಮ್ಮತಿಯಿಂದ ಘಟನೆ ನಡೆದಿದ್ದರೆ, ಸರಕಾರಿ ಅಭಿಯೋಜಕರು ಅದು ಕಾನೂನಿನಡಿಯಲ್ಲಿ ಮಾನ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

Rape Case: School records are relevant for deciding age of rape victim: High Court

Comments are closed.