ಹಾಸನ : ರೆಸಾರ್ಟ್ ವೊಂದರಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು 130 ಯುವಕ, ಯುವತಿಯರನ್ನು ಬಂಧಿಸಿದ ಘಟನೆ ಹಾಸನ ಜಿಲ್ಲೆಯ ಆಲೂರಿನಲ್ಲಿ ನಡೆದಿದೆ.

ಆಲೂರಿನ ನಂದಿಪುರ ಎಸ್ಟೇಟ್ ಮೋಟಾರ್ ಸೈಕಲ್ ರೆಸಾರ್ಟ್ ನಲ್ಲಿ ರಾತ್ರಿ ರೇವ್ ಪಾರ್ಟಿ ನಡೆಯುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಅವರ ನೇತೃತ್ವದಲ್ಲಿ ದಾಳಿ ನಡೆಸಿ 130 ಯುವಕ-ಯುವತಿಯರನ್ನು ಬಂಧಿಸಲಾಗಿದೆ.

ಬೆಂಗಳೂರು, ಮಂಗಳೂರು, ಗೋವಾದಿಂದ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.ಕರ್ಫ್ಯೂ ಜಾರಿ ಹಿನ್ನೆಲೆ ಯಲ್ಲಿ ವಾಹನಗಳ ಮೇಲೆ ‘ತುರ್ತು ಸೇವೆ’ ಬೋರ್ಡ್ ಹಾಕಿಕೊಂಡು ಸಂಚರಿಸಿದ್ದರು ಎನ್ನಲಾಗುತ್ತಿದೆ. ಮದ್ಯಪಾನ, ಗಾಂಜಾ ಸೇವನೆ ಯೊಂದಿಗೆ ಡಿ.ಜೆ ಸೌಂಡ್ ಸಿಸ್ಟಂ ಬಳಸಿ ಪಾರ್ಟಿ ನಡೆಸಲಾಗುತ್ತಿತ್ತು. ಪಾರ್ಟಿಯಲ್ಲಿ ಬಳಕೆ ಮಾಡಿದ್ದ ಗಾಂಜಾ, ಅಫೀಮು ಹಾಗೂ ಮದ್ಯ, ಐಷಾರಾಮಿ ಕಾರು ಮತ್ತು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಪಾರ್ಟಿಯಲ್ಲಿ ಭಾಗಿಯಾದ ಪ್ರತಿಯೊಬ್ಬರ ರಕ್ತ ಪರೀಕ ಮಾಡಲಾಗಿದೆ. ಎಸ್ಟೇಟ್ ಮಾಲೀಕ ಗಗನ್ ಎಂಬಾತನನ್ನು ಬಂಧಿಸಲಾಗಿದ್ದು, ಪಾರ್ಟಿ ಆಯೋಜಕ ನಾಪತ್ತೆಯಾಗಿದ್ದಾನೆ.

ಅನ್‌ಲೈನ್ ಬುಕ್ಕಿಂಗ್ ಮೂಲಕ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಯುವಕ, ಯುವತಿಯರ ಜೊತೆಗೆ ದಂಪತಿಗಳು ಕೂಡ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.