ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕಾರ್ಪೋರೇಟ್​ ಜಿಹಾದ್​ : 7 ಮಂದಿ ಆರೋಪಿಗಳ ಬಂಧನ

ದೇಶಾದ್ಯಂತ ಲವ್​ಜಿಹಾದ್​ ಪ್ರಕರಣಗಳು ಮಿತಿಮೀರುತ್ತಿರುವ ಬೆನ್ನಲ್ಲೇ ಇದೀಗ ಕಾರ್ಪೋರೇಟ್​ ಜಿಹಾದ್​ ಎನ್ನುವ ಹೊಸ ಆಘಾತಕಾರಿ ಬೆಳವಣಿಗೆಯೊಂದು ಐಟಿ ಕಂಪನಿಗಳನ್ನು ಪ್ರವೇಶಿಸಿದ್ದು ಆತಂಕಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ನಾಸಿಕ್​ನಲ್ಲಿರುವ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಹಿಂದೂ ಯುವತಿಯರನ್ನು ಗುರಿಯಾಗಿಸಿ ಕಾರ್ಪೋರೇಟ್​ ಜಿಹಾದ್​ ಮಾಡುವ ಪ್ರಯತ್ನ ಮಾಡಲಾಗಿದೆ. ಹಿಂದೂ ಹೆಣ್ಣು ಮಕ್ಕಳಿಗೆ ಮುಂಬಡ್ತಿ ಆಮಿಷ ತೋರಿಸಿ ಬಲವಂತದ ಮತಾಂತರ, ಲೈಂಗಿಕ ಕಿರುಕುಳ ಹಾಗೂ ಗೋಮಾಂಸ ತಿನ್ನುವಂತೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪ ಎದುರಾಗಿದೆ.

ನಾಸಿಕ್​ ಸಾತ್ಪುರ ಎಂಬಲ್ಲಿರುವ ಪ್ರತಿಷ್ಠಿತ ಬಿಪಿಓ ಐಟಿ ಕಂಪನಿಯೊಂದರಲ್ಲಿ ಮುಸ್ಲಿಂ ಮ್ಯಾನೇಜರುಗಳ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಿಂದೂ ಯುವತಿಯರು ಈ ಕಿರುಕುಳ ಅನುಭವಿಸಿದ್ದಾರೆ. ಈ ಪ್ರಕರಣ ಸಂಬಂಧ ಓರ್ವಮಹಿಳೆಯೂ ಸೇರಿದಂತೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯೋಗದಲ್ಲಿ ಬಡ್ತಿ ಹಾಗೂ ಸಂಬಳ ಏರಿಕೆ ಮಾಡಬೇಕು ಎಂದರೆ ನಮಾಜ್​ ಮಾಡಬೇಕು ಹಾಗೂ ಗೋಮಾಂಸ ತಿನ್ನಬೇಕು ಎಂದು ಕಿರುಕುಳ ನೀಡಲಾಗುತ್ತಿತ್ತು. ಲೈಂಗಿಕ ಹಿಂಸೆ ಕೂಡ ನೀಡುತ್ತಿದ್ದರು ಎಂದು ಯುವತಿಯರು ಆರೋಪಿಸಿದ್ದಾರೆ. ಈ ಪ್ರಕರಣವನ್ನು ಬಿಜೆಪಿ ಮುಖಂಡರು ಕಾರ್ಪೋರೇಟ್​ ಜಿಹಾದ್​ ಎಂದು ಕರೆದಿದ್ದಾರೆ.

ಇದನ್ನೂ ಓದಿ: ಡೇಟಿಂಗ್​ ಆ್ಯಪ್​ ಬಳಸುವವರೇ ಎಚ್ಚರ ..ಎಚ್ಚರ..! ಮದುವೆಯಾಗುವುದಾಗಿ ನಂಬಿಸಿ ಟೆಕ್ಕಿಂಗ್​ ಪಂಗನಾಮ

ಇನ್ನು ಬಂಧಿತರಾದ 7 ಆರೋಪಿಗಳನ್ನು ಆಸಿಫ್ ಅನ್ಸಾರಿ, ಶಫಿ ಶೇಖ್, ಶಾಹ್‌ರುಖ್ ಖುರೇಶಿ, ರಜಾ ಮೆಮನ್, ತೌಸೀಫ್ ಅಟ್ಟಾರ್, ದಾನಿಶ್ ಶೇಖ್ ಎಂದು ಗುರುತಿಸಲಾಗಿದೆ. ಮಹಿಳಾ ಎಚ್​ಆರ್​ ಹೆಸರು ಬಹಿರಂಗಗೊಂಡಿಲ್ಲ. ಈ ಎಲ್ಲಾ ಆರೋಪಿಗಳ ವಿರುದ್ಧ 9 ಎಫ್​ಐಆರ್​ ದಾಖಲಾಗಿದೆ. ಈ ಬಂಧಿತ ಆರೋಪಿಗಳು ಹಿಂದೂ ದೇವರನ್ನು ಅವಮಾನಿಸುತ್ತಿದ್ದರು ಎನ್ನಲಾಗಿದೆ. ಈಶ್ವರ ಲಿಂಗವನ್ನು ಜನನಾಂಗಕ್ಕೆ ಹೋಲಿಸುವುದು, ಶ್ರೀ ಕೃಷ್ಣನನ್ನ ಸ್ತ್ರೀ ಲೋಲ ಎಂದು ಕರೆಯುವುದು, ದ್ರೌಪದಿ ಓರ್ವ ವೇಶ್ಯೆ ಎಂದೆಲ್ಲ ಜರಿಯುತ್ತಿದ್ದರು ಎನ್ನಲಾಗಿದೆ. 2022ರಿಂದ ಈ ಕಂಪನಿಯಲ್ಲಿ ಇಂತಹ ಕಿರುಕುಳ ಆರಂಭಗೊಂಡಿದ್ದು 2026ರವೆಗೂ ಇದು ಮುಂದುವರಿದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories