ಬೆಂಗಳೂರು : ಪುಡಿರೌಡಿಗಳಿಬ್ಬರು ಮಾರಕಾಸ್ತ್ರ ಹಿಡಿದು ಬಾರಿನೊಳಗೆ ನುಗ್ಗಿದ್ದು, ಮಾತ್ರವಲ್ಲದೇ ಗ್ರಾಹಕರಿಗೆ ಬೆದರಿಕೆಯೊಡ್ಡಿದ ಘಟನೆ ಬೆಂಗಳೂರಿನ ಇಟ್ಟಮಡು ಎಂಬಲ್ಲಿ ನಡೆದಿದೆ.
ನಿನ್ನೆ ಸಂಜೆ ಸುಮಾರು 7.30ರ ಸುಮಾರಿಗೆ ಇಬ್ಬರು ರೌಡಿಗಳು ಇಟ್ಟಮಡು ಅಲ್ಲಿರುವ ಎಸ್ಎಲ್ವಿ ಬಾರ್ ಗೆ ನುಗ್ಗಿದ್ದಾರೆ. ಈ ವೇಳೆಯ ಬಾರಿನಲ್ಲಿ ಕುಳಿತಿದ್ದ ಗ್ರಾಹಕರ ಬಳಿಗೆ ತೆರಳಿ ಬೆದರಿಕೆಯೊಡ್ಡಿದ್ದಾರೆ. ನಂತರ ವೇರವಾಗಿ ಕ್ಯಾಶ್ಯರ್ ಬಳಿಗೆ ತೆರಳಿ ಮಾರಕಾಸ್ತ್ರವನ್ನು ತೋರಿಸಿ ಬೆದರಿಸಿದ್ದಾರೆ.
ಅಷ್ಟೇ ಅಲ್ಲದೇ ಪಕ್ಕದ ಬಾರ್ ಗೆ ನುಗ್ಗಿದ ರೌಡಿಗಳು ಅಲ್ಲಿಯೇ ಇದ್ದ ಗ್ಲಾಸ್ವೊಂದನ್ನು ಒಡೆದು ಹಾಕಿದ್ದಾರೆ. ಪುಡಿರೌಡಿಗಳ ಅಟ್ಟಹಾಸ ಇದೀಗ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.