Sunny leone: ಓಟಿಟಿ ಬಿಗ್ ಬಾಸ್ ಗೆ ಹಾಟ್ ಬಾಂಬ್ ಎಂಟ್ರಿ: ಮಾದಕತೆ ಹೆಚ್ಚಿಸಲು ಬರ್ತಿದ್ದಾರೆ ಸನ್ನಿ ಲಿಯೋನ್

ಹೆಸರಿನಿಂದಲೇ ಪಡ್ಡೆಹೈಕಳ ಮೈ ಬಿಸಿ ಹೆಚ್ಚಿಸುವ ಮಾದಕ ಸುಂದರಿ ಸನ್ನಿ ಲಿಯೋನ್ ಈಗಾಗಲೇ ಹಾಟ್ ಹಾಟ್ ರಿಯಾಲಿಟಿ ಶೋ ಎನ್ನಿಸಿರುವ ಓಟಿಟಿ ಬಿಗ್ ಬಾಸ್ ಅಂಗಳಕ್ಕೆ ಕಾಲಿರಿಸಲಿದ್ದು, ಶೋದ ಮಾದಕತೆ ಮತ್ತಷ್ಟು ಹೆಚ್ಚುವ ನೀರಿಕ್ಷೆ ಇದೆ.

ಕೇವಲ ವೂಟ್ ನಲ್ಲಿ ಮಾತ್ರ ಪ್ರಸಾರವಾಗುತ್ತಿರುವ ಕಾರಣಕ್ಕೆ ಬಿಗ್ ಬಾಸ್ ರಿಯಾಲಿಟಿ ಶೋ ಸೆನ್ಸಾರ್ ಹಂಗಿಲ್ಲದೇ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ.ಇದೀಗ ಈ ಶೋಗೆ ಸನ್ನಿ ಲಿಯೋನ್ ಎಂಟ್ರಿ ಕೊಡಲಿರೋದರಿಂದ ಶೋ ಮತ್ತಷ್ಟು ರಂಗೇರಲಿದೆ.

ಪ್ರೀತಿ ಹಂಚುವ ಕಾನ್ಸೆಪ್ಟ್ ಜೊತೆ ಸನ್ನಿ ಬಿಗ್ ಬಾಸ್ ಮನೆಗೆ ಬರ್ತಿದ್ದು, ಈ ವಿಚಾರವನ್ನು ಸ್ವತಃ ಸನ್ನಿ ಲಿಯೋನ್ ಖಚಿತಪಡಿಸಿದ್ದಾರೆ. ಆದರೆ ಸನ್ನಿ ಲಿಯೋನ್ ಶೋಗೆ ತಮ್ಮ ಪತಿಯೊಂದಿಗೆ ಬರ್ತಾರೆ ಅನ್ನೋ ಸುದ್ದಿ ಇತ್ತು. ಈಗ ಈ ಸುದ್ದಿ ಸುಳ್ಳಾಗಿದ್ದು, ನೀಲಿತಾರೆ ಸನ್ನಿ ಲಿಯೋನ್ ಒಬ್ಬರೇ ಓಟಿಟಿ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಲಿದ್ದಾರೆ.

ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಮಾದಕ,ಮೋಹಕ,ಅಶ್ಲೀಲ ಎನ್ನಿಸುವ ಸಂಗತಿಗಳೇ ಹೆಚ್ಚಿದ್ದು, ಸನ್ನಿ ಎಂಟ್ರಿಯಿಂದ ಎಲ್ಲವೂ ಮತ್ತಷ್ಟು ಅತಿ ಎನ್ನಿಸಿದರೇ ಅಚ್ಚರಿಯೇನಿಲ್ಲ. ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ, ರಾಕೇಶ್ ಬಾಪಟ್, ಕಾಂಟ್ರಾವರ್ಸಿ ಗಾಯಕಿ ನೇಹಾ ಭಾಸಿನ್, ದಿವ್ಯಾ ಅಗರವಾಲ್ ಸದಾ ಸುದ್ದಿಯಲ್ಲಿದ್ದು, ಶಮಿತಾ ಶೆಟ್ಟಿ ಒಂದು ಮುತ್ತಿನ ಕತೆ ಮೂಲಕ ಚರ್ಚೆಗೊಳಗಾಗಿದ್ದಾರೆ.

ಸನ್ನಿ ಲಿಯೋನ್ ಬಿಗ್ ಬಾಸ್ ಜೊತೆ ಹಳೆಯ ನಂಟು ಹೊಂದಿದ್ದು, ನೀಲಿಚಿತ್ರಗಳಲ್ಲಿ ನಟಿಸುವುದನ್ನು ತೊರೆದ ಬಿಗ್ ಬಾಸ್ ಸೀಸನ್ 5 ರ ಮೂಲಕ ಕಿರುತೆರೆಗೆ ಕಾಲಿರಿಸಿದ್ದರು. ಬಳಿಕ ಹಲವು ಹಿಂದಿ ಸಿನಿಮಾಗಳಲ್ಲಿ ಸನ್ನಿ ಲಿಯೋನ್ ನಟಿಸಿದ್ದಾರೆ.  

Sunny Leone on entering Bigg Boss OTT house.

Comments are closed.