Pistachios : ಪಿಸ್ತಾ : ಲಘು ಉಪಹಾರಕ್ಕೆ ಹೀಗೆ ಒಂದು ಸಣ್ಣ ಬದಲಾವಣೆ ಮಾಡಿಕೊಳ್ಳಿ

ನಮ್ಮ ದೇಶದಲ್ಲಿ ಕರಿದ ಕುರುಕಲು ತಿಂಡಿಗಳು (Snacks) ಮತ್ತು ಅದರ ಜೊತೆಗಿನ ಚಹಾವೆಂದರೆ (Tea) ಎಲ್ಲೆಲ್ಲೂ ಹೆಸರುವಾಸಿ. ಚಿವ್ಡಾ, ಲಚ್ಚಾ, ನಮ್ಕೀನ್‌ಗಳು, ಪಕೋಡಾ ಮತ್ತು ಸಮೋಸಾ ಹೀಗೆ ತಿಂಡಿಗಳ ಪಟ್ಟು ಬೆಳೆಯುತ್ತಲೇ ಹೋಗುತ್ತದೆ. ಆದರೆ ಈ ಎಲ್ಲಾ ತಿಂಡಿಗಳು ನಮ್ಮ ಆರೋಗ್ಯಕ್ಕೆ ಉತ್ತಮವಾದುದಲ್ಲ. ಪ್ರತಿನಿತ್ಯ ಈ ರೀತಿಯ ಕರಿದ ತಿಂಡಿಗಳನ್ನು ಲಘು ಉಪಹಾರದ ಸಮಯದಲ್ಲಿ ಮೆಲ್ಲುವುದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಈ ಹವ್ಯಾಸಗಳು ನಿಮ್ಮ ಕಟ್ಟು ನಿಟ್ಟಿನ ಡಯಟ್‌ನ ಹಾದಿಯನ್ನೂ ತಪ್ಪಿಸುವುದು. ವಿಶೇಷವಾಗಿ ಬೆಳಗ್ಗಿನ 11 ಗಂಟೆ ಮತ್ತು ಸಂಜೆಯ 5 ಗಂಟೆಯ ಲಘು ಉಪಹಾರ ಕ್ರಮಗಳನ್ನು ಬದಲಾಯಿಸಿಕೊಳ್ಳಿ. ಅದಕ್ಕೆ ಉತ್ತಮವೆಂದರೆ ಪಿಸ್ತಾ (Pistachios) ಸೇವನೆ. ಪಿಸ್ತಾವನ್ನು ಹಾಗೆಯೇ ಸೇವಿಸಬಹುದು, ಇಲ್ಲವೇ ಉಪ್ಪು ಮಿಶ್ರಿತ ಹುರಿದ ಪಿಸ್ತಾಗಳನ್ನು ಸೇವಿಸಬಹುದು.

ಸ್ನಾಕ್ಸ್‌ ಅಥವಾ ಲಘು ಉ‍ಪಹಾರಗಳು ನಮ್ಮ ದೇಹಕ್ಕೆ ಬಹಳ ಅವಶ್ಯಕ. ಅಗತ್ಯ ಪೋಷಕಾಂಶಗಳನ್ನು ಪೂರೈಸಿ, ನಿಮ್ಮ ತೂಕ ಕಾಪಾಡಿಕೊಳ್ಳುವುದಕ್ಕೆ ಬೀಜಗಳು ಸಹಕಾರಿಯಾಗಿದೆ. ಅವುಗಳಲ್ಲಿ ಬಹು–ಪೋಷಕಾಂಶಗಳನ್ನು ಹೊಂದಿರುವ ಪಿಸ್ತಾ ಉತ್ತಮವಾದದ್ದು. ಲಘು ಉಪಹಾರಕ್ಕೆ ಅವುಗಳನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ಪಕೋಡಾ, ಚಿಪ್ಸ್‌, ಸಮೋಸಾ ಮುಂತಾದ ನಮ್ಕೀನ್‌ಗಳು ಡೀಪ್‌–ಫ್ರೈಡ್‌ ಆಹಾರಗಳಾಗಿವೆ. ಅವುಗಳು ಯಾವಾಗಲೂ ಉತ್ತಮವಾದುದಲ್ಲ.

ಒಂದು ಮುಷ್ಠಿ ಪಿಸ್ತಾವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು:

  1. ಪಿಸ್ತಾ ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ.
  2. ನೀವು ಹೆಚ್ಚು ಸಮಯ ಕೆಲಸ ಮಾಡುತ್ತಿದ್ದರೆ, ಊಟದ ನಡುವೆ ಸೇವಿಸುವ ಒಂದು ಹಿಡಿ ಪಿಸ್ತಾಗಳು ನಿಮ್ಮ ಹಸಿವನ್ನು ಪೂರೈಸಬಹುದು.
  3. ಊಟದ ಸಮಯದಲ್ಲಿ ಅತಿಯಾಗಿ ತಿನ್ನುವುದನ್ನು ತಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ.
  4. ಲಘು ಉಪಹಾರದಲ್ಲಿ ಪಿಸ್ತಾ ಸೇವಿಸುವುದರಿಂದ, ಅವು ನಿಮಗೆ ಶಕ್ತಿಯನ್ನು ನೀಡುತ್ತವೆ. ಮತ್ತು ಅತಿಯಾದ ತಿನ್ನುವ ಬಯಕೆಯನ್ನು ಕಡಿಮೆ ಮಾಡುತ್ತದೆ.

ಅದಕ್ಕಾಗಿ ನಿಮ್ಮ ದೈನಂದಿನ ಜೀವನದಲ್ಲಿ ಉತ್ತಮ ಆಹಾರ ಸೇವನೆಯ ಅಭ್ಯಾಸ ಮಾಡಿಕೊಳ್ಳಿ.

ಇದನ್ನೂ ಓದಿ : Banana Benefits : ಬಾಳೆಕಾಯಿ ತಿನ್ನಿ, ಕ್ಯಾನ್ಸರ್‌ನಿಂದ ದೂರವಿರಿ; ರಿಸರ್ಚ್‌ನಿಂದ ಬಯಲಾಯ್ತು ಈ ಸೀಕ್ರೆಟ್‌

ಇದನ್ನೂ ಓದಿ : Pineapple Benefits : ಪೂರ್ತಿ ದೇಹಕ್ಕೆ ಶಕ್ತಿ ಸಂಚಯ ಮಾಡುವ ‘ಅನಾನಸ್‌’

(change your snacks with multi-nutrient pistachios)

Comments are closed.