Prahlad Joshi :‘ಭಾರತ್​ ಜೋಡೋ ಯಾತ್ರೆಯಿಂದ ಲಾಭವಿದೆ ಎಂಬ ಭ್ರಮೆ ಕಾಂಗ್ರೆಸ್​ನದ್ದು’ : ಪ್ರಹ್ಲಾದ್​ ಜೋಶಿ ವ್ಯಂಗ್ಯ

ಮೈಸೂರು : Prahlad Joshi : ರಾಜ್ಯದಲ್ಲಿ ಮೈಸೂರು ದಸರಾ ಮಹೋತ್ಸವಕ್ಕೆ ಭರ್ಜರಿ ತಯಾರಿ ನಡೆದಿದೆ. ಕೋವಿಡ್​ ಮಾರಿಯಿಂದಾಗಿ ಕಳೆದ 2 ವರ್ಷಗಳಿಂದ ನಾಡದೇವಿಗೆ ವಿಜೃಂಭಣೆಯಿಂದ ದಸರಾ ಕಾರ್ಯಕ್ರಮ ನಡೆದಿರಲಿಲ್ಲ. ಹೀಗಾಗಿ ಈ ವರ್ಷದ ದಸರಾ ಕಾರ್ಯಕ್ರಮ ಹಾಗೂ ಜಂಬೂ ಸವಾರಿಗೆ ರಾಜ್ಯದ ಜನತೆ ಕಳೆದ ಎರಡು ವರ್ಷಗಳಿಂದ ಕಾಯುತ್ತಿದ್ದಾರೆ. ಮೈಸೂರು ಉಸ್ತುವಾರಿ ಸಚಿವ ಎಸ್​.ಟಿ ಸೋಮಶೇಖರ್​ ಮೈಸೂರಿನಲ್ಲಿಯೇ ಠಿಕಾಣಿ ಹೂಡಿ ದಸರಾ ಕಾರ್ಯಕ್ರಮದ ಇಂಚಿಂಚು ಬೆಳವಣಿಗೆಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ.


ಈ ಬಾರಿ ದಸರಾ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿದ್ದಾರೆ. ಅಲ್ಲದೇ ನಾಲ್ವರು ಕೇಂದ್ರ ಸಚಿವರು ಕೂಡ ದಸರಾ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಕೂಡ ಇದೆ. ದಸರಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಮೈಸೂರಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


ಮೈಸೂರಿಗೆ ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ರಾಷ್ಟ್ರಪತಿ ದಸರಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದು ಇದೇ ಮೊದಲು. ರಾಷ್ಟ್ರಪತಿ ದ್ರೌಪದಿ ಮುರ್ಮು ದೈವಿ ಭಕ್ತಿಯನ್ನು ಹೊಂದಿದ್ದಾರೆ. ರಾಷ್ಟ್ರಪತಿಗಳು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೂರ್ವ ತಯಾರಿ ಬಗ್ಗೆ ಮಾತನಾಡಲು ನಾನು ಇಲ್ಲಿಗೆ ಬಂದಿದ್ದೇನೆ.ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಹುಬ್ಬಳ್ಳಿಯಲ್ಲಿ ಪ್ರೌರ ಸನ್ಮಾನ ಮಾಡಲಾಗುತ್ತದೆ. ಮೈಸೂರಿನ ಜನತೆ ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಇದೇ ವೇಳೆ ಪ್ರಹ್ಲಾದ್​ ಜೋಶಿ ಮನವಿ ಮಾಡಿದರು.


ಇದೇ ವೇಳೆ ಕಾಂಗ್ರೆಸ್ಸಿಗರ ಭಾರತ್​ ಜೋಡೋ ಯಾತ್ರೆ ವಿಚಾರವಾಗಿ ಮಾತನಾಡಿದ ಪ್ರಹ್ಲಾದ್​ ಜೋಶಿ ಭಾರತ್ ಜೋಡೋ ಯಾತ್ರೆಯಿಂದಾಗಿ ಕಾಂಗ್ರೆಸ್​​​ಗೆ ಲಾಭವಾಗುತ್ತೆ ಎಂಬ ಭ್ರಮೆಯಲ್ಲಿ ಡಿಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಇದ್ದಾರೆ. ಕಾಂಗ್ರೆಸ್ಸಿನವರಿಗೆ ಈ ಭ್ರಮೆಯಲ್ಲಿರಲು ಮಾಧ್ಯಮದವರೂ ಬಿಡಿ. ಅವರ ಭ್ರಮೆಯನ್ನು ನಾವ್ಯಾಕೆ ಬೇಡ ಅನ್ನೋಣ.. ?ಇಷ್ಟು ದಿನ ಕಾಂಗ್ರೆಸ್ಸಿನವರು ಜನರನ್ನು ಭ್ರಮೆಯಲ್ಲಿಟ್ಟಿದ್ದರು ಈಗ ಅವರೇ ಭ್ರಮೆಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.


ಕಾಂಗ್ರೆಸ್​ ಏನು ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮುಂದಿನ ಚುನಾವಣೆಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಕಾಂಗ್ರೆಸ್​ ಎಂದಿಗೂ ದೇಶ ಬಗ್ಗೆ ವಿಚಾರ ಮಾಡಿಲ್ಲ. ನಕಲಿ ಗಾಮಧಿ ಕುಟುಂಬದವರು ಅವರ ಕುಟುಂಬದ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ. ದೇಶದ ಬಗ್ಗೆ ಇವರಿಗೇನು ಗೊತ್ತು..? ಎಂದು ಪ್ರಶ್ನೆ ಮಾಡಿದ್ದಾರೆ.


ಜೈಲಿನ ಬಗ್ಗೆ ರಾಹುಲ್​ ಗಾಂಧಿ ಡಿಕೆ ಶಿವಕುಮಾರ್​ರಿಂದ ಮಾಹಿತಿ ಪಡೆದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಯಾರು ತಪ್ಪು ಮಾಡಿರುತ್ತಾರೋ ಅವರಿಗೆ ಭಯವಿರುತ್ತದೆ. ಅಂತವರು ಜೈಲಿನ ಬಗ್ಗೆ ವಿಚಾರಿಸುತ್ತಾರೆ. ನಾನಾಗಲಿ ಪ್ರತಾಪ್​ ಸಿಂಹರಾಗಲಿ ಈ ಬಗ್ಗೆ ವಿಚಾರಣೆ ಮಾಡೋದಿಲ್ಲ. ಜೈಲಿಗೆ ಹೋಗುವ ಭೀತಿ ಇರುವವರು ಮಾತ್ರ ಈ ವಿಚಾರಣೆ ಮಾಡುತ್ತಾರೆ ಎಂದು ಕುಟುಕಿದರು.

ಇದನ್ನು ಓದಿ : Veda Krishnamurthy: ಖಾಸಗಿ ಹೋಟೆಲ್‌ನಲ್ಲಿ ನಡೆಯಿತು ವೇದಾ ಕೃಷ್ಣಮೂರ್ತಿ ನಿಶ್ಚಿತಾರ್ಥ.. ಅರ್ಜುನ್ ಜೊತೆ ಉಂಗುರ ಬದಲಿಸಿಕೊಂಡ ಸ್ಟಾರ್ ಕ್ರಿಕೆಟರ್

ಇದನ್ನೂ ಓದಿ : Virat Kohli India vs Australia : 11 ಸಾವಿರ ಟಿ20 ರನ್ ಶಿಖರಕ್ಕೆ 98 ರನ್ ಬಾಕಿ.. ಕಾಂಗರೂಗಳ ವಿರುದ್ಧ “ವಿರಾಟ” ದಾಖಲೆಗೆ ಕಿಂಗ್ ಕೊಹ್ಲಿ ಸಜ್ಜು

‘Congress’ delusion that there is benefit from Bharat Jodo Yatra’: Prahlad Joshi sarcasm

Comments are closed.