Snake bites woman : ತಾಲೂಕು ಆಸ್ಪತ್ರೆ ವಾರ್ಡ್‌ನಲ್ಲಿ ಮಹಿಳೆಗೆ ಕಚ್ಚಿದ ವಿಷಕಾರಿ ಹಾವು

ಕಣ್ಣೂರು : (Snake bites woman) ಗರ್ಭಿಣಿ ಮಗಳನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಮಹಿಳೆಯೋರ್ವರಿಗೆ ಆಸ್ಪತ್ರೆಯ ವಾರ್ಡ್‌ನಲ್ಲಿಯೇ ವಿಷಕಾರಿ ಹಾವು ಕಡಿದಿರುವ ಘಟನೆ ಕೇರಳದ ತಾಳಿಪರಂಬ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಇದರಿಂದಾಗಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಆತಂಕ ಶುರುವಾಗಿದೆ.

ಚೆಂಪೇರಿ ಮೂಲದ ಲತಾ (55 ವರ್ಷ) ಎಂಬಾಕೆಯೇ ಹಾವು ಕಡಿತಕ್ಕೆ ಒಳಗಾದವರು. ಲತಾ ಅವರ ತನ್ನ ಗರ್ಭೀಣಿ ಮಗಳನ್ನು ನೋಡಲು ಬಂದಿದ್ದರು. ಮಗಳನ್ನು ಮಾತನಾಡಿಸಿದ ನಂತರ ಪೇ ವಾರ್ಡ್‌ನಲ್ಲಿರುವ ಬೆಡ್‌ ಮೇಲೆ ಕುಳಿತುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆಯಲ್ಲಿ ಅಲ್ಲಿಯೇ ಇದ್ದ ವಿಷಕಾರಿ ಹಾವು ಲತಾ ಅವರಿಗೆ ಕಡಿದಿದೆ. ಇದರಿಂದಾಗಿ ಅಸ್ವಸ್ಥಗೊಂಡ ಲತಾ ಅವರನ್ನು ಪರಿರಾಮ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ರಾತ್ರಿ 12 ಗಂಟೆಯ ಸುಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಹಾವು ಕಿಟಕಿ ಅಥವಾ ಬಾಗಿಲಿನ ಮೂಲಕ ಕೋಣೆಗೆ ಪ್ರವೇಶಿಸಿದೆ ಎನ್ನಲಾಗುತ್ತಿದೆ. ಘಟನೆಯ ಬೆನ್ನಲ್ಲೇ ಹಾವನ್ನು ಹೊಡೆದು ಸಾಯಿಸಲಾಗಿದೆ. ಇನ್ನು ಹಾವು ಕಡಿತಕ್ಕೆ ಒಳಗಾಗಿರುವ ಲತಾ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : BSNL Corruption : ಬಿಎಸ್‌ಎನ್‌ಎಲ್‌ ಭ್ರಷ್ಟಾಚಾರ : 21 ಹಿರಿಯ ಅಧಿಕಾರಿಗಳಿಗೆ ಸೇರಿದ 25 ಕಡೆ ಸಿಬಿಐ ದಾಳಿ

ಘಟನೆಯ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು ಹಾಗೂ ಸಂಬಂಧಿಕರಿಗೆ ಆತಂಕ ಶುರುವಾಗಿದೆ. ಆಸ್ಪತ್ರೆಯಲ್ಲಿನ ವೈದ್ಯಾಧಿಕಾರಿಗಳು, ಸಿಬ್ಬಂದಿಗಳ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಈ ಕುರಿತು ಸಾರ್ವಜನಿಕ ವಲಯದಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Snake bites woman in Taliparamba Taluk Hospital

Comments are closed.