KL Rahul Or Rishabh Panth : 2023ರ ವಿಶ್ವಕಪ್ ನಂತರ ಏಕದಿನ, ಟೆಸ್ಟ್ ತಂಡಕ್ಕೆ ಕೆ ಎಲ್ ರಾಹುಲ್ ಅಥವಾ ರಿಷಭ್ ಪಂತ್ ಕ್ಯಾಪ್ಟನ್

ಬೆಂಗಳೂರು : ಟಿ20 ವಿಶ್ವಕಪ್ (T20 World Cup) ವೈಫಲ್ಯ ಭಾರತೀಯ ಕ್ರಿಕೆಟ್’ನಲ್ಲಿ ಮೇಜರ್ ಸರ್ಜರಿಗೆ (KL Rahul Or Rishabh Panth) ಕಾರಣವಾಗುತ್ತಿದೆ. ವಿಶ್ವಕಪ್ ವೈಫಲ್ಯಕ್ಕೆ ತಲೆದಂಡ ಎಂಬಂತೆ ಈಗಾಗಲೇ ಸೀನಿಯಲ್ ಸೆಲೆಕ್ಷನ್ ಕಮಿಟಿಯನ್ನು ವಜಾ ಮಾಡಿರುವ ಬಿಸಿಸಿಐ (BCCI sackc selection committee), ತಂಡದ ನಾಯಕತ್ವದ ವಿಚಾರದಲ್ಲೂ ಕೆಲವೊಂದು ಬದಲಾವಣೆಗಳನ್ನು ಮಾಡಲಿದೆ.

ಮುಂದಿನ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೂ ಮುನ್ನ ರೋಹಿತ್ ಶರ್ಮಾ ಅವರನ್ನು ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಸಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ (Hardik Pandya) ಚುಟುಕು ಕ್ರಿಕೆಟ್ ನಾಯಕತ್ವ ನೀಡುವ ಸಾಧ್ಯತೆಗಳಿವೆ. ಈಗಾಗಲ್ಲೇ ಪಾಂಡ್ಯ ನ್ಯೂಜಿಲೆಂಡ್’ನಲ್ಲಿ ನಡೆಯುತ್ತಿರುವ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಿದ್ದಾರೆ. ಮುಂದಿನ ವರ್ಷ ಪಾಂಡ್ಯ ಅವರನ್ನು ಟಿ20 ತಂಡದ ಕಾಯಂ ನಾಯಕನಾಗಿ ನೇಮಕ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.

2023ರಲ್ಲಿ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಅಲ್ಲಿಯವರೆಗೆ ರೋಹಿತ್ ಶರ್ಮಾ (Rohit Sharma) ಅವರೇ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ. ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕತ್ವವೂ ರೋಹಿತ್ ಶರ್ಮಾ ಅವರ ಕೈ ತಪ್ಪಲಿದೆ. ರೋಹಿತ್ ಬದಲು ಟೀಮ್ ಇಂಡಿಯಾದ ಹಾಲಿ ಉಪನಾಯಕ ಕೆ.ಎಲ್ ರಾಹುಲ್ (KL Rahul) ಏಕದಿನ ಮತ್ತು ಟೆಸ್ಟ್ ತಂಡದ ನಾಯಕನಾಗಿ ನೇಮಕವಾಗಲಿದ್ದಾರೆ. ಒಂದು ವೇಳೆ ರಾಹುಲ್ ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಿದರೆ, ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಅವರಿಗೆ ಟೆಸ್ಟ್ ಮತ್ತು ಏಕದಿನ ತಂಡದ ನಾಯಕತ್ವ ವಹಿಸುವ ಆಯ್ಕೆಯೂ ಬಿಸಿಸಿಐ ಮುಂದಿದೆ.

ಇದನ್ನೂ ಓದಿ : India Vs New Zeeland match cancelled: ಭಾರತ Vs ನ್ಯೂಜಿಲೆಂಡ್ ಟಿ20 ಸರಣಿ: ಮೊದಲ ಪಂದ್ಯ ಮಳೆಯಿಂದ ರದ್ದು

ಇದನ್ನೂ ಓದಿ : BCCI sackc selection: ಟಿ20 ವಿಶ್ವಕಪ್ ವೈಫಲ್ಯಕ್ಕೆ ತಲೆದಂಡ, ಆಯ್ಕೆ ಸಮಿತಿಯನ್ನೇ ಡಿಸ್ಮಿಸ್ ಮಾಡಿದ ಬಿಸಿಸಿಐ

ಇದನ್ನೂ ಓದಿ : Pandya T20 captain: ಭಾರತ ಟಿ20 ತಂಡದ ನಾಯಕತ್ವದಿಂದ ರೋಹಿತ್’ಗೆ ಕೊಕ್, ಹಾರ್ದಿಕ್ ಪಾಂಡ್ಯ ಹೊಸ ಕ್ಯಾಪ್ಟನ್

ಕೆ.ಎಲ್ ರಾಹುಲ್ ಅವರಿಗೆ ಮುಂದಿನ ವರ್ಷ ತುಂಬಾ ಮಹತ್ವದ್ದಾಗಿದೆ. ತಮ್ಮ ಮೇಲಿನ ನಿರೀಕ್ಷೆಗೆ ತಕ್ಕಂತೆ ಆಟ ಪ್ರದರ್ಶಿಸಿದರೆ ರಾಹುಲ್ ಟೀಮ್ ಇಂಡಿಯಾ ನಾಯಕರಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಟಿ20 ವಿಶ್ವಕಪ್ ವೈಫಲ್ಯದ ಹೊರತಾಗಿಯೂ ರಾಹುಲ್ ಅವರನ್ನು ಬಾಂಗ್ಲಾದೇಶ ಪ್ರವಾಸಕ್ಕೆ ಭಾರತ ತಂಡದ ಉಪನಾಯಕನಾಗಿ ಮುಂದುವರಿಸಲಾಗಿದೆ. ರಾಹುಲ್ ಅವರಲ್ಲಿ ಬಿಸಿಸಿಐ ಭವಿಷ್ಯದ ಟೀಮ್ ಇಂಡಿಯಾ ನಾಯಕನನ್ನು ನೋಡುತ್ತಿದೆ ಎಂಬುದು ಇದರಿಂದ ಸ್ಪಷ್ಟ. ಆದರೆ ಎಲ್ಲವೂ ರಾಹುಲ್ ಆಟದ ಮೇಲೆ ನಿಂತಿದೆ. ಸ್ಥಿರ ಆಟ ಪ್ರದರ್ಶಿಸಿದರೆ ರಾಹುಲ್ 2023ರ ವಿಶ್ವಕಪ್ ನಂತರ ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕನಾಗಿ ನೇಮಕಗೊಳ್ಳಲಿದ್ದಾರೆ.

BCCI sackc selection committee: KL Rahul or Rishabh Pant to captain ODI, Test team after 2023 World Cup

Comments are closed.