Student died: ಶಾಲೆಯಲ್ಲಿ ನೇಣು ಬಿಗಿದು 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಮಧ್ಯಪ್ರದೇಶ: (Student died) ಖಾಸಗಿ ಶಾಲೆಯೊಂದರಲ್ಲಿ 15 ವರ್ಷದ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಮೃತ ಬಾಲಕ ಓಂ ಸೆಪ್ತಾ (15 ವರ್ಷ) ಎಂದು ಗುರುತಿಸಲಾಗಿದೆ.

10 ನೇ ತರಗತಿಯ ವಿದ್ಯಾರ್ಥಿಯು ಬೆಳಿಗ್ಗೆ ಶಾಲೆಯ ತರಗತಿಯೊಂದರಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು (Student died) ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಗಿನ ಉಪಾಹಾರದ ನಂತರ ಯಾರೂ ಇಲ್ಲದ ತರಗತಿಗೆ ತೆರಳಿದ ಬಾಲಕ ಟವೆಲ್‌ನಿಂದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾನೆ ಎಂದು ಶಾಲೆಯ ಪ್ರಾಂಶುಪಾಲ ಗೋವಿಂದ್ ಭಯಾಲ್ ತಿಳಿಸಿದ್ದಾರೆ.

ಶಾಲೆಯ ಹಾಸ್ಟೆಲ್‌ನಲ್ಲಿ ತಂಗಿದ್ದ ಬಾಲಕ ವಾರ್ಡನ್‌ಗೆ ಪತ್ರ ಬರೆದಿದ್ದು, ನೋಟ್‌ಬುಕ್‌ನಲ್ಲಿಆ ಪತ್ರ ಪತ್ತೆಯಾಗಿದೆ ಎಂದು ಬರ್ವಾನಿ ಪೊಲೀಸ್ ಠಾಣೆಯ ಉಸ್ತುವಾರಿ ವಿಜಯ್ ರಾವತ್ ಪಿಟಿಐಗೆ ತಿಳಿಸಿದ್ದಾರೆ. ತನಗೆ ಗುಂಪಿನಲ್ಲಿ ಓದಲು ಇಷ್ಟವಿಲ್ಲ ಮತ್ತು ಏಕಾಂಗಿಯಾಗಿ ಅಧ್ಯಯನ ಮಾಡಲು ಬಯಸುತ್ತೇನೆ ಎಂದು ಹುಡುಗ ಪತ್ರದಲ್ಲಿ ಬರೆದಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ : Thumkur accident: ಕ್ಯಾಂಟರ್‌ ಗೆ ಕಾರು ಢಿಕ್ಕಿ: ನಾಲ್ವರು ಸಾವು

ಇದನ್ನೂ ಓದಿ : Liquor tragedy: ಬಿಹಾರದಲ್ಲಿ ಕಳ್ಳಭಟ್ಟಿ ದುರಂತಕ್ಕೆ 20 ಮಂದಿ ಬಲಿ; ವಿಧಾನಸಭೆಯಲ್ಲಿ ಚರ್ಚೆ, ಪ್ರತಿಪಕ್ಷಗಳ ಗದ್ದಲ

ಇದನ್ನೂ ಓದಿ : Birbhum accused’s death: ಕಸ್ಟಡಿಯಲ್ಲಿದ್ದ ಹಿಂಸಾಚಾರ ಪ್ರಕರಣದ ಆರೋಪಿ ಸಾವು : ಸಿಬಿಐ ಅಧಿಕಾರಿಗಳ ವಿರುದ್ಧ ಕೊಲೆ ಕೇಸ್‌ ದಾಖಲು

ಘಟನೆಯ ವಿಡಿಯೋ ಸಿಸಿಟಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ. ಆದರೆ ಆತನ ಸಾವಿಗೆ ನಿಖರವಾದ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ತನಿಖೆಯ ನಂತರವಷ್ಟೇ ನಿಖರವಾದ ಮಾಹಿತಿ ಹೊರಬೀಳಲಿದೆ.

ಇದನ್ನೂ ಓದಿ : Escort service website: ಎಸ್ಕಾರ್ಟ್ ವೆಬ್ ಸೈಟ್ ನಲ್ಲಿ ಪತ್ನಿ ಮತ್ತು ತಂಗಿಯ ಫೋಟೋ ಕಂಡು ವ್ಯಕ್ತಿಯೊಬ್ಬ ಬೆಚ್ಚಿಬಿದ್ದಿದ್ದು ಯಾಕೆ ಗೊತ್ತಾ..?

(Student died) A 15-year-old boy committed suicide by hanging himself in a private school in a private school in Barwani district of Madhya Pradesh. The deceased boy has been identified as Om Septa (15 years).

Comments are closed.