Mysore : ಟೆಕ್ನಿಕಲ್‌ ಸಾಕ್ಷ್ಯ ಲಭ್ಯ, ಶೀಘ್ರದಲ್ಲಿಯೇ ಆರೋಪಿಗಳ ಬಂಧನ : ಡಿಜಿ ಐಜಿಪಿ ಪ್ರವೀಣ್‌ ಸೂದ್‌

ಮೈಸೂರು : ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಕ್ನಿಕಲ್‌ ಸಾಕ್ಷಿಗಳು ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಅತೀ ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಡಿಜಿ -ಐಜಿಪಿ ಪ್ರವೀಣ್‌ ಸೂದ್‌ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮೈಸೂರಿನಲ್ಲಿ ಗ್ಯಾಂಗ್‌ ರೇಪ್‌ ನಡೆದಿರುವುದು ನಿಜ. ಅಗಸ್ಟ್‌ 25ರಂದು ಘಟನೆ ನಡೆದಿದೆ. ಆರೋಪಿಗಳ ಸುಳಿವು ಸಿಕ್ಕರೂ ಹೇಳುವುದಕ್ಕೆ ಸಾಧ್ಯವಿಲ್ಲ. ಈಗಾಗಲೇ ದೊರೆತಿರುವ ಟೆಕ್ನಿಕಲ್‌ ಸಾಕ್ಷ್ಯಗಳನ್ನು ಇಟ್ಟುಕೊಂಡು ತನಿಖೆ ನಡೆಯುತ್ತಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದೆ. ಸಿಎಂ ದೆಹಲಿಯಿಂದಲೇ ಸೂಚನೆಯನ್ನು ನೀಡಿದ್ದಾರೆ ಎಂದಿದ್ದಾರೆ.

ಘಟನೆಯಿಂದಾಗಿ ಯುವತಿ ಶಾಕ್‌ಗೆ ಒಳಗಾಗಿದ್ದಾಳೆ. ಯುವತಿಯ ಮನಸ್ಥಿತಿ ಸರಿಯಾದ ನಂತರದಲ್ಲಿ ತನಿಖೆಗೆ ಸಹಕಾರ ನೀಡುವ ಭರವಸೆಯನ್ನು ನೀಡಿದ್ದಾರೆ. ಯುವತಿ ಸಹಕಾರ ನೀಡದಿದ್ದರೂ ಕೂಡ ತನಿಖೆಯನ್ನು ನಡೆಸುತ್ತಿದ್ದೇವೆ. ಮಣಿಪಾಲದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿಯೂ ಯುವತಿ ಹೇಳಿಕೆಯನ್ನು ನೀಡಿರಲಿಲ್ಲ. ಆದ್ರೂ ಪ್ರಕರಣವನ್ನು ಬೇಧಿಸಿದ್ದೇವೆ. ಮೈಸೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಅತೀ ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ : ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ : ಪೊಲೀಸರ ಮುಂದೆ ಸಂತ್ರಸ್ತೆಯ ಸ್ನೇಹಿತನ ಹೇಳಿದ್ದೇನು ಗೊತ್ತಾ ?

ಇದನ್ನೂ ಓದಿ : ಪ್ರೀತಿಗೆ ನಿರಾಕರಿಸಿದ ವಿದ್ಯಾರ್ಥಿನಿ : ಕಾಡಿಗೆ ಕರೆದೊಯ್ದು ಯುವಕ ಮಾಡಿದ್ದ ಘೋರ ಕೃತ್ಯ

( Technical evidence available, arrest of accused soon: DG IGP Praveen Sood )

Comments are closed.