ಶಿವಣ್ಣ ಫ್ಯಾನ್ಸ್ ಗೆ ಬ್ಯಾಕ್ ಟೂ ಬ್ಯಾಕ್ ಗುಡ್ ನ್ಯೂಸ್: ಸಪ್ಟೆಂಬರ್ 1 ರಂದು ಟ್ರೇಲರ್, 10 ರಂದು ಸಿನಿಮಾ ರೀಲಿಸ್

ಶಿವರಾಜ್ ಕುಮಾರ್ ಅಭಿನಯದ ಬಹುನೀರಿಕ್ಷಿತ ಭಜರಂಗಿ- 2 ಸಿನಿಮಾ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದ್ದು, ಸಪ್ಟೆಂಬರ್ 10 ಗಣೇಶ ಚತುರ್ಥಿಯಂದು ಸಿನಿಮಾ ತೆರೆಗೆ ಬರಲಿದೆ. ಸಪ್ಟೆಂಬರ್ 1 ರಂದು ಟ್ರೇಲರ್ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಿದೆ.

ಸದ್ಯ ಕರ್ನಾಟಕದಲ್ಲಿ ಕೊರೋನಾ ಕಾರಣಕ್ಕೆ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಹೀಗಿದ್ದರೂ ಭಜರಂಗಿ-2  ಚಿತ್ರ ರಿಲೀಸ್ ಗೆ ನಿರ್ಮಾಪಕರು ರಿಲೀಸ್ ಗೆ ಸಿದ್ಧವಾಗಿದ್ದಾರೆ.

ಈಗಾಗಲೇ ಭಜರಂಗಿ-2 ಸಿನಿಮಾದ ಪೋಸ್ಟರ್, ಫರ್ಸ್ಟ್ ಲುಕ್ ಸಖತ್ ಕ್ಯೂರಿಯಾಸಿಟಿ ಹೆಚ್ಚಿಸಿದ್ದು, ಅಭಿಮಾನಿಗಳು ಶಿವಣ್ಣನನ್ನು ತೆರೆ ಮೇಲೆ ನೋಡೋಕೆ ಕಾತುರರಾಗಿ ಕಾಯುತ್ತಾ ಇದ್ದಾರೆ. ಹೀಗಾಗಿ ಟ್ರೇಲರ್ ರಿಲೀಸ್ ಮೇಲೂ ನೀರಿಕ್ಷೆ  ಹೆಚ್ಚಿದೆ.

ಶಿವಣ್ಣನಿಗೆ ನಾಯಕಿಯಾಗಿ ಭಾವನಾ ಮೆನನ್ ನಟಿಸಿದ್ದು, ಶ್ರುತಿ, ಶಿವರಾಜ್ ಕೆ.ಆರ್.ಪೇಟೆ ಸೇರಿದಂತೆ ಹಲವು ನಟ-ನಟಿಯರ ತಾರಾಗಣವಿದೆ. ಭಜರಂಗಿ ಹಾಗೂ ವಜ್ರಕಾಯದ ಬಳಿಕ ಎ.ಹರ್ಷಾ ಹಾಗೂ ಶಿವಣ್ಣ ಒಂದಾಗಿರುವ ಮೂರನೇ ಸಿನಿಮಾ ಇದಾಗಿದೆ.

ಇದನ್ನೂ ಓದಿ : ಹಾಟ್ ಆಂಡ್ ಬೋಲ್ಡ್ ಪೋಟೋಶೂಟ್ ನಲ್ಲಿ ಮಿಂಚಿದ ನಟಿ ಪ್ರಿಯಾಂಕಾ ತಿಮ್ಮೇಶ್

ಇದನ್ನೂ ಓದಿ : ನಾಗಿನಿಯ ಹಾಟ್ ಅವತಾರ: ಪಡ್ಡೆಗಳ ನಿದ್ದೆ ಕದ್ದ ದೀಪಿಕಾ ದಾಸ್

Comments are closed.