Aam Papad Recipe:ಬಾಯಲ್ಲಿ ನೀರೂರಿಸುವ ಮಾವಿನ ತಿನಿಸು ಆಮ್‌ ಪಾಪಡ್‌ ಮನೆಯಲ್ಲಿಯೇ ಮಾಡಿ

ಬೇಕರಿ ಮತ್ತು ಅಂಗಡಿಗಳಲ್ಲಿ ಜೆಲ್ಲಿ ರೂಪದ ಆಮ್‌ ಪಾಪಡ್‌ (Aam Papad Recipe) ಸಿಗುತ್ತದೆ ಇದನ್ನು ಮಕ್ಕಳು ಅತಿ ಹೆಚ್ಚಾಗಿ ಖರೀದಿ ಮಾಡುತ್ತಾರೆ. ಬೇಕರಿ ಮತ್ತು ಅಂಗಡಿಗಳಲ್ಲಿ ಸಿಗುವಂತಹ ಆಮ್‌ ಪಾಪಡ್‌ ಮಕ್ಕಳ ಆರೋಗ್ಯವನ್ನು ಕೆಡಿಸುತ್ತದೆ ಹಾಗಾಗಿ ಇದನ್ನು ಮನೆಯಲ್ಲಿಯೇ ಮಾಡಿಕೊಟ್ಟರೆ ಉತ್ತಮ. ಮನೆಯಲ್ಲಿಯೇ ಆಮ್‌ ಪಾಪಡ್‌ ತಯಾರಿಸುವುದು ಹೇಗೆ ಎಂಬ ಮಾಹಿತಿಯ ಕುರಿತು ತಿಳಿಯೋಣ.

Aam Papad Recipe: ಬೇಕಾಗುವ ಸಾಮಾಗ್ರಿಗಳು:

  • ಮಾವಿನ ಹಣ್ಣು
  • ಸಕ್ಕರೆ
  • ಏಲಕ್ಕಿ
  • ತುಪ್ಪ

ಮಾಡುವ ವಿಧಾನ
ಮಾವಿನ ಹಣ್ಣನ್ನು ಕಟ್‌ ಮಾಡಿಕೊಂಡು ಬೌಲ್‌ ಗೆ ಹಾಕಿಕೊಂಡು ಸ್ಮಾಶ್‌ ಮಾಡಬೇಕು ಅಥವಾ ಮಿಕ್ಸಿ ಜಾರಿಯಲ್ಲಿ ಹಾಕಿ ರುಬ್ಬಿಕೊಳ್ಳಬಹುದು. ಗ್ಯಾಸ್‌ ಮೇಲೆ ಬಾಣಲೆ ಇಟ್ಟು ಅದಕ್ಕೆ ರುಬ್ಬಿಕೊಂಡ ಮಾವಿನಹಣ್ಣು ಹಾಕಿ ದೊಡ್ಡ ಚಮಚದಲ್ಲಿ ಸಕ್ಕರೆ ಹಾಕಿಕೊಂಡು ಸೌಟು ಆಡಿಸಬೇಕು. ನಂತರ ಒಂದು ಚಮಚ ಏಲಕ್ಕಿ ಪುಡಿ ಬೆರೆಸಿ ಸೌಟು ಆಡಿಸಬೇಕು. ಅನಂತರ ತಟ್ಟೆಗೆ ತುಪ್ಪವನ್ನು ಸವರಿಕೊಳ್ಳಬೇಕು ಅದಕ್ಕೆ ಬಾಣಲೆಯಲ್ಲಿ ಬೇಯಿಸಿಕೊಂಡ ಮಿಶ್ರಣ ಹಾಕಬೇಕು. ಇದನ್ನು ಎರಡು ದಿನ ಬಿಸಿಲಿನಲ್ಲಿ ಒಣಗಿಸಿ ನಿಮಗೆ ಬೇಕಾದ ಶೇಪ್‌ ಗೆ ಕಟ್‌ ಮಾಡಿಕೊಂಡರೆ ಬೇಕರಿ ಮತ್ತು ಅಂಗಡಿಗಳಲ್ಲಿ ಸಿಗುವ ಆಮ್‌ ಪಾಪಡ್‌ ರೆಡಿ.

ಇದನ್ನೂ ಓದಿ:Ragi Laddu Recipe:ರಾಗಿ ಮುದ್ದೆ, ದೋಸೆ ಇಷ್ಟಪಡದವರು ತಿನ್ನಿ ರಾಗಿ ಲಡ್ಡು

ಇದನ್ನೂ ಓದಿ:Oreo Fudge Recipe:ಓರಿಯೋ ಐಸ್ ಕ್ರೀಮ್ ಇಷ್ಟ ಆದವರು, ಮನೆಯಲ್ಲೇ ಮಾಡಿ ರುಚಿ ನೋಡಿ ಓರಿಯೋ ಫಡ್ಜ್

ಇದನ್ನೂ ಓದಿ:Christmas Fruit Cake Recipe:ಮೊಟ್ಟೆ ,ವೈನ್‌ ಬಳಸದೆ ಸುಲಭದಲ್ಲಿ ತಯಾರಿಸಿ ಪ್ರೂಟ್ ಕೇಕ್‌

ಮಸಾಲ ಆಮ್‌ ಪಾಪಡ್‌

ಬೇಕಾಗುವ ಸಾಮಾಗ್ರಿಗಳು:

  • ಮಾವಿನ ಕಾಯಿ
  • ಕಪ್ಪು ಉಪ್ಪು
  • ಕಾರದ ಪುಡಿ
  • ಜೀರಿಗೆ ಪುಡಿ
  • ಚಾಟ್‌ ಮಸಾಲ
  • ಸಕ್ಕರೆ
  • ತುಪ್ಪ

ಮಾಡುವ ವಿಧಾನ
ಮಾವಿನಕಾಯಿಯನ್ನು ಕಟ್‌ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಾವಿನ ಕಾಯಿಯನ್ನು ಬಾಣಲೆಗೆ ಹಾಕಿ ಒಂದು ಚಮಚ ಕಪ್ಪು ಉಪ್ಪು, ಒಂದು ಚಮಚ ಕಾರದ ಪುಡಿ, ಒಂದು ಚಮಚ ಜೀರಿಗೆ, ಒಂದು ಚಮಚ ಚಾಟ್‌ ಮಸಾಲ, ದೊಡ್ಡ ಚಮಚದಷ್ಟು ಸಕ್ಕರೆ ಹಾಕಿ ಸೌಟು ಆಡಿಸಬೇಕು. ನಂತರ ತಟ್ಟೆಯಲ್ಲಿ ತುಪ್ಪ ಸವರಿಕೊಂಡು ಅದಕ್ಕೆ ಬಾಣಲೆಯಲ್ಲಿ ಕಾಯಿಸಿಕೊಂಡ ಮಿಶ್ರಣ ಹಾಕಿ ಎರಡು ದಿನ ಬಿಸಿಲಿನಲ್ಲಿ ಒಣಗಿಸಬೇಕು. ಅನಂತರ ಇದನ್ನು ನಿಮಗೆ ಬೇಕಾದ ಶೇಪ್‌ ನಲ್ಲಿ ಕಟ್‌ ಮಾಡಿಕೊಂಡರೆ ಅಂಗಡಿ ಮತ್ತು ಬೇಕರಿಗಳಲ್ಲಿ ಸಿಗುವ ಆಮ್‌ ಪಾಪಡ್‌ ರೆಡಿ.

Aam Papad Recipe Make mouth-watering mango dish Aam Papad at home

Comments are closed.