Oats vs White Rice : ಯಾವುದು ಆರೋಗ್ಯಕ್ಕೆ ಉತ್ತಮ; ಓಟ್ಸಾ ಅಥವಾ ಬಿಳಿ ಅಕ್ಕಿನಾ

ಇತ್ತಿಚಿನ ದಿನಗಳಲ್ಲಿ ಬೊಜ್ಜು (Obesity) ಒಂದು ದೊಡ್ಡ ಸಮಸ್ಯೆಯಾಗಿದೆ. ಒತ್ತಡ, ಅನಾರೋಗ್ಯಕರ ಆಹಾರ ಇವೆಲ್ಲವೂ ದೇಹದ ಸಮತೋಲನ ತಪ್ಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಡಯಟ್‌ (Diet) ಬಗ್ಗೆ ಸಾಕಷ್ಟು ಕಾಳಜಿವಹಿಸುತ್ತಿದ್ದರೂ ತೂಕದಲ್ಲಿ ಬದಲಾವಣೆಗಳಾಗಲಿ ಮತ್ತು ಆರೋಗ್ಯವಂತ ದೇಹವಾಗಲಿ ಸ್ವಲ್ಪ ಕಷ್ಟವೇ. ಯಾವುದನ್ನು ಆಯ್ಕೆ ಮಾಡಬೇಕು ಓಟ್ಸ್‌ ಅಥವಾ ಬಿಳಿ ಅಕ್ಕಿನಾ (Oats vs White Rice) , ಈ ಗೊಂದಲವಂತೂ ಸಾಮಾನ್ಯ ಸಮಸ್ಯೆಯಾಗಿದೆ. ನಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಆರೋಗ್ಯವಂತ ದೇಹ ಪಡೆದುಕೊಳ್ಳಬಹುದಾಗಿದೆ. ಡಯಟ್‌ ನಲ್ಲಿ ಓಟ್ಸ್‌ ಸೇರಿಸಿಕೊಳ್ಳಬೇಕೇ ಅಥವಾ ಬಿಳಿ ಅಕ್ಕಿ ಸೇರಿಸಿಕೊಳ್ಳಬೇಕೇ? ಈ ಪ್ರಶ್ನೆಗೆ ಇಲ್ಲಿದೆ ಪರಿಹಾರ.

ವಿಟಮಿನ್‌, ಮಿನರಲ್ಸ್‌ ಮತ್ತು ಆಂಟಿಒಕ್ಸಿಡೆಂಟ್‌ ಗಳ ಅಗರವಾಗಿರು ಓಟ್ಸ್‌ ಆರೋಗ್ಯಕರ ಧಾನ್ಯ. ಹಾಗೆ ಅಕ್ಕಿಯೂ ಮ್ಯಾಗ್ನೇಸಿಯಂ ಮತ್ತು ಕಬ್ಬಿಣದ ಅಂಶಗಳನ್ನು ಯಥೇಚ್ಛವಾಗಿ ಹೊಂದಿದೆ. ಆದರೆ ಯಾವುದು ಅತಿ ಹೆಚ್ಚು ಆರೋಗ್ಯಕರವಾಗಿದೆ? ಅಕ್ಕಿಯಂತೆಯೇ ಓಟ್ಸ್‌ ಸಹ ಅತಿ ಹೆಚ್ಚು ಕ್ಯಾಲೋರಿಯನ್ನು ಹೊಂದಿದೆ. 100 ಗ್ರಾಂ ಓಟ್ಸ್‌ ನಲ್ಲಿ 389 ಕ್ಯಾಲೋರಿ ಇರುತ್ತದೆ. ಬಿಳಿ ಅಕ್ಕಿಗೆ ಹೋಲಿಸಿದರೆ, ಓಟ್ಸ್‌ ಹೆಚ್ಚಿನ ಪ್ರೋಟೀನ್‌ ಮತ್ತು ಕಾರ್ಬೋಹೈಡ್ರೇಟ್‌ ಪ್ರಮಾಣವನ್ನು ಹೊಂದಿದೆ. ನೀವು ಉತ್ತಮ ಫೈಬರ್‌ ಇರುವ ಧಾನ್ಯದ ಹುಡುಕಾಟದಲ್ಲಿದ್ದರೆ, ಓಟ್ಸ್‌ನಲ್ಲಿ ಬಿಳಿ ಅಕ್ಕಿಗಿಂತ ಫೈಬರ್‌ 34 ಪಟ್ಟು ಹೆಚ್ಚಿರುತ್ತದೆ.

ಓಟ್ಸ್‌ನಲ್ಲಿ ಪ್ರೋಟೀನ್‌ ಹೆಚ್ಚಾಗಿದ್ದು, 100 ಗ್ರಾಂ ನಲ್ಲಿ 16.9 ಗ್ರಾಂ ಇದೆ. ಬಿಳಿ ಅಕ್ಕಿಗೆ ಹೋಲಿಸಿದರೆ, 1.2 ಗ್ರಾಂ ಗಳಷ್ಟು ಸ್ಯಾಚುರೇಟೆಡ್‌ ಫ್ಯಾಟ್‌ ಅನ್ನು ಹೊಂದಿದೆ. ಥೈಮಿನ್‌, ರೈಬೋಫ್ಲಾವಿನ್‌, ಪೆಂಥೋನಿಕ್‌ ಆಸಿಡ್‌ ಮತ್ತು ವಿಟಮಿನ್‌ ಬಿ6 ಗಳು ಓಟ್ಸ್‌ ನಲ್ಲಿ ಹೇರಳವಾಗಿದೆ.

ಇದನ್ನೂ ಓದಿ : Evening Snacks : ಸಂಜೆಯ ಟೀ ಟೈಮ್‌ಗೆ ಇದು ಬೆಸ್ಟ್‌ : ಶೇಂಗಾದಿಂದ ಮಾಡಿ ಈ ರೀತಿಯ ಸ್ನಾಕ್ಸ್‌

ಓಟ್ಸ್‌ನ ಪ್ರಯೋಜನಗಳು :

  • ಓಟ್ಸ್‌ ಹೃದಯ ಸಂಬಂಧಿ ಕಾಯಿಲೆಗಳನ್ನು ಯಶಸ್ವಿಯಾಗಿ ತಡೆಯಬಲ್ಲದು. ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್‌ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಓಟ್ಸ್‌ ನಲ್ಲಿರುವ ಆಂಟಿಒಕ್ಸಿಡೆಂಟ್‌ ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್‌ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
  • ಓಟ್ಸ್‌ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದು ಟೈಪ್‌–2 ಡಯಾಬಿಟಿಸ್‌ನ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಓಟ್ಸ್‌ ತ್ವಚೆಗೂ ಉತ್ತಮವಾಗಿದೆ.

ಇದನ್ನೂ ಓದಿ : Breakfast Recipes : ಬೆಳಗ್ಗಿನ ತಿಂಡಿಗೆ ಮಾಡಿ ಸಿಂಪಲ್‌ ರಾಗಿ ದೋಸೆ

(Oats vs White Rice why you should include oats in your diet)

Comments are closed.