Yuzvendra Chahal: ಭಾರತದ ನಂ.1 ಟಿ20 ಸ್ಪಿನ್ನರ್‌ಗೆ ವಿಶ್ವಕಪ್‌ನಲ್ಲಿ ಆಡುವ ಭಾಗ್ಯ ಇಲ್ಲ..!

ಬೆಂಗಳೂರು: (Yuzvendra Chahal) ಭಾರತ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್’ಗಳನ್ನು ಪಡೆದಿರುವ ಸ್ಪಿನ್ನರ್. 2022ರಲ್ಲಿ ಭಾರತ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್’ಗಳನ್ನು ಪಡೆದಿರುವುದೂ ಅದೇ ಸ್ಪಿನ್ನರ್. ಆದರೆ ಟಿ20 ವಿಶ್ವಕಪ್ ವಿಚಾರಕ್ಕೆ ಬಂದರೆ ಆತನಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಇದು ಟೀಮ್ ಇಂಡಿಯಾದ ಲೆಗ್’ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಕಥೆ.

32 ವರ್ಷದ ಯುಜ್ವೇಂದ್ರ ಚಹಲ್(Yuzvendra Chahal) ಟಿ20 ಕ್ರಿಕೆಟ್’ನಲ್ಲಿ ಭಾರತದ ನಂ.1 ಸ್ಪಿನ್ನರ್. ಆದರೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ (T20 World Cup 2022) ಪಂದ್ಯದಲ್ಲಿ ಚಹಲ್ ಬೆಂಚ್ ಕಾಯಿಸಿದ್ದೇ ಬಂತು, ವಾಟರ್ ಬಾಯ್ ಆಗಿದ್ದಷ್ಟೇ ಬಂತು. ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಕಳೆದ 3-4 ವರ್ಷಗಳಿಂದ ಟಿ20 ಕ್ರಿಕೆಟ್’ನಲ್ಲಿ ಭಾರತದ ನಂ.1 ಸ್ಪಿನ್ನರ್ ಆಗಿರುವ ಚಹಲ್’ಗೆ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಒಂದೇ ಒಂದು ಎಸೆತ ಎಸೆಯುವ ಅವಕಾಶ ಸಿಕ್ಕಿಲ್ಲ.

2021ರ ಟಿ20 ವಿಶ್ವಪ್ ಟೂರ್ನಿಗೂ ಮುನ್ನ ಯುಜ್ವೇಂದ್ರ ಚಹಲ್ ಉತ್ತಮ ಫಾರ್ಮ್’ನಲ್ಲಿದ್ದರೂ, ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ರಾಹುಲ್ ಚಹರ್’ಗೆ ಅವಕಾಶ ನೀಡಲಾಗಿತ್ತು. ಆದರೆ ಚಹರ್ ದಯನೀಯ ವೈಫಲ್ಯ ಎದುರಿಸಿದ್ದರು. ತಪ್ಪಿನಿಂದ ಪಾಠ ಕಲಿತಿದ್ದ ಬಿಸಿಸಿಐ, ಈ ಬಾರಿಯ ವಿಶ್ವಕಪ್’ಗೆ ಭಾರತದ ಫಸ್ಟ್ ಚಾಯ್ಸ್ ಲೆಗ್ ಸ್ಪಿನ್ನರ್ ಆಗಿ ಚಹಲ್ ಅವರನ್ನೇ ಆಯ್ಕೆ ಮಾಡಿತ್ತು. ಆದರೆ ಒಂದೇ ಒಂದು ಪಂದ್ಯದಲ್ಲೂ ಚಹಲ್ ಅವರನ್ನು ಆಡಿಸಿಲ್ಲ.

ಇದನ್ನೂ ಓದಿ : T20 World Cup 2022 : ಟೀಮ್ ಇಂಡಿಯಾದ ಟಿ20 ವಿಶ್ವಕಪ್ ವೈಫಲ್ಯದ ಹಿಂದಿನ ಅಸಲಿ ಕಥೆ..!

ಇದನ್ನೂ ಓದಿ : T20 World Cup 2022 : ವಿಶ್ವಕಪ್‌ ಫೈನಲ್‌ ರದ್ದಾಗುತ್ತಾ? ಟ್ರೋಫಿ ಹಂಚಿಕೊಳ್ತಾರಾ ಇಂಗ್ಲೆಂಡ್ – ಪಾಕಿಸ್ತಾನ

ಇದನ್ನೂ ಓದಿ : IPL 2023 :ಕೀರಾನ್ ಪೊಲಾರ್ಡ್ ಗೆ ಕೋಕ್ ಕೊಟ್ಟ ಮುಂಬೈ ಇಂಡಿಯನ್ಸ್‌

ಯುಜ್ವೇಂದ್ರ ಚಹಲ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಆಡಿದ 69 ಪಂದ್ಯಗಳಿಂದ 85 ವಿಕೆಟ್ ಪಡೆದಿದ್ದಾರೆ. ಇದು ಕೇವಲ 6 ವರ್ಷಗಳ ಅವಧಿಯಲ್ಲಿ. ಆದರೆ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಮಾತ್ರ ಚಹಲ್’ಗೆ ಅವಕಾಶ ನೀಡದೆ ಅನ್ಯಾಯ ಮಾಡಲಾಗಿದೆ.

ಯುಜ್ವೇಂದ್ರ ಚಹಲ್ ಅವರಿಗೀಗ 32 ವರ್ಷ. ಹೀಗಾಗಿ 2024ರ ಟಿ20 ವಿಶ್ವಕಪ್’ನಲ್ಲಿ ಚಹಲ್ ಕಾಣಿಸಿಕೊಳ್ಳುವುದು ಅನುಮಾನ. ಹೀಗಾಗಿ ಭಾರತ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್’ಗಳನ್ನು ಪಡೆದಿರುವ ಸ್ಪಿನ್ನರ್ ಒಬ್ಬನ ಕರಿಯರ್ ಟಿ20 ವಿಶ್ವಕಪ್’ನಲ್ಲಿ ಒಂದೇ ಒಂದು ಪಂದ್ಯವಾಡದೆ ಅಂತ್ಯವಾಗಲಿದೆ.

(Yuzvendra Chahal) Spinner who has taken most wickets in T20 international cricket for India. He is the spinner who has taken the most wickets in T20 international cricket for India in 2022. But when it comes to the T20 World Cup, he did not get a chance to play in a single match. This is the story of Team India’s leg-spinner Yuzvendra Chahal.

Comments are closed.