Tiger attacks lovers: ಕಾಡಿನಲ್ಲಿ ಮಜಾ ಮಾಡುತ್ತಿದ್ದ ಪ್ರೇಮಿಗಳ ಮೇಲೆ ಹುಲಿ ಅಟ್ಯಾಕ್​ : ಯುವಕ ಸಾವು, ಯುವತಿ ಸ್ಥಿತಿ ಗಂಭೀರ

Tiger attacks lovers : ಪ್ರೇಮಿಗಳು ಏಕಾಂತದ ಕ್ಷಣಗಳನ್ನು ತುಂಬಾನೇ ಇಷ್ಟ ಪಡುತ್ತಾರೆ. ಈ ಮಧುರ ಕ್ಷಣಗಳನ್ನು ಅನುಭವಿಸಲು ಪ್ರೇಮಿಗಳು ಅಜ್ಞಾತ ಸ್ಥಳಗಳನ್ನು ಆಯ್ಕೆ ಮಾಡುವುದೂ ಉಂಟು. ಇದೇ ರೀತಿಯ ಕೆಲಸ ಮಾಡಲು ಹೋಗಿ ಯುವಕನೊಬ್ಬ ಹುಲಿಯ ಬಾಯಿಗೆ ಆಹಾರವಾಗಿದ್ದಾನೆ..! ಮಹಾರಾಷ್ಟ್ರದ ವಾಡ್ಸಾ ತಹಸಿಲ್​​ನ ಉಸೇಗಾಂವ್​​ ಸಮೀಪದ ಕಾಡಿನಲ್ಲಿ ಈ ದುರ್ಘಟನೆ ಸಂಭವಿಸಿದೆ.


ಜೀವನ ಪೂರ್ತಿ ಸುಖವಾಗಿ ಬಾಳುತ್ತೇವೆ ಎಂದು ಕನಸು ಕಂಡಿದ್ದ ಆ ಜೋಡಿಗೆ ಮುಂದೆ ಇಂತಹದ್ದೊಂದು ದುರ್ಘಟನೆ ಸಂಭವಿಸಬಹುದು ಎಂಬುದರ ಊಹೆ ಕೂಡ ಇರಲಿಲ್ಲ. ಕಾಡಿನಲ್ಲಿ ಜೊತೆಯಾಗಿ ಕುಳಿತು ಮುಂದಿನ ಜೀವನದ ಕನಸು ಕಾಣುತ್ತಿದ್ದ ಅವರಿಬ್ಬರಿಗೆ ತಮ್ಮ ಕನಸುಗಳು ಕಣ್ಣೆದುರಲ್ಲೇ ಭಗ್ನವಾಗುತ್ತದೆ ಎಂಬ ಸಣ್ಣ ಮಾಹಿತಿ ಕೂಡ ಇರಲಿಲ್ಲ.


ಇಬ್ಬರು ಪ್ರೇಮಿಗಳ ಜೀವನದಲ್ಲಿ ಶತ್ರುವಾಗಿ ಬಂದೆರಿಗಿದ ಹುಲಿರಾಯನವು ಕೋರೆಗಾಂವ್​ನ ಚೋಪ್​ ನಿವಾಸಿ ಅಜಿತ್​ ಸೋಮೇಶ್ವರ ನಾಕಡೆ(21) ಎಂಬಾತನ ಮೇಲೆ ಬಂದೆರಗಿದೆ. ಹಿಂದಿನಿಂದ ನುಗ್ಗಿ ಬಂದು ದಾಳಿ ನಡೆಸಿದ ಹುಲಿಯು ಕ್ಷಣ ಮಾತ್ರದಲ್ಲಿಯೇ ಅಜಿತ್​ ಸೋಮೇಶ್ವರ್ ನಾಕಡೆಯನ್ನು ಕೊಂದು ಹಾಕಿದೆ. ಯುವತಿ ಕೂಡ ಹುಲಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈಕೆಯನ್ನು ಹೆಚ್ಚಿನ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.


ಅಜಿತ್​ ಮೃತದೇಹವನ್ನು ಕಾಡಿನ ಕಡೆಗೆ ಸ್ವಲ್ಪ ದೂರದವರೆಗೆ ಹುಲಿಯು ಎಳೆದುಕೊಂಡು ಹೋಗಿತ್ತು ಎನ್ನಲಾಗಿದೆ. ಗ್ರಾಮಸ್ಥರಿಂದ ಮಾಹಿತಿಯನ್ನು ಪಡೆದುಕೊಂಡ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಎರಡು ಗಂಟೆಗಳ ಕಾಲ ಕಾರ್ಯಾಚರಣೆಯನ್ನು ನಡೆಸಿ ಕೊನೆಗೂ ಅಜಿತ್​ ಶವವನ್ನು ಪತ್ತೆ ಹಚ್ಚಿದ್ದಾರೆ. ಅರಣ್ಯ ಸಿಬ್ಬಂದಿಯು ಸ್ಥಳದಲ್ಲಿಯೇ ಪಂಚನಾಮೆ ಕಾರ್ಯವನ್ನು ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

ಈ ಪ್ರದೇಶದಲ್ಲಿ ಹುಲಿ ಇದೆ ಎಂಬುದು ಗ್ರಾಮಸ್ಥರಿಗೆ ಮೊದಲೇ ತಿಳಿದಿತ್ತು. ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆಯು ಹುಲಿ ಇರುವಿಕೆ ಬಗ್ಗೆ ಬೋರ್ಡ್ ಕೂಡ ಹಾಕಿಸಿತ್ತು. ಆದರೂ ಸಹ ಅಜಿತ್​ ಬೈಕ್​ನಲ್ಲಿ ಯುವತಿಯನ್ನು ಕರೆದುಕೊಂಡು ಬಂದು ಕಾಡಿನ ಒಳಕ್ಕೆ ಆಕೆಯನ್ನು ಕರೆದೊಯ್ದಿದ್ದ ಎನ್ನಲಾಗಿದೆ.

ಇದನ್ನು ಓದಿ : lpg cylinder price increased : ಶ್ರೀಸಾಮಾನ್ಯನ ಜೇಬಿಗೆ ಮತ್ತೊಂದು ಬರೆ : ಗೃಹ ಬಳಕೆಯ ಸಿಲಿಂಡರ್​ ದರದಲ್ಲಿ 50 ರೂ. ಏರಿಕೆ

ಇದನ್ನೂ ಓದಿ : Mohan Juneja : ಸ್ಯಾಂಡಲ್‌ವುಡ್‌ ಖ್ಯಾತ ಹಾಸ್ಯನಟ ಮೋಹನ್‌ ಜುನೇಜ ಇನ್ನಿಲ್ಲ

Tiger attacks lovers, kills boy, injures girl in Wadsa jungle

Comments are closed.