Turkey Earthquake: ಭೂಕಂಪಕ್ಕೆ ತತ್ತರಿಸಿದ ಟರ್ಕಿ: ಕಳೆದ 24 ಗಂಟೆಯಲ್ಲಿ ನಾಲ್ಕನೇ ಬಾರಿ 5.6 ತೀವ್ರತೆಯ ಭೂಕಂಪ

ನವದೆಹಲಿ: (Turkey Earthquake) ನಿನ್ನೆಯಷ್ಟೇ ಟರ್ಕಿ ಭೂಕಂಪಕ್ಕೆ ತುತ್ತಾಗಿದ್ದು, ಸಾವಿರಾರು ಕಟ್ಟಡಗಳು ನೆಲಕ್ಕುರುಳಿವೆ. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಧ್ಯೆ ಟರ್ಕಿಯಲ್ಲಿ ಕಳೆದ 24 ಗಂಟೆಗಳಲ್ಲಿ ಸತತ ನಾಲ್ಕನೇ ಬಾರಿ ಟರ್ಕಿ ಭೂಕಂಪಕ್ಕೆ ಸಾಕ್ಷಿಯಾಗಿದ್ದು, ಮಧ್ಯ ಟರ್ಕಿ ಪ್ರದೇಶದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಈಗಾಗಲೇ ಟರ್ಕಿ ಭೂಕಂಪಕ್ಕೆ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದು, ಸಾವಿರಾರು ಸಾವು ನೋವುಗಳನ್ನು ಕಂಡಿದೆ. ಸೋಮವಾರ ಮುಂಜಾನೆ ದಕ್ಷಿಣ ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ ಮೊದಲು 7.8 ತೀವ್ರತೆಯ ಪ್ರಬಲವಾದ ಭೂಕಂಪ ಸಂಭವಿಸಿದೆ. ಇದು ನೂರ್ಡಗಿ ಪಟ್ಟಣದಿಂದ ಸುಮಾರು 26 ಕಿಲೋಮೀಟರ್ (16 ಮೈಲುಗಳು) ಗಾಜಿಯಾಂಟೆಪ್‌ನಿಂದ ಸುಮಾರು 33 ಕಿಲೋಮೀಟರ್ (20 ಮೈಲುಗಳು) ದೂರದಲ್ಲಿ ಕೇಂದ್ರೀಕೃತವಾಗಿತ್ತು. ಎರಡನೇ ಭೂಕಂಪವು ಆಗ್ನೇಯ ಟರ್ಕಿಯ ಕಹ್ರಮನ್ಮರಸ್ ಪ್ರದೇಶದಲ್ಲಿ 7.6 ತೀವ್ರತೆಯ ಸಂಭವಿಸಿದೆ. ನಂತರ ಸಂಜೆಯ ಹೊತ್ತಲ್ಲಿ ಮಧ್ಯ ಟರ್ಕಿಯಲ್ಲಿ 6.0 ತೀವ್ರತೆಯ ಮೂರನೇ ಭೂಕಂಪ ಸಂಭವಿಸಿದೆ.

Turkey 4th earthquake: Turkey shaken by earthquake: 5.6 magnitude earthquake for the fourth time in last 24 hours

ನಿನ್ನೆ ಮೂರು ಬಾರಿ ನಡೆದ ಭೂಕಂಪದಲ್ಲಿ ಕನಿಷ್ಠ 1,600 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಮತ್ತು ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಅಲ್ಲದೇ ಸಾವಿರಾರು ಕಟ್ಟಡಗಳು ನೆಲಸಮವಾಗಿವೆ. ಇದಾದ ಬಳಿಕ 24 ಗಂಟೆಗಳಲ್ಲಿ 4ನೇ ಬಾರಿಗೆ ಟರ್ಕಿ ಭೂಕಂಪಕ್ಕೆ ಸಾಕ್ಷಿಯಾಗಿದೆ. ಮಧ್ಯ ಟರ್ಕಿ ಪ್ರದೇಶದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದ್ದು, 2 ಕಿಮೀ ಆಳದಲ್ಲಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

Turkey 4th earthquake: Turkey shaken by earthquake: 5.6 magnitude earthquake for the fourth time in last 24 hours

ಟರ್ಕಿಯಲ್ಲಿ ಅನೇಕ ನಗರಗಳು ಸ್ಮಶಾನ ಸದೃಶವಾಗಿ ಮಾರ್ಪಟ್ಟಿದ್ದು, ಭೂಕಂಪದ ತೀವ್ರತೆಗೆ ಸಾವಿರಾರು ಕಟ್ಟಡಗಳು ನೆಲಸಮಗೊಂಡಿವೆ. ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಸರಿಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇನ್ನೂ ಸಾವಿರಾರು ಮಂದಿ ಕಾಣೆಯಾಗಿದ್ದಾರೆ. ಎಂಟು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದಲ್ಲದೇ ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ನಲವತ್ತೈದು ದೇಶಗಳಿಂದ ನೆರವು ಘೋಷಣೆ ಮಾಡಲಾಗಿದೆ.

ಟರ್ಕಿ ವಿಶ್ವದ ಅತ್ಯಂತ ಸಕ್ರಿಯ ಭೂಕಂಪ ವಲಯಗಳಲ್ಲಿ ಒಂದಾಗಿದೆ. 1999 ರಲ್ಲಿ 7.4-ತೀವ್ರತೆಯ ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಡಜ್ಸ್ ಒಂದಾಗಿದೆ. ಈ ಭೂಕಂಪವು ಇಸ್ತಾನ್‌ಬುಲ್‌ನಲ್ಲಿ ಸುಮಾರು 1,000 ಸೇರಿದಂತೆ 17,000 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ.

ಇದನ್ನೂ ಓದಿ : Students sick-food poisoning: ಮಂಗಳೂರು: ವಿಷಾಹಾರ ಸೇವನೆ 100ಕ್ಕೂ ಅಧಿಕ ವಿಧ್ಯಾರ್ಥಿನಿಯರು ಅಸ್ವಸ್ಥ

ಇದನ್ನೂ ಓದಿ : Sexual harassment of a boy: 16 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ಪ್ರಕರಣ: ಕೇರಳದ ತೃತಿಯಲಿಂಗಿ ಮಹಿಳೆಗೆ 7 ವರ್ಷ ಜೈಲು

Turkey Earthquake: Turkey shaken by earthquake: 5.6 magnitude earthquake for the fourth time in last 24 hours

Comments are closed.