ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆರನ್ ಪಿಂಚ್

ನವದೆಹಲಿ : ಆಸ್ಟ್ರೇಲಿಯಾ ಖ್ಯಾತ ಆಟಗಾರ, ಟಿ20 ಕ್ರಿಕೆಟ್‌ ತಂಡದ ನಾಯಕ ಆ್ಯರನ್‌ ಫಿಂಚ್‌ (Aaron Finch Retirement) ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ವಿಶ್ವದ ಅತ್ಯಂತ ಶ್ರೇಷ್ಠ ಆಟಗಾರರೊಂದಿಗೆ ಆಡಿವುದು ನನಗೆ ಗೌರವ ತಂದಿದೆ ಎಂದು ಅವರು ಹೇಳಿದ್ದಾರೆ. T20 ವಿಶ್ವಕಪ್‌ನ ನಾಕೌಟ್ ಹಂತಕ್ಕೆ ಆಸ್ಟ್ರೇಲಿಯಾ ತಂಡವನ್ನು ಮುನ್ನೆಡೆಸಲು ವಿಫಲರಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. 2024 ರಲ್ಲಿ ನಡೆಯುವ T20 ವಿಶ್ವಕಪ್ ವರೆಗೆ ನಾನು ಆಡುವುದಿಲ್ಲ. ನಾನು ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ ಅನ್ನೋದನ್ನು ಅರಿತು ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.

2013 ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಆರನ್ ಪಿಂಚ್ ಇದುವರೆಗೆ ಒಟ್ಟು 146 ಏಕದಿನ ಪಂದ್ಯಗಳನ್ನು ಆಡಿದ್ದು, 38.9ರ ಸರಾಸರಿಯಲ್ಲಿ 5406ರನ್ ಗಳಿಸಿದ್ದಾರೆ. ಇನ್ನು ಇದುವರೆಗೆ 103 ಟಿ೨೦ ಪಂದ್ಯಗಳನ್ನು ಆಡಿದ್ದು,34.3ರ ಸರಾಸರಿಯಲ್ಲಿ 3120ರನ್ ಗಳಿಸಿದ್ದಾರೆ. ವೃತ್ತಿ ಬದುಕಿನಲ್ಲಿ ಕೇವಲ 5 ಟೆಸ್ಟ್ ಪಂದ್ಯಗಳನ್ನು ಆಡಿರುವ ಪಿಂಚ್ ಕೇವಲ 278 ರನ್ ಬಾರಿಸಿದ್ದಾರೆ.

ನಾನು ಪ್ರೀತಿಸುವ ಆಟವನ್ನು ಉನ್ನತ ಮಟ್ಟದಲ್ಲಿ ಆಡಲು ಅವಕಾಶ ನೀಡಿದ್ದಕ್ಕಾಗಿ ನನ್ನ ಕುಟುಂಬಕ್ಕೆ, ವಿಶೇಷವಾಗಿ ನನ್ನ ಪತ್ನಿ ಆಮಿ, ನನ್ನ ತಂಡದ ಸಹ ಆಟಗಾರರು, ಕ್ರಿಕೆಟ್ ವಿಕ್ಟೋರಿಯಾ, ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯನ್ ಕ್ರಿಕೆಟಿಗರ ಸಂಘಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಅಂತರರಾಷ್ಟ್ರೀಯ ವೃತ್ತಿಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ನಾನು ದೊಡ್ಡ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.

2021 ರಲ್ಲಿ ಚೊಚ್ಚಲ T20 ವಿಶ್ವಕಪ್ ಗೆಲುವು ಮತ್ತು 2015 ರಲ್ಲಿ ತವರು ನೆಲದಲ್ಲಿ ಏಕದಿನ ವಿಶ್ವಕಪ್ ಎತ್ತಿ ಹಿಡಿರುವುದು ನನಗೆ ಸಾಕಷ್ಟು ಖುಷಿಯನ್ನು ಕೊಟ್ಟಿದೆ.12 ವರ್ಷಗಳ ಕಾಲ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಲು ಮತ್ತು ಸಾರ್ವಕಾಲಿಕ ಶ್ರೇಷ್ಠ ಆಟಗಾರರೊಂದಿಗೆ ಮತ್ತು ವಿರುದ್ಧವಾಗಿ ಆಡಲು ಸಾಧ್ಯವಾಗುವುದು ನಂಬಲಾಗದ ಗೌರವವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಆರನ್ ಪಿಂಚ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರು ತಮ್ಮ ಏಕದಿನ ತಂಡದ ನಾಯಕತ್ವಕ್ಕೆ ನಿವೃತ್ತಿ ಘೋಷಿಸಿದ್ದರು.12 ವರ್ಷಗಳ ಕಾಲ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಲು ಮತ್ತು ಸಾರ್ವಕಾಲಿಕ ಶ್ರೇಷ್ಠ ಆಟಗಾರರೊಂದಿಗೆ ಮತ್ತು ವಿರುದ್ಧವಾಗಿ ಆಡಲು ಸಾಧ್ಯವಾಗುವುದು ನಂಬಲಾಗದ ಗೌರವವಾಗಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ : 5 ಟೆಸ್ಟ್ ಪಂದ್ಯಗಳ ಮೇಲೆ ನಿಂತಿದೆ ರೋಹಿತ್ ಶರ್ಮಾ ಟೆಸ್ಟ್ ಭವಿಷ್ಯ

ಇದನ್ನೂ ಓದಿ : Shikhar Dhawan Aesha Mukerji : ಮಾಜಿ ಪತ್ನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಗಬ್ಬರ್, ಶಿಖರ್ ಮಾಜಿ ಪತ್ನಿಗೆ ದೆಹಲಿ ಕೋರ್ಟ್ ಖಡಕ್ ವಾರ್ನಿಂಗ್

Aaron Finch Australia Announces Retirement From International Cricket

Comments are closed.