kichcha sudeep : ಅಜಯ್​ ದೇವಗನ್​- ಕಿಚ್ಚ ಸುದೀಪ್​ ಹಿಂದಿ ವಾರ್​..! ನಾವೂ ಭಾರತೀಯರಲ್ಲವೇ ಎಂದ ಅಭಿನಯ ಚಕ್ರವರ್ತಿ

kichcha sudeep : ಹಿಂದಿ ರಾಷ್ಟ್ರ ಭಾಷೆ ಎಂಬ ವಿಚಾರವಾಗಿ ಸದಾ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಹಿಂದಿ ಹೇರಿಕೆಯ ವಿರುದ್ಧ ಹೋರಾಟ ಬಹಳ ಸಮಯದಿಂದ ನಡೆಯುತ್ತಲೇ ಬಂದಿದೆ. ಇದೀಗ ಈ ಹಿಂದಿ ರಾಷ್ಟ್ರ ಭಾಷೆ ಫೈಟ್​ ಸ್ಟಾರ್​ ನಟರಿಗೂ ವಿಸ್ತರಿಸಿದೆ. ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದ ನಟ ಸುದೀಪ್​ರಿಗೆ ಬಾಲಿವುಡ್​ ನಟ ಅಜಯ್​ ದೇವಗನ್​ ಪ್ರತಿಕ್ರಿಯೆ ನೀಡಿದ್ದರು. ಅಜಯ್​ ದೇವಗನ್​ರ ಪ್ರತಿಕ್ರಿಯೆಗೆ ಪ್ರತ್ಯುತ್ತರ ನೀಡಿರುವ ನಟ ಕಿಚ್ಚ ಸುದೀಪ್​ ನಾವೂ ಭಾರತೀಯರಲ್ಲವೇ ಸರ್​..? ಎಂದು ಅಜಯ್​ ದೇವಗನ್​ರನ್ನು ಪ್ರಶ್ನಿಸಿದ್ದಾರೆ.


ಆಗಿದ್ದೇನು ?
ನಟ ಕಿಚ್ಚ ಸುದೀಪ್​ ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಬಾಲಿವುಡ್​ ನಟ ಅಜಯ್​ ದೇವಗನ್​ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದ ಮೇಲೆ ನಿಮ್ಮ ಭಾಷೆಯ ಸಿನಿಮಾಗಳನ್ನೇಕೆ ಹಿಂದಿಯಲ್ಲಿ ಡಬ್​ ಮಾಡಿ ತೆರೆಗೆ ತರುತ್ತೀರಿ..? ಹಿಂದಿ ನಮ್ಮ ಮಾತೃ ಭಾಷೆ. ಈ ಹಿಂದೆ ಇದು ರಾಷ್ಟ್ರ ಭಾಷೆಯಾಗಿತ್ತು. ಮುಂದೆಯೂ ರಾಷ್ಟ್ರ ಭಾಷೆಯಾಗಿಯೇ ಇರಲಿದೆ ಎಂದು ಟ್ವೀಟ್​ ಮಾಡಿದ್ದರು.


ಮೊದಲು ಈ ಚರ್ಚೆಗೆ ಅಂತ್ಯ ಹಾಡಲು ಮುಂದಡಿಯಿಟ್ಟದ್ದ ನಟ ಸುದೀಪ ನಾನು ಬೇರೆಯದ್ದೊಂದು ಸನ್ನಿವೇಶದಲ್ಲಿ ಈ ರೀತಿಯಾಗಿ ಹೇಳಿದ್ದೆ. ನಾನು ದೇಶದಲ್ಲಿರುವ ಎಲ್ಲಾ ಭಾಷೆಗಳನ್ನು ಗೌರವಿಸುತ್ತೇನೆ. ಯಾರನ್ನೋ ನೋಯಿಸಲು ಅಥವಾ ಪ್ರಚೋದಿಸಲು ಅಥವಾ ಭಾಷಾ ವಿವಾದದ ಚರ್ಚೆಯನ್ನು ಹುಟ್ಟು ಹಾಕಲು ನಾನು ಈ ಹೇಳಿಕೆಯನ್ನು ನೀಡಿಲ್ಲ ಎಂದು ನಟ ಕಿಚ್ಚ ಸುದೀಪ ಹೇಳಿದ್ದರು. ಆದರೆ ಇದೀಗ ಮತ್ತೆ ಹೊಸದೊಂದು ಪ್ರಶ್ನೆಯನ್ನು ನಟ ಕಿಚ್ಚ ಸುದೀಪ್ ಅಜಯ್​ ದೇವಗನ್​ಗೆ ಟ್ವೀಟ್​ನಲ್ಲಿ ಕೇಳಿದ್ದಾರೆ.


ಅಜಯ್​ ದೇವಗನ್​ ಸರ್​ ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್​ನ್ನು ನಾನು ಅರ್ಥ ಮಾಡಿಕೊಂಡೆ. ಇದಕ್ಕೆ ಕಾರಣ ನಾವು ಹಿಂದಿಯನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ ಹಾಗೂ ಕಲಿತಿದ್ದೇವೆ. ಇದರಲ್ಲಿ ತಪ್ಪಿಲ್ಲ ಸರ್​.ಆದರೆ ನನಗೆ ಆಶ್ಚರ್ಯ ಎನಿಸುವುದು ಏನೆಂದರೆ ನಾನು ಇದಕ್ಕೆ ಪ್ರತಿಯಾಗಿ ಕನ್ನಡದಲ್ಲಿಯೇ ಪ್ರತಿಕ್ರಿಯೆ ನೀಡುತ್ತಿದ್ದರೆ ಏನಾಗುತ್ತಿತ್ತು..? ಎಂಬುದಾಗಿದೆ. ನಾವು ಕೂಡ ಭಾರತಕ್ಕೆ ಸೇರಿದವರಲ್ಲವೇ ಸರ್​..? ಎಂದು ಪ್ರಶ್ನೆ ಮಾಡಿದ್ದಾರೆ .

ಇದನ್ನು ಓದಿ : Graeme Smith : ಜನಾಂಗೀಯ ನಿಂದನೆ ಆರೋಪ ಮುಕ್ತರಾದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್

ಇದನ್ನೂ ಓದಿ : Thanjavur : ತೇರು ಎಳೆಯುವ ವೇಳೆಯಲ್ಲಿ ವಿದ್ಯುತ್‌ ಅವಘಡ : 11 ಮಂದಿ ದುರ್ಮರಣ

kichcha sudeep asks ajay devgan that what if my response is written in kannada know this complete national language discussion

Comments are closed.