ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಕುಡಿದ ಮತ್ತಲ್ಲಿ ದುಷ್ಕೃತ್ಯ , ಆರೋಪಿ ಸ್ನೇಹಿತ ಅರೆಸ್ಟ್‌

ಉಡುಪಿ : ಕುಡಿದ ಮತ್ತಲ್ಲಿ ತನ್ನ ಸ್ನೇಹಿತೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ. ಉಡುಪಿ ಮಹಿಳಾ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ.

ದೆಹಲಿ ಮೂಲದ ಆರ್ಯನ್‌ ಚಂದಾವನಿ ಎಂಬಾತನೇ ಗೆಳೆತಿಯ ಮೇಲೆ ಅತ್ಯಾಚಾರವನ್ನು ಎಸಗಿದವನು. ಇಂಜಿನಿಯರಿಂಗ್‌ ವಿದ್ಯಾರ್ಥಿನಿಯಾಗಿರುವ ಸ್ನೇಹಿತಯ ಮೇಲೆ ಉಡುಪಿಯ ಇಂದ್ರಾಳಿಯಲ್ಲಿರುವ ಫ್ಲ್ಯಾಟ್‌ನಲ್ಲಿ ಕುಡಿದ ನಶೆಯಲ್ಲಿ ಅತ್ಯಾಚಾರವೆಸಗಿದ್ದ. ಈ ಕುರಿತು ಸ್ನೇಹಿತೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಸಂತ್ರಸ್ತೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಉಡುಪಿಯ ಮಹಿಳಾ ಠಾಣೆಯ ಪೊಲೀಸರು ಆರೋಪಿ ಆರ್ಯನ್‌ ಚಂದಾವನಿ ಎಂಬಾತನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ : ಜೂಜಾಡಲು ತನ್ನ ಅಪಹರಣ ನಾಟಕ ; ಪತಿಯಿಂದ 5 ಲಕ್ಷ ಪಡೆದ ಕಿಲಾಡಿ ಮಹಿಳೆ

ಇದನ್ನೂ ಓದಿ : ಕುಡಿದ ಮತ್ತಲ್ಲಿ ಪತ್ನಿಯೊಂದಿಗೆ ಜಗಳ : ವಿದ್ಯುತ್‌ ಕಂಬಕ್ಕೆ ನೇಣು ಹಾಕಿಕೊಂಡ ಕುಡುಕ !

( Engineering student rape: Drunk and misdemeanor, accused friend Arrest )

Comments are closed.