Cough Syrup : ಕೆಮ್ಮಿನ ಔಷಧ ಕುಡಿದು 66 ಮಕ್ಕಳ ಸಾವು; ತನಿಖೆಗೆ ಮುಂದಾದ WHO

ನವದೆಹಲಿ : Cough Syrup ಕೆಮ್ಮು ಮತ್ತು ನೆಗಡಿ ರೋಗ ಗುಣಪಡಿಸಲು ಭಾರತದ ಔಷಧ ಕಂಪನಿ ತಯಾರಿಸಿದ ಔಷಧಗಳನ್ನ ಸೇವಿಸಿ ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳು ಮೃತಪಟ್ಟಿದ್ದಾರೆಂದು ಆರೋಪ ಕೇಳಿ ಬಂದಿದೆ. ಈ ಸಂಬಂಧ ತನಿಖೆ ನಡೆಸುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಪಶ್ಚಿಮ ಆಫ್ರಿಕಾದ ಗ್ಯಾಂಬೀಯಾದಲ್ಲಿ ಇತ್ತೀಚೆಗೆ ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಮಕ್ಕಳ ಪೈಕಿ 66 ಮಕ್ಕಳು ಭಾರತದಲ್ಲಿ ಮೇಡನ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ಕಂಪನಿ ತಯಾರಿಸಿದ ನಾಲ್ಕು ಔಷಧಿಗಳನ್ನ ಸೇವಿಸಿದ್ರು. ಇದ್ರ ಬೆನ್ನಲ್ಲೆ ಮಧ್ಯ ಪ್ರವೇಶಿಸಿರೋ ವಿಶ್ವ ಆರೋಗ್ಯ ಸಂಸ್ಥೆ WHO, ಭಾರತೀಯ ಕಂಪನಿಯು ತಯಾರಿಸಿದ ನಾಲ್ಕು ಜ್ವರ, ಶೀತ ಮತ್ತು ಕೆಮ್ಮು ಸಿರಪ್‌ಗಳ ಬಗ್ಗೆ ಎಚ್ಚರಿಕೆ ನೀಡಿದೆ, ಅವುಗಳನ್ನು ಬಳಸದಂತೆ ಸೂಚನೆ ಕೊಟ್ಟಿದೆ.

ಈ ಬಗ್ಗೆ ಟ್ವೀಟ್ ಮೂಲಕ ಅಧಿಕೃತ ಮಾಹಿತಿ ನೀಡಿರೋ WHO ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸ್‌ ಹರಿಯಾಣ ಮೂಲದ ಮೇಡನ್ ಫಾರ್ಮಾಸ್ಯುಟಿಕಲ್ಸ್‌ನಿಂದ ತಯಾರಿಸಲ್ಪಟ್ಟ  ಪ್ರೋಮೆಥಾಜಿನ್ ಓರಲ್ ಸೊಲ್ಯೂಷನ್, ಕೋಫೆಕ್ಸ್‌ಮಾಲಿನ್ ಬೇಬಿ ಕೆಮ್ಮಿನ ಸಿರಪ್, ಮಾಕೋಫ್ ಬೇಬಿ ಕೆಮ್ಮಿನ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ ಅನ್ನ ಬಳಸದಂತೆ ಸೂಚಿಸಿದ್ದಾರೆ.

ಭಾರತೀಯ ಕಂಪನಿಯಾದ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ 4 ಕೆಮ್ಮು ಮತ್ತು ಶೀತ ಸಿರಪ್‌ಗಳ ವೈದ್ಯಕೀಯ ಉತ್ಪನ್ನದ ಗುಣಮಟ್ಟದ ಬಗ್ಗೆ ಅನುಮಾನವಿದೆ ಎಂದಿರುವ WḨ̧O ಇದರಲ್ಲಿ ಬಳಕೆ ಮಾಡಲಾದ ರಾಸಾಯನಿಕಗಳು ವಿಷಕಾರಿ ಮತ್ತು ಮಾರಣಾಂತಿಕವಾಗಿವೆ ಎಂದು ಎಚ್ಚರಿಕೆ ನೀಡಿದೆ. ನಾಲ್ಕು ಉತ್ಪನ್ನಗಳ ಮಾದರಿಗಳ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಸ್ವೀಕಾರಾರ್ಹವಲ್ಲದ ಪ್ರಮಾಣದ ಡೈಥಿಲೀನ್ ಗ್ಲೈಕೋಲ್ ಮತ್ತು ಎಥಿಲೀನ್ ಗ್ಲೈಕೋಲ್ ಅನ್ನು ಒಳಗೊಂಡಿದೆ. ಈ ಸಿರಪ್‌ ಸೇವನೆಯಿಂದ ಮೂತ್ರಪಿಂಡಕ್ಕೆ ಹಾನಿಯಾಗಬಹುದು ಅಂತಾ WHO ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಜುಲೈನಲ್ಲಿ ಗ್ಯಾಂಬಿಯಾದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 66 ಮಕ್ಕಳು ಈ ಸಿರಪ್‌ ಸೇವೆನೆ ಬಳಿಕ ಮೂತ್ರಪಿಂಡ ವೈಫಲ್ಯದಿಂದ ಅಸುನೀಗಿದ್ದಾರೆ ಎಂಬ ಶಂಕೆ ಇದೆ ಎಂದು WHO ತಿಳಿಸಿದೆ. ಈ ಔಷಧಿಗಳ ಸೇವನೆಯಿಂದಾಗಿ ಹೊಟ್ಟೆ ನೋವು, ವಾಂತಿ, ಅತಿಸಾರ, ತಲೆನೋವು, ಬದಲಾದ ಮಾನಸಿಕ ಸ್ಥಿತಿ ಮತ್ತು ಮೂತ್ರಪಿಂಡದ ಗಾಯ ಉಲ್ಬಣಿಸಬಹುದು. ಇದು ಮಾರಣಾಂತಿಕವಾಗಿಯೂ ಪರಿಣಮಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಗಂಭೀರ ಎಚ್ಚರಿಕೆ ನೀಡಿದೆ.

ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ ಕಂಪನಿ ತಯಾರಿಸಿದ ನಾಲ್ಕು ಕೆಮ್ಮಿನ ಸಿರಪ್‌ಗಳ ಪರೀಕ್ಷೆ ನಡೆದಿದ್ದು, ಕಂಪನಿ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೊಷಿಸಿದೆ. ಈ ಕುರಿತು ತನಿಖೆ ನಡೆಸುವುದಾಗಿ ಕೇಂದ್ರ ಸರ್ಕಾರ ಕೂಡ ಘೋಷಣೆ ಮಾಡಿದೆ.

ಮೂಲಗಳ ಪ್ರಕಾರ, ಭಾರತದ ಅಪೆಕ್ಸ್ ಡ್ರಗ್ ರೆಗ್ಯುಲೇಟರಿ ಅಥಾರಿಟಿ – ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ , ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ, ಸೆಪ್ಟೆಂಬರ್ 29 ರಿಂದಲೇ ತನಿಖೆಯನ್ನ ಪ್ರಾರಂಭಿಸಿದೆ ಅಂತಾ ತಿಳಿದು ಬಂದಿದೆ. ಅಲ್ದೆ  ಹರಿಯಾಣದ ಈ ಕಂಪನಿಯು ಇದುವರೆಗೆ ಈ ನಾಲ್ಕು ಔಷಧಿಗಳನ್ನ ಗ್ಯಾಂಬಿಯಾಕ್ಕೆ ಮಾತ್ರ ಮಾರಾಟ ಮಾಡಿದೆ ಅಂತಾ ಗೊತ್ತಾಗಿದೆ.

ಇದನ್ನೂ ಓದಿ: Ravan Dahan : ಧಗಧಗನೇ ಉರಿಯುತ್ತಿದ್ದ ರಾವಣ ಜನರ ಮೇಲೆಯೇ ಬಿದ್ದ ಮುಂದೇನಾಯ್ತು ನೋಡಿ

ಇದನ್ನೂ ಓದಿ: Idol immersion : ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಪ್ರವಾಹ 8 ಮಂದಿ ಜಲಸಮಾಧಿ.. ಬೆಚ್ಚಿ ಬೀಳಿಸುತ್ತೆ ಪ್ರವಾಹದಲ್ಲಿ ಕೊಚ್ಚಿ ಹೋಗುವ ದೃಶ್ಯ

Cough Syrup Probing 4 Indian Cough Syrups After 66 Children Die In Gambia WHO

Comments are closed.