WOMAN KILLS HER LIVE IN PARTNER : ಮದುವೆಯಾಗಲು ಒಲ್ಲೆ ಎಂದ ಪ್ರಿಯಕರ : ಕತ್ತು ಕೊಯ್ದು ಸೂಟ್​ಕೇಸ್​ನಲ್ಲಿ ಶವವಿಟ್ಟ ಪ್ರಿಯತಮೆ

ದೆಹಲಿ : WOMAN KILLS HER LIVE IN PARTNER : ಪ್ರೀತಿ ಮಾಯೆ ಹುಷಾರು..! ಅಂತಾರೆ. ಪ್ರೀತಿಯಲ್ಲಿ ಬಿದ್ದು ಬಳಿಕ ಮದುವೆಯಾಗಿ ಒಳ್ಳೆಯ ಸಂಸಾರ ನಡೆಸುವವರು ನಮ್ಮ ಸಮಾಜದಲ್ಲಿದ್ದಾರೆ. ಅದರಂತೆಯೇ ಪ್ರೀತಿಯೆಂಬ ಮಾಯೆಯಿಂದಾಗಿ ಜೀವವನ್ನೇ ಕಳೆದುಕೊಂಡವರೂ ನಮ್ಮ ನಡುವೆ ಇದ್ದಾರೆ. ಈ ವಿಚಾರವನ್ನೆಲ್ಲ ಈಗ ಹೇಳಲು ಕಾರಣ ಕೂಡ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರೀತಿಯ ಹೆಸರಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ಜರುಗಿದೆ.

ದೆಹಲಿಯ ತಿಲ್​ಮೋರ್​ ಪೊಲೀಸ್​ ಠಾಣಾ ವ್ಯಾಪ್ತಿಯ ತುಳಸಿ ನಿಕೇತನ ಎಂಬ ಪ್ರದೇಶದಲ್ಲಿ ಈ ಘನಘೋರ ಘಟನೆ ಸಂಭವಿಸಿದೆ. ಲಿವ್​ ಇನ್​ ರಿಲೇಶನ್​ಶಿಪ್​ನಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯತಮ ಮದುವೆಯಾಗಲು ತನ್ನನ್ನು ನಿರಾಕರಿಸಿದ್ದಾನೆ ಎಂಬ ಒಂದೇ ಕಾರಂಣಕ್ಕೆ ಆತನ ಕತ್ತು ಸೀಳಿ ಸೂಟ್​ಕೇಸ್​ನಲ್ಲಿ ಶವವನ್ನು ತುಂಬಿಟ್ಟ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ .

ಹಿಂದೂ ಧರ್ಮಕ್ಕೆ ಸೇರಿದ ಮಹಿಳೆ ಫಿರೋಜ್​ ಎಂಬಾತನನ್ನು ಪ್ರೀತಿಸುತ್ತಿದ್ದಳು. ಅಲ್ಲದೇ ಇವರಿಬ್ಬರು ಲಿವ್ ಇನ್​ ರಿಲೇಶನ್​ಶಿಪ್​ನಲ್ಲಿಯೂ ಇದ್ದರು. ನಾಲ್ಕು ವರ್ಷಗಳ ಹಿಂದೆ ಪತಿಗೆ ವಿಚ್ಛೇದನ ನೀಡಿದ್ದ ಈಕೆ ಫಿರೋಜ್​ನೊಂದಿಗೆ ವಾಸಿಸಲು ಆರಂಭಿಸಿದ್ದಳು. ಮೃತ ಫಿರೋಜ್​ ದೆಹಲಿಯಲ್ಲಿ ಹೇರ್​ ಡ್ರೆಸ್ಸರ್ ಆಗಿ ಕೆಲಸ ಮಾಡುತ್ತಿದ್ದ. ಕೆಲವು ದಿನಗಳ ಹಿಂದೆ ಆರೋಪಿ ಮಹಿಳೆಯು ಫಿರೋಜ್​ ಬಳಿಯಲ್ಲಿ ತನ್ನನ್ನು ಮದುವೆಯಾಗು ಎಂದು ಕೇಳಿದ್ದಾಳೆ. ಆದರೆ ಇದಕ್ಕೆ ಫಿರೋಜ್​ ಒಪ್ಪಿಗೆ ನೀಡರಲಿಲ್ಲ.

ಫಿರೋಜ್​​ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದು ಮಹಿಳೆಯ ಕೋಪಕ್ಕೆ ಕಾರಣವಾಗಿತ್ತು. ಹೀಗಾಗಿ ಆಕೆ ಆತನ ಕತ್ತು ಸೀಳಿ ಹತ್ಯೆಗೈದಿದ್ದಾಳೆ . ಮಾತ್ರವಲ್ಲದೇ ಮೃತದೇಹವನ್ನು ಸಾಗಿಸಲು ದೊಡ್ಡ ಸೂಟ್​ಕೇಸ್​ ಖರೀದಿ ಮಾಡಿದ್ದಳು. ಸೂಟ್​ಕೇಸ್​ನಲ್ಲಿ ಮೃತದೇಹವನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಅನುಮಾನ ಬಂದು ತನಿಖೆ ನಡೆಸಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ .

ಇದನ್ನು ಓದಿ : Saligrama: ಗಿರಿ ಫ್ರೆಂಡ್ಸ್(ರಿ ) ಚಿತ್ರಪಾಡಿ  – ಸಾಲಿಗ್ರಾಮ: “ಮನೆಗೊಂದು ಮಕ್ಕಳ  ಹೆಸರಲ್ಲಿ ಗಿಡ ನೆಡುವ “ವಿನೂತನ ಕಾರ್ಯಕ್ರಮ

ಇದನ್ನೂ ಓದಿ : Indian Cricket Team: ಮೊಬೈಲ್‌ನಲ್ಲಿ ಮಹಿಳಾ ಕ್ರಿಕೆಟ್ ತಂಡದ ಫೈನಲ್ ವೀಕ್ಷಿಸಿದ ರೋಹಿತ್ ಶರ್ಮಾ & ಟೀಮ್

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

WOMAN KILLS HER LIVE IN PARTNER IN GHAZIABAD

Comments are closed.