Navjot Singh Sidhu : ವೈದ್ಯಕೀಯ ಪರೀಕ್ಷೆಗಾಗಿ ನವಜೋತ್​ ಸಿಂಗ್​ ಸಿಧು ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್​

Navjot Singh Sidhu : 1988ರ ರೋಡ್​ ರೇಜ್​ ಸಾವಿನ ಪ್ರಕರಣದಲ್ಲಿ ಒಂದು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಪಟಿಯಾಲ ಕೇಂದ್ರ ಕಾರಾಗೃಹದಲ್ಲಿರುವ ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್​ ಸಿಂಗ್​ ಸಿಧು ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಟಿಯಾಲಾ ಕೇಂದ್ರ ಕಾರಾಗೃಹದಿಂದ ಭಾರೀ ಭದ್ರತೆಯೊಂದಿಗೆ ನವಜೋತ್​ ಸಿಂಗ್​ ಸಿಧುರನ್ನು ಪಟಿಯಾಲದ ರಾಜೀಂದ್ರ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.


ನವಜೋತ್​ ಸಿಂಗ್​ ಸಿಧು ಜೈಲಿನಲ್ಲಿ ತಮಗೆ ವಿಶೇಷ ಆಹಾರ ಕ್ರಮ ಬೇಕೆಂದು ಆಗ್ರಹಿಸಿದ್ದಾರೆಂದು ಸಿಧು ಪರ ವಕೀಲ ಎಚ್​​ಪಿಎಸ್​ ವರ್ಮಾ ಹೇಳಿದ್ದಾರೆ. ವೈದ್ಯರ ಮಂಡಳಿಯು ಆಸ್ಪತ್ರೆಯಲ್ಲಿ ನವಜೋತ್​ ಸಿಂಗ್​ ಸಿಧುರ ವಿವರವಾದ ವೈದ್ಯಕೀಯ ಪರೀಕ್ಷೆಯನ್ನು ನಡೆಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ .


ವೈದ್ಯಕೀಯ ಪರೀಕ್ಷೆಯ ಬಳಿಕ ವೈದ್ಯರ ಮಂಡಳಿಯು ಯಾವ ವಿಶೇಷ ಆಹಾರದ ಅಗತ್ಯವಿದೆ ಎಂಬುದನ್ನು ತಿಳಿಸಲಿದೆ. ಈ ವರದಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ ಎಂದು ವಕೀಲ ವರ್ಮಾ ಮಾಹಿತಿ ನೀಡಿದರು.


ವಕೀಲರು ನೀಡಿರುವ ಮಾಹಿತಿಯ ಪ್ರಕಾರ ನವಜೋತ್​ ಸಿಂಗ್​ ಸಿಧು ಸಕ್ಕರೆ, ಮೈದಾ ಸೇರಿದಂತೆ ಕೆಲವೊಂದು ಪದಾರ್ಥಗಳನ್ನು ಸೇವನೆ ಮಾಡುವಂತಿಲ್ಲ. ಸಿಧು ಪಪ್ಪಾಯಿ, ಪೇರಲೆ, ಡಬಲ್​ ಟೋನ್ಡ್​ ಹಾಲು ಮತ್ತು ಫೈಬರ್​​ ಹಾಗೂ ಕಾರ್ಬೋಹೈಡ್ರೇಟ್​ಗಳನ್ನು ಹೊಂದಿರದ ಆಹಾರ ಪದಾರ್ಥಗಳನ್ನು ಸೇವಿಸಬಹುದು ಎನ್ನಲಾಗಿದೆ.


ವೈದ್ಯರ ಮಂಡಳಿಯು ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.


58 ವರ್ಷದ ನವಜೋತ್​ ಸಿಂಗ್​ ಸಿಧು ಎಂಬಾಲಿಸಮ್​ನಂತಹ ವೈದ್ಯಕೀಯ ಪರಿಸ್ಥಿತಿಯಿಂದ ಬಳಲುತ್ತಿದ್ದಾರೆ. ಅಲ್ಲದೇ ಯಕೃತ್ತು ಸಂಬಂಧಿ ಕಾಯಿಲೆ ಕೂಡ ಇವರಿಗಿದೆ. 2015ರಲ್ಲಿ ಸಿಧು ದೆಹಲಿಯ ಆಸ್ಪತ್ರೆಯಲ್ಲಿ ರಕ್ತನಾಳದ ಥ್ರಂಬೋಸಿಸ್​​ಗಾಗಿ ಚಿಕಿತ್ಸೆ ಪಡೆದಿದ್ದರು.


ಮೇ 20 ರಂದು ಪಂಜಾಬ್ ಮಾಜಿ ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಶರಣಾದ ನಂತರ ಪಟಿಯಾಲ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು. 1988 ರ ರೋಡ್ ರೇಜ್ ಸಾವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಇದನ್ನು ಓದಿ : Mandarthi Lover suicide : ಮಂದಾರ್ತಿ ಬಳಿ ಕಾರಿನಲ್ಲಿ ನವ ಜೋಡಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ : ಉಡುಪಿಯಲ್ಲೇ ಅಂತ್ಯ ಸಂಸ್ಕಾರ

ಇದನ್ನೂ ಓದಿ : KL Rahul Captain : IND vs SA ENG ಸರಣಿಗೆ ಟೀಂ ಇಂಡಿಯಾ ಆಯ್ಕೆ : T20 ಸರಣಿಗೆ ಕನ್ನಡಿಗ ರಾಹುಲ್‌ ನಾಯಕ

Navjot Singh Sidhu brought to Rajindra hospital in Patiala for medical examination

Comments are closed.