ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 19-08-2020

ನಿತ್ಯಭವಿಷ್ಯ : 19-08-2020

- Advertisement -

ಮೇಷರಾಶಿ
ಕುಟುಂಬದಲ್ಲಿ ನೆಮ್ಮದಿ, ಆಕಸ್ಮಿಕ ಅಧಿಕ ಖರ್ಚು, ವೃತ್ತಿರಂಗದಲ್ಲಿ ಅಭಿವೃದ್ಧಿಕಾರಕ ಬೆಳವಣಿಗೆಯು ಕಂಡು ಬರಲಿದೆ. ಕಾರ್ಮಿಕ ವರ್ಗದವರು ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯವಿದೆ. ಶುಭಮಂಗಲ ಕಾರ್ಯಕ್ಕೆ ಇದು ಸುಸಮಯ. ಆರೋಗ್ಯ ಸಮಸ್ಯೆ, ದೂರ ಪ್ರಯಾಣ, ಸ್ಥಳ ಬದಲಾವಣೆ.

ವೃಷಭರಾಶಿ
ಅಮೂಲ್ಯ ವಸ್ತುಗಳ ಖರೀದಿ, ದುಶ್ಚಟಕ್ಕೆ ಹಣವ್ಯಯ, ಮಾನಸಿಕ ವ್ಯಥೆ, ಕೃಷಿಕರಿಗೆ ಲಾಭ, ಉತ್ತಮ ಬುದ್ಧಿಶಕ್ತಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಂಡು ಬರಲಿದೆ. ವಿದ್ಯಾರ್ಥಿಗಳು ಉತ್ತಮ ಫ‌ಲ ಪಡೆಯಲಿದ್ದಾರೆ ಕಾಂಟ್ರಾಕ್ಟ್ ವೃತ್ತಿಯವರಿಗೆ ಇದು ಉತ್ತಮ ಕಾಲ. ಸದುಪಯೋಗಿಸಿಕೊಳ್ಳಿರಿ. ಅನಿರೀಕ್ಷಿತವಾಗಿ ಶುಭವಾರ್ತಾ ಶ್ರವಣ.

ಮಿಥುನರಾಶಿ
ಆರೋಗ್ಯದಲ್ಲಿ ಅತೀ ಜಾಗ್ರತೆ ವಹಿಸಿರಿ. ಕೆಲಸಕಾರ್ಯಗಳು ನಿಮ್ಮಿಚ್ಛೆಯಂತೆ ನಡೆಯಲಾರದು. ದಾಯಾದಿಗಳು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯವನ್ನು ಹರಡಿಯಾರು. ವೈವಾಹಿಕ ಪ್ರಸ್ತಾವಗಳು ಹೊಂದಿಕೆಯಾದೀತು. ಮಾಡಿದ ಕೆಲಸಗಳಲ್ಲಿ ಜಯ, ದೈವಾನುಗ್ರಹದಿಂದ ಅನುಕೂಲ, ಶತ್ರುಗಳಿಂದ ತೊಂದರೆ, ಪ್ರವಾಸ ಹೋಗುವ ಸಾಧ್ಯತೆ.

ಕಟಕರಾಶಿ
ಗೆಳೆಯರೊಂದಿಗೆ ಕಲಹ, ಮನಸ್ಸಿಗೆ ನಾನಾ ರೀತಿಯ ಚಿಂತೆ, ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶವನ್ನು ಹೊಂದುವರು. ಮಿತ್ರ ಸಮೂಹದಲ್ಲಿ ಸಣ್ಣ ಸಣ್ಣ ವಿಚಾರದಲ್ಲಿ ಅಭಿಪ್ರಾಯ ಬೇಧ ಉಂಟಾದೀತು. ಅದನ್ನು ಸರಿಪಡಿಸಿ ಕೊಳ್ಳುವುದು ಅಗತ್ಯವಿದೆ. ದೂರ ಸಂಬಂಧಿಯು ಬಂದಾರು. ಚಿನ್ನಾಭರಣ ವಿಚಾರದಲ್ಲಿ ಎಚ್ಚರ, ತೀರ್ಥ ಕ್ಷೇತ್ರ ದರ್ಶನ.

ಸಿಂಹರಾಶಿ
ಶ್ರೀದೇವತಾ ಕಾರ್ಯಗಳಿಗಾಗಿ ಓಡಾಟ ತರಲಿದೆ. ಅರ್ಚಕ ವೃತ್ತಿಯವರಿಗೆ ಉತ್ತಮ ಸಂಪಾದನೆಯು ಇರುತ್ತದೆ. ಆಗಾಗ ಅಡೆತಡೆಗಳು ಕಂಡು ಬಂದರೂ ನಿಶ್ಚಿತ ರೂಪದಲ್ಲಿ ಕಾರ್ಯಸಾಧನೆ ಆಗಿ ಸಮಾಧಾನವಾದೀತು. ಆರೋಗ್ಯದಲ್ಲಿ ಚೇತರಿಕೆ, ಮಹಿಳೆಯರಿಗೆ ಬಡ್ತಿ, ಅಪಘಾತವಾಗುವ ಸಾಧ್ಯತೆ, ಆಸ್ತಿ ವಿಚಾರದಲ್ಲಿ ಕಲಹ.

ಕನ್ಯಾರಾಶಿ
ಮಿತ್ರರಿಂದ ಸಹಾಯ, ದೂರ ಪ್ರಯಾಣ, ವೈಯಕ್ತಿಕ ಆರೋಗ್ಯದ ಬಗ್ಗೆ ನಿಗಾ ಇರಲಿ. ಆಗಾಗ ನೆರೆಹೊರೆಯವರಿಂದ ಕೆಟ್ಟ ಮಾತು ಕೇಳುವಿರಿ. ಮಾಡುವಂಥ ಉದ್ಯೋಗ, ವ್ಯವಹಾರದಲ್ಲಿ ತುಸು ಚೇತರಿಕೆ ಸಮಾಧಾನ ತರಲಿದೆ. ಭೂ ಖರೀದಿಗೆ ಉತ್ತಮಕಾಲ. ಸಾಲದಿಂದ ಮುಕ್ತಿ, ಶತ್ರುಗಳ ನಾಶ, ಅಲ್ಪ ಕಾರ್ಯ ಸಿದ್ಧಿ, ದಾಂಪತ್ಯದಲ್ಲಿ ಪ್ರೀತಿ.

ತುಲಾರಾಶಿ
ಮಿತ್ರರಿಂದ ಧನ ಸಹಾಯ, ಅನಾವಶ್ಯಕವಾಗಿ ಹಣವು ವ್ಯಯವಾಗುತ್ತದೆ. ಆರ್ಥಿಕವಾಗಿ ಹೆಚ್ಚಿನ ಜವಾಬ್ದಾರಿ ವಹಿಸುವುದು ಅತೀ ಅಗತ್ಯವಿದೆ. ಶ್ರೀದೇವತಾ ಕಾರ್ಯಗಳಿಗಾಗಿ ಖರ್ಚು ತರಲಿದೆ. ಎಷ್ಟೇ ಹಣ ಖರ್ಚಾದರೂ ಕಾರ್ಯಸಾಧನೆಯಾದೀತು. ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ಏರು ಪೆರು.

ವೃಶ್ಚಿಕರಾಶಿ
ನಂಬಿಕೆ ದ್ರೋಹ, ದಾಯಾದಿಗಳು ನಿಮ್ಮ ಮಾತಿಗೆ ಬೆಲೆ ಕೊಡಲಾರರು. ಆಗಾಗ ನೆಂಟರಿಷ್ಟರ ಕೆಟ್ಟಮಾತನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಕಾರ್ಯಾಚಾರಣೆಗೆ ದೇವರು ಅನುಗ್ರಹ ಮಾಡಲಿದ್ದಾರೆ ಶುಭಮಂಗಲ ಕಾರ್ಯಕ್ಕಾಗಿ ಓಡಾಟವಿದೆ. ಅನ್ಯರಲ್ಲಿ ವೈ ಮನಸ್ಸು, ಋಣಬಾಧೆ, ತೀರ್ಥಯಾತ್ರೆ ದರ್ಶನ, ಕುಟುಂಬ ಸೌಖ್ಯ, ಚಂಚಲ ಸ್ವಭಾವ.

ಧನಸ್ಸುರಾಶಿ
ವೃತ್ತಿರಂಗದಲ್ಲಿ ಉತ್ತಮ ಬೆಳವಣಿಕೆ ಇದೆ. ಆರ್ಥಿಕವಾಗಿ ಖರ್ಚುವೆಚ್ಚವನ್ನು ಸಮರ್ಥವಾಗಿ ಭಾಯಿಸುವುದು. ಸಾಂಸಾರಿಕವಾಗಿ ಮನದನ್ನೆಯ ಮಾತು ಕೇಳಿಸಿಕೊಳ್ಳಿರಿ. ವೈಯಕ್ತಿಕ ಆರೋಗ್ಯದಲ್ಲಿ ಜಾಗ್ರತೆ ಇರಲಿ. ಮನಸ್ಸಿನ ಮೇಲೆ ದುಷ್ಪರಿಣಾಮ, ಕುಟುಂಬದಲ್ಲಿ ಕಲಹ, ಮಾನಸಿಕ ವ್ಯಥೆ, ದಂಡ ಕಟ್ಟುವ ಸಾಧ್ಯತೆ, ದೂರ ಪ್ರಯಾಣ.

ಮಕರರಾಶಿ
ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಆಗಾಗ ಏರುಪೇರು ಆರ್ಥಿಕವಾಗಿ ಕಂಡು ಬರಲಿದೆ. ಲಾಭಸ್ಥಾನಗತನಾದ ರಾಹು ಹೆಚ್ಚಿನ ಸಮಸ್ಯೆ ತಂದು ಕೊಡಲಾರನು. ಪತಿ, ಪತ್ನಿಯರಲ್ಲಿ ಹೆಚ್ಚಿನ ಹೊಂದಾಣಿಕೆ ಅಗತ್ಯವಿದೆ. ರಾಹುಬಲದಿಂದ ಧೈರ್ಯ ವಹಿಸಿರಿ. ಆತ್ಮೀಯರಲ್ಲಿ ಕಲಹ, ಮೇಲಾಧಿಕಾರಿಗಳಿಂದ ತೊಂದರೆ.

ಕುಂಭರಾಶಿ
ಯತ್ನ ಕಾರ್ಯದಲ್ಲಿ ತೊಂದರೆ, ವೃತಾ ತಿರುಗಾಟ, ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚುವೆಚ್ಚ ಕಂಡು ಬಂದರೂ ಶನಿಯು ಸ್ವಕ್ಷೇತ್ರಾಧಿಪತಿಯಾದುದರಿಂದ ಹೆಚ್ಚಿನ ಸಮಸ್ಯೆ ಇರದು. ಹಿತಶತ್ರುಗಳ ಕಾಟದಿಂದ ಮನಸ್ಸು ರೋಸಿ ಹೋದೀತು. ಉದ್ವೇಗಬೇಡ. ಉದ್ಯೋಗದಲ್ಲಿ ಬಡ್ತಿ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.

ಮೀನರಾಶಿ
ಆಕಸ್ಮಿಕ ಧನಲಾಭ, ಯಾರನ್ನು ಹೆಚ್ಚು ನಂಬಬೇಡಿ, ಮಿಶ್ರ ಫ‌ಲದಿಂದಲೇ ಮುನ್ನಡೆ ತೋರಿ ಬಂದೀತು. ಅನಾವಶ್ಯಕವಾಗಿ ಋಣಾತ್ಮಕ ಚಿಂತೆ ಮಾಡದಿರಿ. ಶನಿಯ ಅನುಗ್ರಹವು ನಿಮಗೆ ನಾನಾ ರೀತಿಯಲ್ಲಿ ಕಾಪಾಡಲಿದೆ. ಆರ್ಥಿಕವಾಗಿ ಉತ್ತಮಗಳಿಕೆಯಿಂದ ಹರುಷ. ಸಾಲ ಮರುಪಾವತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ವಿವಾಹ ಯೋಗ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular