ಕೊರೊನಾ ವಿಚಾರದಲ್ಲಿ ಹುಡುಗರೇ ಹುಷಾರ್ ! ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟ ಎಚ್ಚರಿಕೆ ಏನು ಗೊತ್ತಾ ?

0

ಜಿವೆವಾ : ಕೊರೊನಾ ಹೆಮ್ಮಾರಿ ವಿಶ್ವವನ್ನೇ ನಡುಗಿಸಿದೆ. ಎಲ್ಲಾ ವಯೋಮಾನದ ಜನರನ್ನು ಬೆಂಬಿಡದೆ ಕಾಡುತ್ತಿದೆ. ಅದ್ರಲ್ಲೂ ಕೊರೊನಾ ವಿಚಾರದಲ್ಲಿ ಯುವಕರೇ ಹುಷಾರ್ ಆಗಿರಿ ಅಂತಿದೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಅಂಕಿ ಅಂಶ.

ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ಸಾಮಾನ್ಯವಾಗಿ 20 ವರ್ಷದಿಂದ 40 ವರ್ಷದೊಳಗಿನವರೇ ಹೆಚ್ಚಾಗಿ ಎಚ್ಚರವಾಗಿರಬೇಕು. ಯಾಕೆಂದ್ರೆ 20,30,40 ವರ್ಷದ ಆಸುಪಾಸಿನವರನ್ನೇ ಹೆಚ್ಚಾಗಿ ಕೊರೊನಾ ಹೆಮ್ಮಾರಿ ಕಾಡುತ್ತಿದೆ.

ಸಾಮಾನ್ಯವಾಗಿ 40 ವರ್ಷದೊಳಗಿನವರು ಉದ್ಯೋಗ ಸೇರಿದಂತೆ ಅನಿವಾರ್ಯ ಕಾರ್ಯಕ್ಕಾಗಿ ಮನೆಯಿಂದ ಹೊರಬರಬೇಕಿದೆ. ಅಲ್ಲದೇ ಯುವಕರು ಕೊರೊನಾ ಸೋಂಕಿಗೆ ತಲುಗಿರುವ ಕುರಿತು ಸಾಮಾನ್ಯವಾಗಿ ಅವರಿಗೆ ಅರಿವೇ ಇರುವುದಿಲ್ಲ. ಹೀಗಾಗಿ ಯುವಕರೇ ಹೆಚ್ಚಾಗಿ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರಂತೆ.

ಯುವಕರಲ್ಲಿ ಕೊರೊನಾ ವೈರಸ್ ಸೋಂಕು ಗಂಭೀರ ಪರಿಣಾಮವನ್ನು ನೀಡುತ್ತಿದ್ದು, 20 ರಿಂ 40 ವರ್ಷದೊಳಗಿನ ವಯೋಮಾನದವರು ಹಿರಿಯರು, ಮಕ್ಕಳ ಸಂಪರ್ಕಕ್ಕೆ ಬರುತ್ತಿರುವುದರಿಂದಾಗಿ ಪರಿಸ್ಥಿತಿ ಹೆಚ್ಚುಬಿಗಡಾಯಿಸುವ ಸಾಧ್ಯತೆಗಳೇ ತೀರಾ ಹೆಚ್ಚು.

ಯವಕರಿಗೆ ಕೊರೊನಾ ಸೋಂಕು ತಗುಲಿದ್ರೂ ಕೂಡ ಅವರಲ್ಲಿರುವ ರೋಗ ನಿರೋಧಕ ಶಕ್ತಿ ಸೋಂಕಿನ ಪರಿಣಾಮವನ್ನು ತಡೆಯುತ್ತದೆ. ಇದುವರೆಗೆ ಕೊರೊನಾ ಹೆಮ್ಮಾರಿಯಿಂದ ವಿಶ್ವದಾದ್ಯತ 22 ಮಿಲಿಯನ್ ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 7.7 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ.  ಇನ್ನಾದ್ರೂ ಯುವಕರು ಕೊರೊನಾ ವಿಚಾರದಲ್ಲಿ ಯುವಕರು ಅಸಡ್ಡೆಯ್ನು ತೋರಿಸದೆ ಎಚ್ಚವಹಿಸುವುದು ಅಗತ್ಯ.

Leave A Reply

Your email address will not be published.