ನಿತ್ಯಭವಿಷ್ಯ : 05-12-2020

ಮೇಷರಾಶಿ
ಉನ್ನತಿ ತೋರಿಬಂದರೂ ವಿಘ್ನಭೀತಿ, ವೈರಿಗಳು ಅಭಿವೃದ್ದಿಯಲ್ಲಿ ಕಾಲು ಎಳೆದಾರೂ, ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ, ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ಚಿಂತೆ, ಸರ್ಕಾರಿ ಉದ್ಯೋಗದ ಹಂಬಲ, ನಿದ್ರಾಭಂಗ ಆತ್ಮ ಸಂಕಟ, ಮಕ್ಕಳ ನಡವಳಿಕೆಯಿಂದ ಬೇಸರ, ಆಸೆ-ಆಕಾಂಕ್ಷೆ ಭಾವನೆಗಳಿಗೆ ಪೆಟ್ಟು, ಕಾನೂನುಬಾಹಿರ ಸಂಪಾದನೆಗೆ ಮುಂದಾಗುವಿರಿ, ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭರಾಶಿ
ಅಧಿಕ ಅಲೆದಾಟ ದೇಹಾಯಾಸಕ್ಕೆ ಕಾರಣವಾಗಲಿದೆ, ಉದ್ಯೋಗ ನಷ್ಟವಾಗುವ ಭೀತಿ, ಆತ್ಮ ಸಂಕಟ, ಭಯ ಗಾಬರಿ, ಸ್ಥಿರಾಸ್ತಿ ಕೆಲಸಕಾರ್ಯಗಳಲ್ಲಿ ಹಿನ್ನಡೆ, ಸರ್ಕಾರಿ ಅಧಿಕಾರಿಗಳಿಂದ ನಷ್ಟ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣ ವಿಘ್ನಗಳಿಂದ ಬೇಸರ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನೆಡೆ.

ಮಿಥುನರಾಶಿ
ಕಾರ್ಯದೊತ್ತಡದಿಂದ ಆರೋಗ್ಯಕ್ಕೆ ಹಾನಿ, ಕಾರ್ಯರಂಗದಲ್ಲಿ ಪ್ರತಿಷ್ಠಿತರ ಸಹಯೋಗದಿಂದ ಉನ್ನತಿ, ಆರ್ಥಿಕವಾಗಿ ಮಂದತ್ವ, ಸೋಲು ನಷ್ಟ ಹಣಕಾಸಿನ ಬೇಡಿಕೆ, ಸಾಂಸಾರಿಕ ಸಮಸ್ಯೆಗಳು ತಲೆನೋವು ತರಲಿದೆ, ಪ್ರಯಾಣದಲ್ಲಿ ವಿಘ್ನ, ಮಿತ್ರರಿಂದ ಸಹಕಾರ, ಪತ್ರ ವ್ಯವಹಾರಗಳಲ್ಲಿ ಹಿನ್ನಡೆ, ಅನಾರೋಗ್ಯ ಸಮಸ್ಯೆ, ಹಿರಿಯರಿಂದ ಧನ ಸಹಾಯ.

ಕಟಕರಾಶಿ
ಉತ್ತಮ ಧನಾಗಮನ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆ, ಸ್ವಂತ ಕೆಲಸಗಳಲ್ಲಿ ಹಿನ್ನಡೆ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಸಂಗಾತಿ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ಅನುಕೂಲ, ತಂದೆಯಿಂದ ಧನಸಹಾಯ, ನೆಮ್ಮದಿ ಭಂಗ, ಕಾಲು ನೋವು.

ಸಿಂಹರಾಶಿ
ಸ್ವಯಂಕೃತಾಪರಾಧದಿಂದ ತೊಂದರೆ, ಶತ್ರುಗಳಿಂದ ನಷ್ಟ, ಬಂಧುಗಳು ಶತ್ರುಗಳಾಗುವರು, ಬಾಡಿಗೆದಾರರಿಂದ ಸಮಸ್ಯೆ, ಕೆಲಸಗಾರರ ಕೊರತೆ, ಶತ್ರು ದಮನ ನಿದ್ರಾಭಂಗ.

ಕನ್ಯಾರಾಶಿ
ಕೆಲಸ ಕಾರ್ಯಗಳಲ್ಲಿ ಒತ್ತಡ, ನ್ಯಾಯಾಲಯದಲ್ಲಿನ ಪ್ರಕರಣಗಳು ಮಧ್ಯಸ್ಥಿಕೆಯಿಂದ ಕಾರ್ಯಾನೂಕೂಲ,ಮಕ್ಕಳಿಗೋಸ್ಕರ ಖರ್ಚು, ದುಶ್ಚಟಗಳಿಂದ ತೊಂದರೆ, ಆತ್ಮ ಸಂಕಟ ಮತ್ತು ವೇದನೆ, ಸಂತಾನ ದೋಷ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸ್ನೇಹಿತರಿಂದ ಬೇಸರ, ಕೋರ್ಟ್ ಕೇಸ್ ಗಳಿಂದ ಸಮಸ್ಯೆ.

ತುಲಾರಾಶಿ
ಆವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ, ಆಧ್ಯಾತ್ಮಿಕ ಚಿಂತನೆಗಳಿಂದ ಸಮಾಧಾನ, ಸಂಗಾತಿಯ ನಡವಳಿಕೆಯಿಂದ ಕೋಪ, ಮನೆಯ ವಾತಾವರಣದಲ್ಲಿ ಆತಂಕ, ಸ್ಥಿರಾಸ್ತಿಯಿಂದ ಅನುಕೂಲ, ಉದ್ಯೋಗದ ಚಿಂತೆ, ಸಂಪಾದನೆಯಲ್ಲಿ ಕುಂಠಿತವಾಗುವ ಆತಂಕ, ದೈವ ಶಾಪ, ಗೃಹಿಣಿಯರಿಗೆ ಸಂಭ್ರಮದ ಕಾಲ.

ವೃಶ್ಚಿಕರಾಶಿ
ವ್ಯವಹಾರಗಳಲ್ಲಿ ಅಭಿವೃದ್ದಿ, ಆರ್ಥಿಕವಾಗಿ ಧನಾಗಮನ, ಕಾರ್ಯ ನಿಮಿತ್ತ ಪ್ರಯಾಣ, ಉದ್ಯೋಗ ನಷ್ಟವಾಗುವ ಭೀತಿ, ಹಿರಿಯರಿಂದ ನಿಂದನೆ, ಆರೋಗ್ಯ ಸಮಸ್ಯೆ, ಆತ್ಮವಿಶ್ವಾಸದಿಂದ ಗೆಲ್ಲುವ ಭರವಸೆ, ಸಂಬಂಧಗಳಲ್ಲಿ ಬಿರುಕು.

ಧನಸುರಾಶಿ
ಸಾಂಸಾರಿಕವಾಗಿ ನೆಮ್ಮದಿಯ ದಿನ, ಆರ್ಥಿಕವಾಗಿ ಧನಾಗಮನ ಉತ್ತಮ, ವ್ಯಾಪಾರ, ವ್ಯವಹಾರಗಳಲ್ಲಿ ಅಭಿವೃದ್ದಿ, ತಂದೆಯಿಂದ ಧನಸಹಾಯ, ಮಕ್ಕಳಲ್ಲಿ ಗೆಲ್ಲುವ ಉತ್ಸಾಹ, ಕಷ್ಟನಷ್ಟಗಳ ನೆನಪು, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಕಣ್ಣು ಹಲ್ಲು ನಾಲಿಗೆ ಗಲ್ಲಕ್ಕೆ ಪೆಟ್ಟು, ಉದ್ಯೋಗದಲ್ಲಿ ಬಡ್ತಿ.

ಮಕರರಾಶಿ
ವೃತ್ತಿರಂಗದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಅನುಭವಕ್ಕೆ ಬರಲಿದೆ, ಗೃಹದಲ್ಲಿ ಶುಭಮಂಗಲ ಕಾರ್ಯ, ಸ್ವಯಂಕೃತ ಅಪರಾಧಗಳು, ಅನಾರೋಗ್ಯದ ಸಮಸ್ಯೆ, ವ್ಯಾಪಾರ-ವ್ಯವಹಾರದಲ್ಲಿ ತೊಂದರೆ, ಸಂಶಯಗಳ ಸುಳಿದಾಟ, ವಾಹನ ಚಾಲನೆಯಿಂದ ತೊಂದರೆ, ಆತ್ಮ ಸಂಕಟ ಮತ್ತು ಮಾನಸಿಕ ಆಘಾತ, ಹೆಸರು ಕೀರ್ತಿ ಪ್ರತಿಷ್ಠೆಗೆ ಕಳಂಕ.

ಕುಂಭರಾಶಿ
ಆರೋಗ್ಯದ ಬಗ್ಗೆ ಎಚ್ಚರವಿರಲಿ, ವಿದ್ಯಾರ್ಥಿಗಳಿಗೆ ಅಸ್ಥಿರತೆ ಕಾಡಲಿದೆ, ಉದ್ಯೋಗದ ಭರವಸೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಸರ್ಕಾರಿ ಕೆಲಸ ಕಾರ್ಯದ ನಿಮಿತ್ತ ಪ್ರಯಾಣ, ಅಧಿಕಾರಿಗಳಿಗೆ ಖರ್ಚು, ಮಕ್ಕಳ ಸಂಸಾರದಲ್ಲಿ ವ್ಯತ್ಯಾಸ, ನೆರೆಹೊರೆಯವರಿಂದ ಮೋಸ ಮತ್ತು ಅವಮಾನ.

ಮೀನರಾಶಿ
ಹಂತ ಹಂತವಾಗಿ ಅಭಿವೃದ್ದಿಯ ಕಾಲ, ಸಂಪಾದನೆ ವರ್ಧಿಸಿಕೊಂಡರೆ ಕಾರ್ಯಾನುಕೂಲ, ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ, ಸಾಲ ದೊರೆಯುವ ಭರವಸೆ, ಮಾತಿನಿಂದ ಸಮಸ್ಯೆ, ಪೂರ್ವಿಕರಿಂದ ಯೋಗ ಫಲ ಮತ್ತು ಲಾಭ, ಉದ್ಯೋಗದಲ್ಲಿ ಯಶಸ್ಸು, ಪಿತ್ತ ಬಾಧೆ, ಬಾಯಿಹುಣ್ಣು, ಕೆಲಸಗಾರರು ದೊರೆಯುವರು.

Comments are closed.