ಕೇವಲ 55 ರನ್‌ಗೆ ಶ್ರೀಲಂಕಾ ಆಲೌಟ್‌ : ವಿಶ್ವಕಪ್‌ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಭಾರತ

ಶ್ರೀಲಂಕಾ ತಂಡ (lowest score in odi) ವಿಶ್ವಕಪ್‌ನಲ್ಲಿ ಭಾರತ ವಿರುದ್ದ 55 ರನ್‌ ಗಳಿಗೆ ಆಲೌಟಾಗಿದೆ.  ಸೋತು ಸುಣ್ಣವಾಗಿದ್ದ ಶ್ರೀಲಂಕಾ (Srilanka) ಕನಿಷ್ಠ ಮೊತ್ತಕ್ಕೆ ಮುಗ್ಗರಿಸಿದ್ರೆ, ಭಾರತ ಕ್ರಿಕೆಟ್‌ ತಂಡ (Indian Cricket Team) ವಿಶ್ವಕಪ್‌ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ.

india vs sri lanka:  ಮೊಹಮ್ಮದ್‌ ಸೆಮಿ, ಮೊಹಮದ್‌ ಸಿರಾಜ್‌ ಅವರ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ (lowest score in odi) ವಿಶ್ವಕಪ್‌ನಲ್ಲಿ ಭಾರತ ವಿರುದ್ದ 55 ರನ್‌ ಗಳಿಗೆ ಆಲೌಟಾಗಿದೆ.  ಸೋತು ಸುಣ್ಣವಾಗಿದ್ದ ಶ್ರೀಲಂಕಾ (Srilanka) ಕನಿಷ್ಠ ಮೊತ್ತಕ್ಕೆ ಮುಗ್ಗರಿಸಿದ್ರೆ, ಭಾರತ ಕ್ರಿಕೆಟ್‌ ತಂಡ (Indian Cricket Team) ವಿಶ್ವಕಪ್‌ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ಹಾಗೂ ಭಾರತ ನಡುವಿನ ಪಂದ್ಯದಲ್ಲಿ ಟಾಸ್‌ ಗೆದ್ದ ಶ್ರೀಲಂಕಾ ತಂಡ ಬೌಲಿಂಗ್‌ ಆಯ್ಕೆ ಮಾಡಿ ಕೊಂಡಿತ್ತು. ಶ್ರೀಲಂಕಾದ ಮದುಶನಕ ಭಾರತದ ಆರಂಭಿಕರಿಗೆ ಆಘಾತ ನೀಡಿದ್ರು. ಮೊದಲ ಎಸೆತದಲ್ಲಿಯೇ ಬೌಂಡರಿ ಬಾರಿಸಿದ್ದ ರೋಹಿತ್‌ ಶರ್ಮಾ ಅವರು ಮಧುಶನಕ ಎಸೆತದಲ್ಲಿ ಔಟಾಗಿ ಫೆವಿಲಿಯನ್‌ ಸೇರಿಕೊಂಡಿದ್ದರು.

ಶುಭಮನ್‌ ಗಿಲ್‌ ಜೊತೆಯಾದ ವಿರಾಟ್‌ ಕೊಹ್ಲಿ ಅದ್ಬುತ ಇನ್ನಿಂಗ್ಸ್‌ ಕಟ್ಟಿದ್ದಾರೆ. ವಿರಾಟ್‌ ಕೊಹ್ಲಿ ಹಾಗೂ ಶುಭಮನ್‌ ಗಿಲ್‌ ಜೋಡಿ ಮೊದಲ ವಿಕೆಟ್‌ ನಷ್ಟಕ್ಕೆ ಬರೋಬ್ಬರಿ 189 ರನ್‌ ಜೊತೆಯಾದ ಆಡಿದ್ದಾರೆ. ಆದರೆ ಶುಭಮನ್‌ ಗಿಲ್‌ 92 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 11 ಬೌಂಡರಿ ನೆರವಿನಿಂದ 92ರನ್‌ ಗಳಿಸಿ ಆಡುವ ವೇಳೆಯಲ್ಲಿ ಮಧುಶನಕಗೆ ವಿಕೆಟ್‌ ಒಪ್ಪಿಸಿ ನಿರ್ಗಮಿಸಿದ್ದರು.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ರಚಿನ್‌ ರವೀಂದ್ರ : ಸಚಿನ್‌ ದಾಖಲೆ ಸರಿಗಟ್ಟಿದ ಬೆಂಗಳೂರಿನ ಹುಡುಗ

ಶುಭಮನ್‌ ಗಿಲ್‌ ಔಟಾಗುತ್ತಲೇ ವಿರಾಟ್‌ ಕೊಹ್ಲಿ ಕೂಡ ಫೆವಿಲಿಯನ್‌ ಹಾದಿ ಹಿಡಿದಿದ್ದರು. 94 ಎಸೆತಗಳನ್ನು ಎದುರಿಸಿದ್ದ ವಿರಾಟ್‌ ಕೊಹ್ಲಿ 11 ಬೌಂಡರಿ ನೆರವಿನೊಂದಿಗೆ ೮೮ರನ್‌ ಬಾರಿಸಿದ್ದಾರೆ. ಗಿಲ್‌ ಹಾಗೂ ಕೊಹ್ಲಿ ಶತಕದ ಅಂಚಿನಲ್ಲಿಯೇ ಎಡವಿದ್ದರು. ನಂತರ ಶ್ರೇಯಸ್‌ ಅಯ್ಯರ್‌ ಹಾಗೂ ಕೆಎಲ್‌ ರಾಹುಲ್‌ ಉತ್ತಮ ಇನ್ನಿಂಗ್ಸ್‌ ಕಟ್ಟಲು ಮುಂದಾದ್ರು, ಆದರೆ ರಾಹುಲ್‌ ಚಾಮೀರ್‌ ಅವರ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

ಅಂತಿಮ ಹಂತದಲ್ಲಿ ಶ್ರೇಯಸ್‌ ಅಯ್ಯರ್‌ ಸ್ಪೋಟಕ ಆಟಕ್ಕೆ ಮನ ಮಾಡಿದ್ದರು. ಕೇವಲ 56 ಎಸೆತಗಳಲ್ಲಿ 83 ರನ್‌ ಬಾರಿಸುವ ಮೂಲಕ ಭಾರತ ಸವಾಲಿನ ಮೊತ್ತಪೇರಿಸುವಲ್ಲಿ ನೆರವಾದ್ರು. ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ೩೫ ರನ್‌ ಬಾರಿಸಿದ್ದರು. ಭಾರತ ಅಂತಿಮವಾಗಿ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 347 ರನ್‌ ಗಳಿಸಿತ್ತು.

Sri Lanka All out for just 55 runs India enter World Cup 2023 semi-finals India vs Srilanka
Image Credit to Original Source

ಇದನ್ನೂ ಓದಿ : India Vs Sri Lanka : ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ಪಾಲಿಗೆ 3 ಕೆಟ್ಟ ದಿನಗಳು !

ಭಾರತ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನತ್ತಲು ಹೊರಟ ಶ್ರೀಲಂಕಾ ತಂಡಕ್ಕೆ ಭಾರತದ ಬೌಲರ್‌ಗಳು ಆಘಾತ ನೀಡಿದ್ದಾರೆ. ನಿಸಾಂಕ, ಕರುಣರತ್ನೆ, ಸಮರ ವಿಕ್ರಮ, ಅಸಲಂಕಾ ಶೂನ್ಯಕ್ಕೆ ಔಟಾಗುವ ಮೂಲಕ ಶ್ರೀಲಂಕ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಶ್ರೀಲಂಕಾ ತಂಡ 14 ರನ್‌ ಗಳಿಸುವ ಹೊತ್ತಿಗೆ 5 ವಿಕೆಟ್‌ ಕಳೆದುಕೊಂಡಿತ್ತು. ಅಂಜಲೋ ಮ್ಯಾಥ್ಯೂಸ್‌, ಮಹೇಶ್‌ ತೀಕ್ಷ್ಣ, ರಜಿತಾ ಹೊರತು ಪಡಿಸಿ ಉಳಿದ ಯಾವುದೇ ಆಟಗಾರರು ಎರಡಂಕಿ ಮೊತ್ತವನ್ನು ಕಲೆ ಹಾಕಿಲ್ಲ.

ಒಟ್ಟು ಐದು ಮಂದಿ ಆಟಗಾರರು ಸೊನ್ನೆ ರನ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ಭಾರತ ತಂಡದ ಪರ ಮೊಹಮ್ಮದ್‌ ಸೆಮಿ 5 ವಿಕೆಟ್‌ ಕಬಳಿಸಿದ್ರೆ, ಮೊಹಮ್ಮದ್‌ ಸಿರಾಜ್‌ 3, ಜಸ್ಪ್ರೀತ್‌ ಬೂಮ್ರಾ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದಾರೆ. ಅಂತಿಮವಾಗಿ ಶ್ರೀಲಂಕಾ ತಂಡ 19.4 ಓವರ್‌ ಗಳಲ್ಲಿ 55ರನ್ ಗಳಿಗೆ ಸರ್ವಪತನ ಕಂಡಿದೆ.

Sri Lanka All out for just 55 runs India enter World Cup 2023 semi-finals India vs Srilanka
Image Credit to Original Source

ಇದನ್ನೂ ಓದಿ : ಐಪಿಎಲ್ 2024 : ಆರ್‌ಸಿಬಿ ತಂಡಕ್ಕೆ ಮತ್ತೆ ವಿರಾಟ್‌ ಕೊಹ್ಲಿ ನಾಯಕ

ವಿಶ್ವಕಪ್‌ ನಲ್ಲಿ ಸತತ ಏಳು ಗೆಲುವಿನೊಂದಿಗೆ 14  ಅಂಕ ಪಡೆಯುವ ಮೂಲಕ ಭಾರತ ತಂಡ ಒಂದೇ ಒಂದು ಸೋಲನ್ನು ಕಾಣದೆ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ.  ಶ್ರೀಲಂಕಾ ತಂಡ ಭಾರತದ ವಿರುದ್ದ ಇದೀಗ ಎರಡನೇ ಬಾರಿಗೆ ಕನಿಷ್ಟ ಮೊತ್ತಕ್ಕೆ ಆಲೌಟಾಗಿದೆ.

ಭಾರತ ಮತ್ತು ಶ್ರೀಲಂಕಾ ಪಂದ್ಯ ತಂಡಗಳು :
ಭಾರತ ತಂಡ : ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್ ‌

ಶ್ರೀಲಂಕಾ ತಂಡ : ಪಾತು ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ನಾಯಕ, ವಿಕೆಟ್‌ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ದುಶನ್ ಹೇಮಂತ, ಮಹೇಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದುಷ್ಮಂತ ಚಮೀರ

Sri Lanka All out for just 55 runs India enter World Cup 2023 semi-finals India vs Srilanka

Comments are closed.