ದಿನಭವಿಷ್ಯ : ಶುಕ್ರನ ಪ್ರಭಾವದಿಂದ ಈ ರಾಶಿಗೆ ಅದೃಷ್ಟ

Horoscope Today 09 2025 : ದಿನಭವಿಷ್ಯ ಇಂದು ಅಕ್ಟೋಬರ್ 09 2025 ಗುರುವಾರ. ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ. ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ. ಶುಕ್ರನ ಪ್ರಭಾವ ಯಾವ ರಾಶಿಗೆ ಇದೆ ಎಂದು ತಿಳಿಯೋಣಾ.
ಮೇಷ ರಾಶಿ (Aries)
ವೃತ್ತಿ ಕ್ಷೇತ್ರದಲ್ಲಿ ಅಧಿಕ ಲಾಭ ಸಿಗುವ ಸಾಧ್ಯತೆ ಇದೆ. ಶುಕ್ರನ ಪ್ರಭಾವದಿಂದ ವೈವಾಹಿಕ ಜೀವನದಲ್ಲಿ ಉತ್ತಮ ಸಾಮರಸ್ಯ ಇರುತ್ತದೆ. ಹಳೆಯ ಹೂಡಿಕೆಗಳು ಯಶಸ್ಸು ತರಬಹುದು. ಆದರೆ, ಅನಿರೀಕ್ಷಿತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
ವೃಷಭ ರಾಶಿ (Taurus)
ನಿಮ್ಮ ಸಂತೋಷವನ್ನು ಹಾಳುಗೆಡವಲು ಯತ್ನಿಸಬಹುದು. ನಿಮ್ಮ ದಿನಚರಿಯನ್ನು ಸರಿಯಾಗಿ ಇಟ್ಟುಕೊಳ್ಳಿ. ಹಿರಿಯರ ಸಲಹೆ ಕೇಳುವುದರಿಂದ ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವಿರಿ.
ಮಿಥುನ ರಾಶಿ (Gemini)
ಅತ್ಯಂತ ಪ್ರಭಾವಿ ಜನರ ಬೆಂಬಲ ಸಿಗಲಿದೆ. ಇದರಿಂದಾಗಿ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಲಿದೆ. ಆರ್ಥಿಕ ವಿಷಯಗಳ ಬಗ್ಗೆ ಯೋಚಿಸುವಿರಿ. ದಿನವನ್ನು ಸುಧಾರಿಸಲು ಸ್ನೇಹಿತರು ಅಥವಾ ಕುಟುಂಬದ ಸಹಾಯ ಪಡೆಯಬಹುದು.
ಕರ್ಕಾಟಕ ರಾಶಿ (Cancer)
ನಿಮ್ಮ ಒರಟು ವರ್ತನೆ ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಹಾಳು ಮಾಡಬಹುದು, ಮಾತು ಮತ್ತು ಕೋಪದ ಮೇಲೆ ನಿಯಂತ್ರಣವಿರಲಿ. ಶ್ರಮವಹಿಸಿ ಕೆಲಸ ಮಾಡಿದರೆ ಮನಃಶಾಂತಿ ದೊರೆಯಲಿದೆ.
ಸಿಂಹ ರಾಶಿ (Leo)
ಮುಂದೆ ಒಳ್ಳೆಯ ಸಮಯ ಬರಲಿದೆ. ಇದರಿಂದಾಗಿ ಸಂತೋಷದಿಂದಿರಿ. ಹಣವನ್ನು ಹೇಗೆ ಸಂಗ್ರಹಿಸುವುದು, ಹೂಡಿಕೆ ಹೇಗೆ ಮಾಡುವುದು ಎನ್ನುವ ಬಗ್ಗೆ ಗಮನ ಹರಿಸಿ. ತಿರುಗಾಟ ಅಧಿಕವಾಗುವ ಸಾಧ್ಯತೆಯಿದೆ.
ಕನ್ಯಾ ರಾಶಿ (Virgo)
ಕೆಲಸದ ಒತ್ತಡ, ಮನೆಯಲ್ಲಿನ ಭಿನ್ನಾಭಿಪ್ರಾಯ ಉದ್ವೇಗವನ್ನು ಉಂಟುಮಾಡಬಹುದು. ವಿದೇಶಿ ವ್ಯವಹಾರಗಳು ಲಾಭವನ್ನು ತರಲಿದೆ. ರಾಜಕೀಯ ವ್ಯಕ್ತಿಗಳಿಗೆ ಉತ್ತಮವಾದ ಸಮಯ. ಕೆಲಸದಲ್ಲಿ ಅಧಿಕ ಒತ್ತಡ ಎದುರಿಸಬೇಕಾಗಿ ಬರಲಿದೆ.
Horoscope Today 09 2025 ತುಲಾ ರಾಶಿ (Libra)
ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುವ ಸಾಧ್ಯತೆ ಇದೆ. ಅತಿಯಾದ ಸಂತೋಷ ಸಮಸ್ಯೆಗಳನ್ನು ತರಬಹುದು. ಆದ್ದರಿಂದ ಸಮತೋಲನ ಕಾಯ್ದುಕೊಳ್ಳುವುದು ಉತ್ತಮ.
ವೃಶ್ಚಿಕ ರಾಶಿ (Scorpio)
ಉತ್ತಮ ಜೀವನಕ್ಕಾಗಿ ನಿಮ್ಮ ಆರೋಗ್ಯದ ಜೊತೆಗೆ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಿ. ಹೊಸ ಯೋಜನೆ ಕೈಗೊಳ್ಳುವ ಮುನ್ನ ಯೋಚಿಸಿ ಮುಂದುವರಿಯುವುದು ಉತ್ತಮ. ಅನಿರೀಕ್ಷಿತ ಪ್ರಯಾಣದ ಸಾಧ್ಯತೆಯಿದೆ.
ಧನು ರಾಶಿ (Sagittarius)
ನಿಮ್ಮ ಹಾಸ್ಯಪ್ರಜ್ಞೆ ಇನ್ನೊಬ್ಬರಿಗೆ ಸಂತೋಷ ನೀಡುತ್ತದೆ. ಹೊಸ ವಸ್ತುಗಳ ಖರೀದಿ ನಿಮಗೆ ಸಂತೋಷವನ್ನು ತರಲಿದೆ. ಹೋಟೆಲ್ ಉದ್ಯಮಿಗಳಿಗೆ ಇದು ಶುಭ ದಿನ. ಕೊಟ್ಟ ಹಣ ವಾಪಾಸು ಬರುವ ಸಾಧ್ಯತೆಯಿದೆ.
ಮಕರ ರಾಶಿ (Capricorn)
ಉತ್ತಮ ಆರೋಗ್ಯಕ್ಕಾಗಿ ದೀರ್ಘ ನಡಿಗೆಗೆ ಹೋಗುವುದು ಉತ್ತಮ ಆಲೋಚನೆ ಮಾಡದೆ ಯಾರಿಗೂ ಮಾತು ಕೊಡಬೇಡಿ. ಕೈಗಾರಿಕಾ ಉದ್ಯಮಿಗಳಿಗೆ ಯಶಸ್ಸು. ಹಣಕಾಸು ವಿಚಾರದಲ್ಲಿ ತಗಾದೆ ಉಂಟಾಗಬಹುದು.
ಕುಂಭ ರಾಶಿ (Aquarius)
ಹೊರಾಂಗಣ ಕ್ರೀಡೆಗಳು ನಿಮ್ಮನ್ನು ಸೆಳೆಯುತ್ತವೆ. ಧ್ಯಾನ ಮತ್ತು ಯೋಗ ನಿಮಗೆ ಲಾಭ ತರುತ್ತವೆ. ನೀವು ಹಣಕಾಸಿನ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುವಿರಿ. ಕೌಟುಂಬಿಕವಾಗಿ ನೆಮ್ಮದಿ ಇರಲಿದೆ.
ಮೀನ ರಾಶಿ (Pisces)
ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸುತ್ತಿದೆ. ಸಣ್ಣ ವಿಚಾರಕ್ಕೂ ಕೊಪ ಮಾಡಿದ್ರೆ ಮನಸ್ಥಿತಿ ಹಾಳಾಗಲಿದೆ. ಭಾವನಾತ್ಮಕವಾಗಿ ಜೀವನ ನಡೆಸುವುದು ಬಹಳ ಮುಖ್ಯ
ನಿತ್ಯದ ದಿನಭವಿಷ್ಯ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ನಮ್ಮ ಡಿಜಿಟಲ್ ವಾಹಿನಿಯನ್ನು ಸಬ್ ಸ್ಕ್ರೈಬ್ ಮಾಡಿ



