ದಿನಭವಿಷ್ಯ : ರೋಹಿಣಿ ನಕ್ಷತ್ರ, ಗೌರಿ ಯೋಗ ಯಾರಿಗೆ ಲಾಭ

Horoscope Today 10 2025 : ದಿನಭವಿಷ್ಯ ಇಂದು ಅಕ್ಟೋಬರ್ 11 2025 ಶುಕ್ರವಾರ. ಯಾವ ರಾಶಿಯವರಿಗೆ ಶುಭ. ರೋಹಿಣಿ ನಕ್ಷತ್ರ, ಗೌರಿ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ ಒಲಿಯಲಿದೆ. ಹೇಗಿದೆ ಇಂದಿನ ದಿನಭವಿಷ್ಯ ತಿಳಿಯೋಣಾ.
ಮೇಷರಾಶಿ (Aries)
ಖರ್ಚುಗಳು ಅಧಿಕವಾಗುವ ಸಾಧ್ಯತೆಯಿದೆ. ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಮೂಡಬಹುದು. ವಾದ ವಿವಾದಗಳಿಂದ ಸಾಧ್ಯವಾದಷ್ಟು ದೂರವಿರಿ. ನಿಮ್ಮ ಶಾಂತ ಸ್ವಭಾವದಿಂದ ನಿಮ್ಮ ಕಾರ್ಯಕ್ಷೇತ್ರದಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದು.
ವೃಷಭರಾಶಿ (Taurus)
ನಿಮ್ಮ ಪಾಲಿಗೆ ಇಂದು ಅತ್ಯಂತ ಶುಭ ದಿನ. ಗೌರಿ ಯೋಗ ಮತ್ತು ರೋಹಿಣಿ ನಕ್ಷತ್ರದ ಕಾರಣದಿಂದ ಪ್ರೀತಿ, ಸಂತೋಷ, ಮತ್ತು ವೈವಾಹಿಕ ಜೀವನದಲ್ಲಿ ಸುಖ ಇರುತ್ತದೆ. ಸಂಗಾತಿಯಿಂದ ಉಡುಗೊರೆಯನ್ನು ಪಡೆಯುತ್ತೀರಿ, ಧನ ಪ್ರಾಪ್ತಿಯ ಯೋಗವಿದ್ದು, ಮಹಿಳೆಯರಿಗೆ ಆಭರಣ ಪ್ರಾಪ್ತಿಯಾಗಲಿದೆ.
ಮಿಥುನರಾಶಿ(Gemini)
ಆರ್ಥಿಕವಾಗಿ ನೀವು ಇಂದು ಚೇತರಿಕೆಯನ್ನು ಕಾಣುತ್ತೀರಿ. ವೃತ್ತಿ ಸಂಬಂಧಿತ ಭೇಟಿಯಿಂದ ಉತ್ಸಾಹ ಹೆಚ್ಚಲಿದೆ. ಶಿಸ್ತಿನಿಂದ ಕೆಲಸ ಕಾರ್ಯಗಳನ್ನು ಪೂರೈಸುತ್ತೀರಿ. ಸ್ನೇಹಿತರು ಮತ್ತು ಹತ್ತಿರದವರ ಸಹಕಾರ ದೊರೆಯಲಿದೆ.
ಕರ್ಕಾಟಕರಾಶಿ (Cancer)
ಮನರಂಜನೆಯ ಜೊತೆಗೆ ನಿಮಗಿಂದು ಮೋಜಿನ ದಿನ. ಹಣಕಾಸಿನ ಸ್ಥಿತಿ ಉತ್ತಮವಾಗಿ ಇರಲಿದೆ.ಆಡಳಿತಾತ್ಮಕ ಕೆಲಸಗಳಲ್ಲಿ ಪ್ರಗತಿ. ಸಹೋದ್ಯೋಗಿಗಳ ಜೊತೆಗೆ ಸ್ನೇಹಿತರ ಸಹಕಾರ ದೊರೆಯಲಿದೆ.
ಸಿಂಹರಾಶಿ (Leo)
ನಿಮ್ಮ ಪಾಲಿಗಿಂದು ಆರೋಗ್ಯಕರವಾದ ದಿನ. ನಿಮ್ಮ ಆತ್ಮವಿಶ್ವಾಸ ಇತರರ ಮೇಲೆ ಪ್ರಭಾವ ಬೀರುತ್ತದೆ. ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಾಣುವಿರಿ. ಹೊಸ ಜವಾಬ್ದಾರಿಗಳು ಹೆಗಲೇರಲಿದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ.
ಕನ್ಯಾರಾಶಿ (Virgo)
ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ಕೆಲವೊಂದು ವಿಚಾರಗಳಿಂದಾಗಿ ನೀವು ಮೆಚ್ಚುಗೆಗೆ ಪಾತ್ರರಾಗುವಿರಿ. ಆರ್ಥಿಕವಾಗಿ ಲಾಭದ ಅವಕಾಶಗಳಿವೆ.
ತುಲಾರಾಶಿ (Libra)
ಆರೋಗ್ಯದ ವಿಚಾರವಾಗಿ ನೀವು ಹೆಚ್ಚು ಜಾಗರೂಕರಾಗಿರಿ. ಆಹಾರ ಸೇವನೆಯ ಕಡೆಗೆ ಹೆಚ್ಚಿನ ಗಮನ ಹರಿಸಿ. ಹೊಸ ಆದಾಯದ ಮೂಲಗಳು ಗೋಚರಕ್ಕೆ ಬರಲಿದೆ. ಕೆಲಸದಲ್ಲಿ ತಾಳ್ಮೆಯಿಂದ ಮುಂದುವರಿಯುವಿರಿ.
ವೃಶ್ಚಿಕರಾಶಿ (Scorpio)
ನಿಮ್ಮ ಆತ್ಮವಿಶ್ವಾಸ ಮತ್ತು ಕೆಲಸ ವೇಳಾಪಟ್ಟಿ ನಿಮಗೆ ವಿಶ್ರಾಂತಿಯನ್ನು ನೀಡುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಮನಸು ತೊಡಗಲಿದೆ. ಉದ್ಯೋಗ ಮತ್ತು ವ್ಯಾಪಾರವು ಲಾಭದಾಯಕವಾಗಿ ಇರಲಿದೆ.
ಧನಸ್ಸು ರಾಶಿ
ಕೆಲಸವನ್ನು ನೀವು ಹೆಚ್ಚು ಆನಂದಿಸುತ್ತೀರಿ. ಕಚೇರಿಗೆ ಇಂದು ಬೇಗ ಹೊರಡಲು ಯತ್ನಿಸಿ. ಸ್ನೇಹ ಸಂಬಂಧಗಳು ಲಾಭವನ್ನು ತರಲಿದೆ. ಅಹಂಕಾರದಿಂದ ದೂರವಿರಿ.
ಮಕರ ರಾಶಿ (Capricorn)
ಕಲಿಯಲು ವಯಸ್ಸಾಗಿದೆ ಎಂದು ಕೆಲವರು ಭಾವಿಸಿದರೂ ಅದು ನಿಜವಲ್ಲ. ಕೃಷಿ ಮತ್ತು ಕೈಗಾರಿಕೋದ್ಯಮಿಗಳಿಗೆ ಯಶಸ್ಸು ಸಿಗಲಿದೆ. ದೈವಿಕ ಚಿಂತನೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ.
Horoscope Today 10 2025 ಕುಂಭ ರಾಶಿ (Aquarius)
ಸಹೋದರರ ಜೊತೆ ಸೇರಿ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ದೂರ ಪ್ರಯಾಣದ ಸಾಧ್ಯತೆಯಿದೆ. ಮಾನಸಿಕ ಚಿಂತೆ ಮತ್ತು ಖರ್ಚುಗಳ ಮೇಲೆ ನಿಗಾ ಇರಲಿ.
ಮೀನ ರಾಶಿ (Pisces)
ಸ್ನೇಹಿತರ ಜೊತೆಗಿನ ತಪ್ಪು ತಿಳುವಳಿಕೆ ಅಹಿತರ ಘಟನೆಗೆ ಕಾರಣವಾಗಬಹುದು. ವ್ಯವಹಾರದ ವೇಳೆ ಎಚ್ಚರಿಕೆಯನ್ನು ವಹಿಸಿ. ನಿಮ್ಮ ಪಾಲಿಗಿಂದು ಭಾವನೆಗಳಿಂದ ಕೂಡಿದ ದಿನವಾಗಿರಲಿದೆ. ಹೂಡಿಕೆಯಲ್ಲಿ ಅಧಿಕ ಲಾಭ ದೊರೆಯಲಿದೆ.
ದಿನಭವಿಷ್ಯ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ನಮ್ಮ ಡಿಜಿಟಲ್ ವಾಹಿನಿಯನ್ನು ಸಬ್ ಸ್ಕ್ರೈಬ್ ಮಾಡಿ



