ದಿನಭವಿಷ್ಯ 10 ಡಿಸೆಂಬರ್‌ 2024 : ಸ್ವಾತಿ ನಕ್ಷತ್ರದ ಪ್ರಭಾವದಿಂದ ಈ 3 ರಾಶಿಯವರಿಗೆ ಅದೃಷ್ಟ

Horoscope Today : ದಿನಭವಿಷ್ಯ 10 ಡಿಸೆಂಬರ್‌ 2024 ಭಾನುವಾರ. ಸ್ವಾತಿ ನಕ್ಷತ್ರವು ಇಂದು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ವೃಶ್ಚಿಕರಾಶಿಗೆ ಚಂದ್ರನು ಸಾಗುವುದರಿಂದ ವೃಷಭ ರಾಶಿ, ತುಲಾರಾಶಿ ಹಾಗೂ ಮಿಥುನರಾಶಿಯರಿಗೆ ಅದೃಷ್ಟ ತರಲಿದೆ.

Horoscope Today : ದಿನಭವಿಷ್ಯ 10 ಡಿಸೆಂಬರ್‌ 2024 ಭಾನುವಾರ. ಸ್ವಾತಿ ನಕ್ಷತ್ರವು ಇಂದು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ವೃಶ್ಚಿಕರಾಶಿಗೆ ಚಂದ್ರನು ಸಾಗುವುದರಿಂದ ವೃಷಭ ರಾಶಿ, ತುಲಾರಾಶಿ ಹಾಗೂ ಮಿಥುನರಾಶಿಯರಿಗೆ ಅದೃಷ್ಟ ತರಲಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಕೆಲಸದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿ. ಉದ್ಯೋಗಿಗಳು ಕೆಲಸದ ಸ್ಥಳ ಬದಲಾವಣೆಯಿಂದ ಅನುಕೂಲ. ಸಂಗಾತಿಗೆ ಆರೋಗ್ಯ ಸಮಸ್ಯೆ ಉಂಟಾಗಲಿದೆ. ಕುಟುಂಬದಲ್ಲಿನ ಭಿನ್ನಾಭಿಪ್ರಾಯವನ್ನು ಮಾತುಕತೆಯ ಮೂಲಕ ಸರಿಪಡಿಸಿಕೊಳ್ಳಿ.

ವೃಷಭರಾಶಿ ದಿನಭವಿಷ್ಯ
ಮಕ್ಕಳಿಗೆ ಪರೀಕ್ಷೆಯ ವಿಚಾರದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಎಚ್ಚರವಾಗಿರಿ. ಕುಟುಂಬ ಸದಸ್ಯರ ಜೊತೆಗೆ ಪ್ರವಾಸಕ್ಕೆ ತೆರಳುವಿರಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ.

ಮಿಥುನರಾಶಿ ದಿನಭವಿಷ್ಯ
ಉನ್ನತ ಅಧಿಕಾರಿಗಳ ಸಹಕಾರದಿಂದ ಅನುಕೂಲಕರ. ಹಣವನ್ನು ಇತರರಿಂದ ಎರವಲು ಪಡೆಯಬಹುದು. ಮಗುವಿಗಾಗಿ ಅನಗತ್ಯ ಖರ್ಚುಗಳನ್ನು ಮಾಡುವಿರಿ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ.

ಕರ್ಕಾಟಕರಾಶಿ ದಿನಭವಿಷ್ಯ
ಕೌಟುಂಬಿಕವಾಗಿ ಸಂತೋಷವಾದ ದಿನ. ಬುದ್ದಿವಂತಿಕೆಯಿಂದ ಕೈಗೊಂಡ ನಿರ್ಧಾರದಲ್ಲಿ ಯಶಸ್ಸು ದೊರೆಯಲಿದೆ. ನಿಮಗೆ ಇಂದು ಆರ್ಥಿಕ ಲಾಭವಾಗಲಿದೆ. ಮನೆಯಲ್ಲಿ ವಿವಾಹ ನಿಶ್ಚಯ ಕಾರ್ಯವು ನೆರವೇರಲಿದ್ದು, ವಿದೇಶದಿಂದ ಶುಭ ಸುದ್ದಿಯೊಂದನ್ನು ಕೇಳುವಿರಿ.

ಇದನ್ನೂ ಓದಿ : ಹಾರ್ದಿಕ್‌ ಪಾಂಡ್ಯ ಟೀಂ ಇಂಡಿಯಾಕ್ಕೆ ಕಂಬ್ಯಾಕ್‌ : ಜಯ್‌ ಶಾ ಕೊಟ್ರು ಗುಡ್‌ನ್ಯೂಸ್‌

ಸಿಂಹರಾಶಿ ದಿನಭವಿಷ್ಯ
ರಾಜಕಾರಣಿಗಳಿಗೆ ಅನುಕೂಲಕರವಾದ ದಿನ. ಮಕ್ಕಳ ಜವಾಬ್ದಾರಿಯನ್ನು ನಿಬಾಯಿಸುವಲ್ಲಿ ಯಶಸ್ವಿಯಾಗುತ್ತೀರಿ. ಆಹಾರ ಪದ್ದತಿಯನ್ನು ನಿಯಂತ್ರಣದಲ್ಲಿ ಇರಿಸಿ. ಇಲ್ಲವಾದ್ರೆ ಮುಂದೆ ದೊಡ್ಡ ಮಟ್ಟದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ವೃತ್ತಿ ಜೀವನದಲ್ಲಿ ಶುಭ ಸುದ್ದಿಯೊಂದನ್ನು ಕೇಳುವಿರಿ.

ಕನ್ಯಾರಾಶಿ ದಿನಭವಿಷ್ಯ
ಪಾಲುದಾರಿಕೆ ವ್ಯವಹಾರದಿಂದ ಲಾಭವನ್ನು ಪಡೆಯುತ್ತೀರಿ. ಕೌಟುಂಬಿಕ ಸದಸ್ಯರ ಜೊತೆಗೆ ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಹಿರಿಯ ಸದಸ್ಯರ ಜೊತೆಗೆ ಕೆಲವು ಕಾರ್ಯದ ಬಗ್ಗೆ ಚರ್ಚೆ ನಡೆಸುವಿರಿ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

Horoscope Today 10 December 2024 zodaic sign
Image Credit to Original Source

ತುಲಾರಾಶಿ ದಿನಭವಿಷ್ಯ
ಹೊಸ ಆದಾಯದ ಮೂಲಗಳು ನಿಮಗೆ ಗೋಚರವಾಗಲಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ನೀವು ಎಚ್ಚರಿಕೆಯನ್ನು ವಹಿಸಿ. ಸಂಗಾತಿಯಿಂದ ಇಂದು ಉಡುಗೊರೆಯೊಂದನ್ನು ಪಡೆಯುತ್ತೀರಿ.

ವೃಶ್ಚಿಕರಾಶಿ ದಿನಭವಿಷ್ಯ
ಸಾಮಾಜಿಕವಾಗಿ ಖ್ಯಾತಿ ಮತ್ತು ಗೌರವ ವೃದ್ದಿಸಲಿದೆ. ಕುಟುಂಬ ಸದಸ್ಯರ ನಡುವೆ ವಿವಾದಗಳು ಬಗೆ ಹರಿಯಲಿದೆ. ಸ್ನೇಹಿತರೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತೀರಿ. ನಿಮ್ಮ ಮಾತಿನಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ.

ಇದನ್ನೂ ಓದಿ : ಕುಂದಾಪುರ : ಮೂರು ಮುತ್ತು ಖ್ಯಾತಿಯ ಕಲಾವಿದ ಅಶೋಕ್‌ ಶಾನುಭೋಗ್‌ ಇನ್ನಿಲ್ಲ

ಧನಸ್ಸುರಾಶಿ ದಿನಭವಿಷ್ಯ
ಸಹೋದ್ಯೋಗಿಗಳು ಒತ್ತಡವನ್ನು ಎದುರಿಸಲಿದ್ದಾರೆ. ಉನ್ನತ ಅಧಿಕಾರಿಗಳು ಇಂದು ನಿಮ್ಮ ಬಗ್ಗೆ ದೂರು ನೀಡುವ ಸಾಧ್ಯತೆಯಿದೆ. ಸರಕಾರಿ ಕೆಲಸಗಳ ವಿಚಾರದಲ್ಲಿ ಇಂದು ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಇಂದು ಎಚ್ಚರವಾಗಿ ಇರುವುದು ಒಳಿತು.

ಮಕರರಾಶಿ ದಿನಭವಿಷ್ಯ
ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಸ ಯೋಜನೆಯನ್ನು ರೂಪಿಸುವಿರಿ. ಅಲ್ಲದೇ ಅಧಿಕ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಸಂಬಂಧಿಕರು ನಿಮಗೆ ಇಂದು ಹಣಕಾಸಿನ ಸಹಕಾರವನ್ನು ಮಾಡಲಿದ್ದಾರೆ.

ಇದನ್ನೂ ಓದಿ : ಆಧಾರ್‌ ಕಾರ್ಡ್‌ ದುರ್ಬಳಕೆ ಆಗ್ತಾ ಇದ್ಯಾ ? ಪತ್ತೆ ಹಚ್ಚುವುದು ಬಹಳ ಸುಲಭ, ಯಾವುದಕ್ಕೂ ಒಮ್ಮೆ ಚೆಕ್‌ ಮಾಡಿ

ಕುಂಭರಾಶಿ ದಿನಭವಿಷ್ಯ
ತಾಯಿಯ ಕಣ್ಣಿನ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಿ. ಪೂರ್ವಜರ ಆಸ್ತಿ ಮಾರಾಟದಿಂದ ಅಧಿಕ ಲಾಭವಾಗಿದೆ. ಸರಕಾರಿ ಉದ್ಯೋಗಿಗಳು ಇಂದು ಶುಭ ಸುದ್ದಿಯೊಂದನ್ನು ಕೇಳುವಿರಿ. ಕುಟುಂಬ ಸದಸ್ಯರ ಜೊತೆಗೆ ಶುಭ ಕಾರ್ಯದಲ್ಲಿ ಭಾಗಿಯಾಗುವಿರಿ.

ಮೀನರಾಶಿ ದಿನಭವಿಷ್ಯ
ಸಂಗಾತಿಯ ಮೇಲೆ ಪ್ರೀತಿ ಹೆಚ್ಚಲಿದೆ. ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢರಾಗುತ್ತಾರೆ. ಕುಟುಂಬ ಜೀವನದಲ್ಲಿ ಇಂದು ಹೊಸ ಅನುಭವ ಪಡೆಯಲಿದ್ದಾರೆ. ವ್ಯವಹಾರಿಕವಾಗಿಯೂ ಹೆಚ್ಚು ಲಾಭದಾಯಕವಾಗಲಿದೆ. ಸಂಬಂಧಿಕರು ಇಂದು ಹಣಕಾಸಿನ ಸಹಕಾರವನ್ನು ಮಾಡಲಿದ್ದಾರೆ. ಆಸ್ತಿ ವ್ಯವಹಾರವು ಇಂದು ಲಾಭದಾಯಕವಾಗಲಿದೆ.

ಗಮನಿಸಿ : ಇಲ್ಲಿ ನೀಡಲಾಗಿರುವ ಜ್ಯೋತಿಷ್ಯದ ಕುರಿತ ಮಾಹಿತಿಗಳು ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಆದರೆ ಈ ಮಾಹಿತಿಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಸಂಪೂರ್ಣ ವಿವರಗಳನ್ನು ತಿಳಿಯಲು ತಜ್ಞರನ್ನು ಸಂಪರ್ಕಿಸಬಹುದು. ಕನ್ನಡ ಸುದ್ದಿ, ಸಿನಿಮಾ, ರಾಜಕೀಯ, ಪ್ರಸಕ್ತ ವಿದ್ಯಾಮಾನ, ಕ್ರೀಡೆ, ಜ್ಯೋತಿಷ್ಯ ಸುದ್ದಿಗಳನ್ನು ನ್ಯೂಸ್‌ ನೆಕ್ಸ್ಟ್‌ನಲ್ಲಿ ಓದಬಹುದಾಗಿದೆ.

Horoscope Today 10 December 2024 zodaic sign

Comments are closed.