WPL 2024 ಹರಾಜು : 3 ಆಟಗಾರರನ್ನು ಖರೀಸಿದ RCB, ಕರ್ನಾಟಕದ ಈ ಆಟಗಾರ್ತಿಗೆ 1.3 ಕೋಟಿ ರೂ.

WPL 2024 Auction : ಮಹಿಳಾ ಪ್ರೀಮಿಯರ್‌ ಲೀಗ್‌ನ ಎರಡನೇ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್ ತಂಡ ಕರ್ನಾಟಕದ ಆಲ್ ರೌಂಡರ್ ವೃಂದಾ ದಿನೇಶ್ (Vrinda Dinesh) ಅವರನ್ನು ಬರೋಬ್ಬರಿ 1.30 ಕೋಟಿ ರೂ.ಗೆ ಖರೀಸಿದೆ.

WPL 2024 Auction : ಮಹಿಳಾ ಪ್ರೀಮಿಯರ್‌ ಲೀಗ್‌ನ ಎರಡನೇ ಆವೃತ್ತಿಯ ಹರಾಜು ಪ್ರಕ್ರಿಯೆ ನಡೆದಿದ್ದು, ಆರ್‌ಸಿಬಿ (RCB) ತಂಡ ಒಟ್ಟು 3 ಮಂದಿ ಆಟಗಾರರನ್ನು ಖರೀಸಿದಿದೆ. ಅದ್ರಲ್ಲೂ ಯುಪಿ ವಾರಿಯರ್ಸ್ ತಂಡ ಕರ್ನಾಟಕದ ಆಲ್ ರೌಂಡರ್ ವೃಂದಾ ದಿನೇಶ್ (Vrinda Dinesh) ಅವರನ್ನು ಬರೋಬ್ಬರಿ 1.30 ಕೋಟಿ ರೂ.ಗೆ ಖರೀಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಆಸ್ಟ್ರೇಲಿಯಾ ಮೂಲದ ಆಲ್‌ರೌಂಡರ್ ಜಾರ್ಜಿಯಾ ವಾರೆಮ್‌ನಲ್ಲಿ ಅವರನ್ನು 40 ಲಕ್ಷ ರೂ. ಖರೀದಿಸಿದೆ. ನಂತರ ಇಂಗ್ಲೆಂಡ್‌ನ ವೇಗದ ಬೌಲರ್ ಕೇಟ್ ಕ್ರಾಸ್ 30 ಲಕ್ಷ ರೂ ಮೂಲ ಬೆಲೆಗೆ ಹಾಗೂ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಏಕ್ತಾ ಬಿಶ್ತ್ ಅವರನ್ನು 60 ಲಕ್ಷಕ್ಕೆ ಖರೀದಿಸಿದೆ.

WPL 2024 Auction RCBwho bought 3 players, paid Rs 1.3 crore for Vrinda Dinesh player from Karnataka
Image Credit : Vrinda Dinesh/ instagram

WPL 2024 Auction : ಕರ್ನಾಟಕ ವೃಂದಾ ದಿನೇಶ್‌ಗೆ ಭರ್ಜರಿ ಜಾಕ್‌ಪಾಟ್

ಕರ್ನಾಟಕದ ಆಟಗಾರ್ತಿ ವೃಂದಾ ದಿನೇಶ್‌ ಅವರಿಗೆ ಜಾಕ್‌ಪಾಟ್‌ ಹೊಡೆದಿದೆ. ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಕೇವಲ 10 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದ ಕರ್ನಾಟಕದ ಆಲ್‌ರೌಂಡರ್ ವೃಂದಾ ದಿನೇಶ್ ಕೋಟಿ ಬೆಲೆಗೆ ಮಾರಾಟವಾಗಿದ್ದಾರೆ.

ಈ ಬಾರಿಯ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಕರ್ನಾಟಕ ವೃಂದಾ ದಿನೇಶ್‌ ಅವರನ್ನು ಯುಪಿ ವಾರಿಯರ್ಸ್‌ ತಂಡ ಬರೋಬ್ಬರಿ 1.30 ಕೋಟಿ ರೂ.ಗೆ ಖರೀದಿ ಮಾಡಿದೆ.WPL 2024 ಹರಾಜಿನ ಈ ಆವೃತ್ತಿಯಲ್ಲಿ ನಡೆದ ಅಚ್ಚರಿಯ ಆಯ್ಕೆಯಾಗಿದೆ. ಮೊದಲ ಸುತ್ತಿನಲ್ಲೇ ವೃಂದಾ ದಿನೇಶ್‌ ಕೋಟಿಗಳಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಇನ್ನು ಆಸ್ಟ್ರೇಲಿಯಾದ ಆಲ್ ರೌಂಡರ್ ಫೋಬೆ ಲಿಚ್ ಫೀಲ್ಡ್ ಮೂಲ ಬೆಲೆ 30 ಲಕ್ಷ ರೂ. ಇದ್ದು, ಗುಜರಾತ್ ಟೈಟಾನ್ಸ್ ಮತ್ತು ಯುಪಿ ವಾರಿಯರ್ಸ್ ಭರ್ಜರಿ ಹರಾಜಿನ ನಡುವೆ 1 ಕೋಟಿ ರೂ.ಗೆ ಹರಾಜು ಆಗಿದ್ದಾರೆ. ಇನ್ನುಇಂಗ್ಲೆಂಡ್ ತಂಡದ ಆಟಗಾರ ಡೇನಿಯಲ್ ವ್ಯಾಟ್ ಅವರನ್ನು ಯುಪಿ ವಾರಿಯರ್ಸ್‌ಗೆ ಮೂಲ ಬೆಲೆ 30 ಲಕ್ಷ ರೂ.ಗೆ ಮಾರಾಟ ಆಗಿದ್ದಾರೆ.

WPL 2024 Auction RCBwho bought 3 players, paid Rs 1.3 crore for Vrinda Dinesh player from Karnataka
Image Credit : Jio Cinema

ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದರೂ ಕೂಡ ಡೇನಿಯಲ್ ವ್ಯಾಟ್ ಕಳೆದ ಬಾರಿ ಮಾರಾಟ ಆಗಿರಲಿಲ್ಲ. ಆಸ್ಟ್ರೇಲಿಯಾದ ಆಲ್‌ರೌಂಡರ್ ಅನ್ನಾಬೆಲ್ ಸದರ್‌ಲ್ಯಾಂಡ್ ಅವರನ್ನು ದೆಹಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರೂ 2 ಕೋಟಿಗೆ ಖರೀದಿಸಿದೆ. ಅನ್ನಾಬೆಲ್ ಮೂಲ ಬೆಲೆ 30 ಲಕ್ಷ ರೂಪಾಯಿ. ಇದ್ದು, ಬಾರೀ ಪೈಪೋಟಿಯ ನಡುವಲ್ಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ದಕ್ಷಿಣ ಆಫ್ರಿಕಾದ ವೇಗಿ ಶಬ್ನಿಮ್ ಇಸ್ಮಾಯಿಲ್ ಅನ್ನು 1.2 ಕೋಟಿ ರೂ.ಗೆ ಪಡೆಯುವಲ್ಲಿ ಯಶಸ್ವಿಯಾಯಿತು.

ಭಾರತ ಮೂಲದ ವಿಕೆಟ್‌ಕೀಪರ್- ಆಟಗಾರ್ತಿ ಅಪರ್ಣಾ ಮೊಂಡಲ್ ಅವರು ಅಂತರಾಷ್ಟ್ರೀಯ ಪಂದ್ಯವನ್ನು ಆಡದೇ ಇದ್ದರೂ ಕೂಡ ಅವರನ್ನು ದೆಹಲಿ ಕ್ಯಾಪಿಟಲ್ಸ್‌ಗೆ ರೂ 10 ಲಕ್ಷದ ಮೂಲ ಬೆಲೆಗೆ ಖರೀದಿ ಮಾಡಿದೆ. ಮೊದಲ ಸುತ್ತಿನ ಖರೀದಿ ಮುಕ್ತಾಯವಾಗಿದ್ದು, ಹಲವು ಖ್ಯಾತ ಆಟಗಾರರು ಹರಾಜು ಆಗದೇ ಉಳಿದುಕೊಂಡಿದ್ದಾರೆ.

WPL 2024 Auction : ಹರಾಜು ಆಗದೇ ಉಳಿದ ಖ್ಯಾತ ಆಟಗಾರರು :

ಮಹಿಳಾ ಪ್ರೀಮಿಯರ್ ಲೀಗ್ ಮೊದಲ ಸುತ್ತಿನ ಹರಾಜಿನಲ್ಲಿ ಶ್ರೀಲಂಕಾದ ಚಾಮರಿ ಅಟಪಟ್ಟು, ವೆಸ್ಟ್ ಇಂಡೀಸ್‌ನ ಡಿಯೋಂಡ್ರಾ ಡಾಟಿನ್, ದೇವಿಕಾ ವೈದ್ಯ, ಪ್ರಿಯಾ ಪೂನಿಯಾ, ಕನ್ನಡತಿ ವೇದಾ ಕೃಷ್ಣಮೂರ್ತಿ, ಪೂನಂ ರಾವತ್ ಮತ್ತು ಇತರ ಹಲವು ಆಟಗಾರರು ಮಾರಾಟವಾಗದೆ ಉಳಿದಿದ್ದಾರೆ.

WPL 2024 Auction RCB who bought 3 players, paid Rs 1.3 crore for Vrinda Dinesh player from Karnataka

Comments are closed.