ದಿನಭವಿಷ್ಯ 12 ಡಿಸೆಂಬರ್‌ 2024 : ಭೌಮಾವತಿ ಅಮಾವಾಸ್ಯೆ ಯಾವರಾಶಿಗೆ ತರಲಿದೆ ಶುಭ

Horoscope Today : ದಿನಭವಿಷ್ಯ 12 ಡಿಸೆಂಬರ್‌ 2024 ಮಂಗಳವಾರ. ದ್ವಾದಶರಾಶಿಗಳ ಮೇಲೆ ಇಂದು ಅನುರಾಧ ನಕ್ಷತ್ರದ ಪ್ರಭಾವ ಇರುತ್ತದೆ. ಭೌಮಾವತಿ ಅಮವಾಸ್ಯೆ, ಧೃತಿಯೋಗದಿಂದ ಕೆಲವರು ರಾಶಿಯವರಿಗೆ ಅದೃಷ್ಟ ಬರಲಿದೆ.

Horoscope Today : ದಿನಭವಿಷ್ಯ 12 ಡಿಸೆಂಬರ್‌ 2024 ಮಂಗಳವಾರ. ದ್ವಾದಶರಾಶಿಗಳ ಮೇಲೆ ಇಂದು ಅನುರಾಧ ನಕ್ಷತ್ರದ ಪ್ರಭಾವ ಇರುತ್ತದೆ. ಭೌಮಾವತಿ ಅಮವಾಸ್ಯೆ, ಧೃತಿಯೋಗದಿಂದ ಕೆಲವರು ರಾಶಿಯವರಿಗೆ ಅದೃಷ್ಟ ಬರಲಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಹೊಸ ಯೋಜನೆಯನ್ನು ಆರಂಭಿಸುವ ಮೊದಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಕೆಲಸ ಕಾರ್ಯಗಳಲ್ಲಿ ಯಶಸ್ಸು. ಸಂಜೆಯ ವೇಳೆಗೆ ಸಂಬಂಧಿಕ ಮನೆಗೆ ಭೇಟಿ. ಹೆಚ್ಚು ಭಾವುಕರಾಗಿ ಇರಬಾರದು. ಪಾಲುದಾರರ ಜೊತೆಗೆ ಹೊಂದಾಣಿಕೆ ಅಗತ್ಯ.

ವೃಷಭರಾಶಿ ದಿನಭವಿಷ್ಯ
ದೀರ್ಘಕಾಲದ ವರೆಗೆ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆ. ನಿಮ್ಮ ವರ್ತನೆ ಜೀವನ ಸಂಗಾತಿಗೆ ಒತ್ತಡವನ್ನು ತರಬಹುದು. ಹೊಸ ಯೋಜನೆಗಳ ಬಗ್ಗೆ ಹಲವು ಬಾರಿ ಯೋಚಿಸುವುದು ಒಳಿತು. ಮನೆಯಲ್ಲಿ ಜಗಳವಾಗುವುದನ್ನು ತಪ್ಪಿಸಿ.

ಮಿಥುನರಾಶಿ ದಿನಭವಿಷ್ಯ
ಆರೋಗ್ಯವು ಚೆನ್ನಾಗಿ ಇರಲಿದೆ. ಯಾರಿಗೂ ಕೂಡ ಯಾವುದೇ ಕಾರಣಕ್ಕೂ ಸಾಲ ನೀಡಬೇಡಿ. ಮಕ್ಕಳಿಗೆ ಪರೀಕ್ಷೆಯ ವಿಚಾರದಲ್ಲಿ ಶುಭ ಸುದ್ದಿ ಸಿಗಲಿದೆ. ಕುಟುಂಬದ ಹಿರಿಯ ಸದ್ಯರ ಜೊತೆಗೆ ಸಮಯವನ್ನು ಕಳೆಯುವಿರಿ.

ಕರ್ಕಾಟಕರಾಶಿ ದಿನಭವಿಷ್ಯ
ಉದ್ಯೋಗದಲ್ಲಿ ನೀವು ಭಡ್ತಿ ಪಡೆಯುವ ಸಾಧ್ಯತೆಯಿದೆ. ವಿವಾದಗಳು ಬಗೆ ಹರಿಯಲಿದೆ. ವಿದ್ಯಾರ್ಥಿಗಳಿಗೆ ಆರ್ಥಿಕ ಸಮಸ್ಯೆ ಎದುರಾಗಲಿದೆ. ಉದ್ಯಮಿಗಳಿಗೆ ನಿರೀಕ್ಷಿತ ಲಾಭ. ವೈವಾಹಿಕ ಜೀವನದಲ್ಲಿ ಸಂತಸ.

ಇದನ್ನೂ ಓದಿ : IPL 2024 : ಡೆಲ್ಲಿ ಕ್ಯಾಪಿಟಲ್ಸ್‌ಗೆ ರಿಷಬ್ ಪಂತ್ ಇಂಪ್ಯಾಕ್ಟ್ ಪ್ಲೇಯರ್ ?

ಸಿಂಹರಾಶಿರಾಶಿ ದಿನಭವಿಷ್ಯ
ನಿರೀಕ್ಷಿತ ಲಾಭದಿಂದ ಉದ್ಯೋಗಿಗಳಿಗೆ ಸಂತಸ. ಅನೇಕ ಸಮಸ್ಯೆಗಳು ಇಂದು ಪರಿಹಾರವನ್ನು ಕಾಣಲಿದೆ. ವಿರೋಧಿಗಳ ಬಗ್ಗೆ ನೀವು ಎಚ್ಚರವಾಗಿರಿ. ರಾಜಕಾರಣಿಗಳಿಗೆ ಉತ್ತಮ ಅವಕಾಶ. ಸಾಮಾಜಿಕವಾಗಿ ಖ್ಯಾತಿ.

ಕನ್ಯಾರಾಶಿ ದಿನಭವಿಷ್ಯ
ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಪ್ರೀತಿಯ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಲಾಭ. ಬಾಖಿ ಕೆಲಸಗಳು ಪೂರ್ಣಗೊಳ್ಳಲಿದೆ.

Horoscope Today 12 December 2024 Zodiac Sign 
Image Credit to Original Source

ತುಲಾರಾಶಿ ದಿನಭವಿಷ್ಯ
ಆರ್ಥಿಕ ಪರಿಸ್ಥಿತಿ ವೃದ್ದಿಸಲಿದೆ. ಬೇರೆಯವರ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಬಾಕಿ ಹಣ ಕೈ ಸೇರಲಿದ್ದು, ಆರ್ಥಿಕ ಪ್ರಗತಿ ಕಾಣುವಿರಿ. ಶುಭಫಲಗಳು ದೊರೆಯಲಿದೆ.

ವೃಶ್ಚಿಕರಾಶಿ ದಿನಭವಿಷ್ಯ
ಸ್ನೇಹಿತರಿಗೆ ಸಾಲವಾಗಿ ನೀಡಿದ ಹಣದಿಂದ ಮೋಸ. ಹಿರಿಯರ ಸಲಹೆಯ ಜೊತೆಗೆ ಆಶೀರ್ವಾದವನ್ನು ಪಡೆಯಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮದಿಂದ ಯಶಸ್ಸು ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ತೀರಾ ಎಚ್ಚರಿಕೆ ಅತ್ಯಗತ್ಯ.

ಧನಸ್ಸುರಾಶಿ ದಿನಭವಿಷ್ಯ
ಸ್ನೇಹಿತರ ಆರೋಗ್ಯದ ಬಗ್ಗೆ ಚಿಂತೆ. ಹೊಸ ವ್ಯವಹಾರ ಒಪ್ಪಂದದಿಂದ ಯಶಸ್ಸು ದೊರೆಯಲಿದೆ. ಸಾಮಾಜಿಕವಾಗಿ ಗೌರವ ಹೆಚ್ಚಲಿದೆ. ಕುಟುಂಬ ಸದಸ್ಯರ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯುವಿರಿ.

ಇದನ್ನೂ ಓದಿ : ಸ್ಟಾಪ್-ಕ್ಲಾಕ್ ರೂಲ್ಸ್‌ ಜಾರಿಗೆ ತಂದ ಐಸಿಸಿ, ಪ್ರತೀ ಓವರ್‌ ಆರಂಭಕ್ಕೆ 60 ಸೆಕೆಂಡ್‌ : ಏನಿದು ಸ್ಟಾಪ್-ಕ್ಲಾಕ್ ನಿಯಮ ?

ಮಕರರಾಶಿ ದಿನಭವಿಷ್ಯ
ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿ ಬರಲಿದೆ. ಹಣ ಹೂಡಿಕೆ ಮಾಡುವ ಮೊದಲು ಎಚ್ಚರಿಕೆಯನ್ನು ವಹಿಸಿ. ಹಲವು ಕಾರ್ಯಗಳಲ್ಲಿ ಧನಾತ್ಮಕ ಫಲಿತಾಂಶ ದೊರೆಯಲಿದೆ. ಸಹೋದರರ ನಡುವಿನ ವಿವಾದ ಪರಿಹಾರವನ್ನು ಕಾಣಲಿದೆ.

ಕುಂಭರಾಶಿ ದಿನಭವಿಷ್ಯ
ಪ್ರೇಮ ಜೀವನವು ಸುಖಮಯವಾಗಿ ಇರುತ್ತದೆ. ಕೆಲವು ಸದಸ್ಯರು ನಿಮ್ಮ ಮೇಲೆ ನಿರಾಸೆಗೊಳ್ಳುವರು. ಮಕ್ಕಳ ವಿಚಾರದಲ್ಲಿ ಇಂದು ನಿರಾಸೆ. ಹಿರಿಯ ಆಶೀರ್ವಾದದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.

ಮೀನರಾಶಿ ದಿನಭವಿಷ್ಯ
ಶುಭ ಕಾರ್ಯಗಳಲ್ಲಿ ಇಂದು ಭಾಗವಹಿಸುವಿರಿ. ವ್ಯಾಪಾರಿಗಳು ಇಂದು ಲಾಭದ ಕಡೆಗೆ ಮುಖ ಮಾಡುವರು. ಸ್ನೇಹಿತರ ಸಹಕಾರ, ಉದ್ಯೋಗಿಗಳಿಗೆ ಮುಂಭಡ್ತಿ ದೊರೆಯಲಿದೆ. ಹೊಸ ವಾಹನ ಖರೀದಿ ಕಾರ್ಯವನ್ನು ಮುಂದೂಡಿಕೆ ಮಾಡಿ.

ಇದನ್ನೂ ಓದಿ : 10 ಸಾವಿರಕ್ಕೂ ಕಡಿಮೆ ಬೆಲೆಗೆ 5000Mah ಬ್ಯಾಟರಿ, 50MP ಕ್ಯಾಮೆರಾ ಹೊಂದಿರುವ Poco C65

Horoscope Today 12 December 2024 Zodiac Sign

Comments are closed.