IPL 2024 Auction : ಐಪಿಎಲ್‌ 2024 ಯಾವ ತಂಡಕ್ಕೆ ಯಾರು ನಾಯಕರು ? ತಂಡಗಳ ಬಳಿ ಬಾಕಿ ಇರುವ ಮೊತ್ತವೆಷ್ಟು ?

IPL 2024 Auction: ಇಂಡಿಯನ್ ಪ್ರೀಮಿಯರ್ ಲೀಗ್ (indian premier league -2024 ) ಇದೇ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜನ್ನು ವಿದೇಶಿ ನೆಲದಲ್ಲಿ ಆಯೋಜಿಸಲಾಗಿದೆ. ಜೊತೆಗೆ ತಂಡಗಳಿಗೆ ಹೊಸ ನಾಯಕರ ನೇಮಕವಾಗಿದೆ.

IPL 2024 Auction: ಇಂಡಿಯನ್ ಪ್ರೀಮಿಯರ್ ಲೀಗ್ (indian premier league -2024 ) ಹರಾಜು ಡಿಸೆಂಬರ್ 19, 2023 ರಂದು ದುಬೈನ ಕೋಕಾ-ಕೋಲಾ ಅರೆನಾದಲ್ಲಿ ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜನ್ನು ವಿದೇಶಿ ನೆಲದಲ್ಲಿ ಆಯೋಜಿಸಲಾಗಿದೆ. ಜೊತೆಗೆ ತಂಡಗಳಿಗೆ ಹೊಸ ನಾಯಕರ ನೇಮಕವಾಗಿದೆ. ಹಾಗಾದ್ರೆ ಯಾವ ತಂಡಕ್ಕೆ ಯಾವ ನಾಯಕರು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಐಪಿಎಲ್‌ ಪ್ರಾಂಚೈಸಿಗಳ ಪೈಕಿ ಕಳೆದ ಎರಡು ಅವಧಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿ, ಒಂದು ಬಾರಿ ಐಪಿಎಲ್‌ ಟ್ರೋಫಿ ಗೆದ್ದು, ಮತ್ತೊಮ್ಮೆ ರನ್ನರ್ಸ್‌ ಅಪ್‌ ಪ್ರಶಸ್ತಿ ಪಡೆದುಕೊಂಡಿರುವ ಗುಜರಾತ್‌ ಟೈಟಾನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಗುಜರಾತ್‌ ತೊರೆದು, ಮುಂಬೈ ಪಾಳಯ ಸೇರಿಕೊಂಡಿದ್ದಾರೆ. ಶುಭಮನ್‌ ಗಿಲ್‌ ಗುಜರಾತ್‌ ನೇತೃತ್ವ ವಹಿಸಿದ್ದಾರೆ. ಹಾಗಾದ್ರೆ ಯಾವ ತಂಡಕ್ಕೆ ಯಾರು ನಾಯಕರು. ಇಲ್ಲಿದೆ ಸಂಪೂರ್ಣ ಮಾಹಿತಿ.

IPL 2024 Auction Who will be the captain of which team in IPL 2024 Remaining Purse in IPL Teams
Image Credit To Original Source

ಐಪಿಎಲ್‌ ತಂಡಗಳಲ್ಲಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಈ ಬಾರಿ ನಡೆಯಲಿರುವ ಮಿನಿ ಹರಾಜಿನಲ್ಲಿ ಹಲವು ಆಟಗಾರರು ಸೇರ್ಪಡೆಯಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜು 2024ರಲ್ಲಿ 830 ಭಾರತೀಯ ಆಟಗಾರರು ಮತ್ತು 336 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 1166 ಆಟಗಾರರು ತಂಡದಲ್ಲಿದ್ದಾರೆ.

ಇದನ್ನೂ ಓದಿ : IPL 2024 : ಮುಂಬೈ ಇಂಡಿಯನ್ಸ್‌ ತಂಡಕ್ಕೆ ರೋಹಿತ್‌ ಶರ್ಮಾ ಅಲ್ಲಾ, ಸೂರ್ಯಕುಮಾರ್‌ ಯಾದವ್‌ ನಾಯಕ ?

ಹರಾಜು ಪಟ್ಟಿಯಲ್ಲಿ ಒಟ್ಟು 212 ಕ್ಯಾಪ್ಡ್ ಆಟಗಾರರು, 909 ಅನ್‌ಕ್ಯಾಪ್ಡ್ ಆಟಗಾರರು ಮತ್ತು 45 ಐಸಿಸಿ ಅಸೋಸಿಯೇಟ್ ರಾಷ್ಟ್ರಗಳ ಆಟಗಾರರು ಒಳಗೊಂಡಿದ್ದಾರೆ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಋತುವಿಗಾಗಿ ಹತ್ತು ತಂಡಗಳು ಈಗಾಗಲೇ 173 ಆಟಗಾರರನ್ನು ಉಳಿಸಿಕೊಂಡಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ತಂಡಗಳು ಮತ್ತು ನಾಯಕರು

– ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ
– ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್
– ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್
– ಕೋಲ್ಕತ್ತಾ ನೈಟ್ ರೈಡರ್ಸ್: ನಿತೀಶ್ ರಾಣಾ
– ಲಕ್ನೋ ಸೂಪರ್ ಜೈಂಟ್ಸ್: ಕೆಎಲ್‌ ರಾಹುಲ್‌
– ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ
– ಪಂಜಾಬ್ ಕಿಂಗ್ಸ್: ಶಿಖರ್ ಧವನ್
– ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್
– ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್
– ಸನ್‌ರೈಸರ್ಸ್ ಹೈದರಾಬಾದ್: ಏಡೆನ್ ಮಾರ್ಕ್ರಾಮ್, ಮಯಾಂಕ್ ಅಗರ್ವಾಲ್

ಇದನ್ನೂ ಓದಿ : WPL 2024 ಹರಾಜು : 3 ಆಟಗಾರರನ್ನು ಖರೀಸಿದ RCB, ಕರ್ನಾಟಕದ ಈ ಆಟಗಾರ್ತಿಗೆ 1.3 ಕೋಟಿ ರೂ.

IPL 2024 Auction Who will be the captain of which team in IPL 2024 Remaining Purse in IPL TeamsIPL 2024 Auction Who will be the captain of which team in IPL 2024 Remaining Purse in IPL Teams
Image Credit To Original Source

IPL ಹರಾಜು 2024: ಪ್ರಾಂಚೈಸಿಗಳಲ್ಲಿ ಉಳಿದ ಹಣ

ಪ್ರತಿ ತಂಡವು ತಮ್ಮ ನಿಗದಿಪಡಿಸಿದ ₹100 ಕೋಟಿ ಬಜೆಟ್‌ನಲ್ಲಿ ತಂಡಕ್ಕೆ ಬೇಕಾದಷ್ಟು ಆಟಗಾರರನ್ನು ಖರೀದಿ ಮಾಡಬಹುದಾಗಿದೆ.

ಇದನ್ನೂ ಓದಿ : IPL 2024 Auction : ಐಪಿಎಲ್‌ ಆಡ್ತಾರಂತೆ ಕೆವಿನ್‌ ಪೀಟರ್ಸನ್‌ : ಹರಾಜಿಗೆ ಹೇಗೆ ಭಾಗವಹಿಸಲಿ ಎಂದ ಮಾಜಿ ಕ್ರಿಕೆಟಿಗ

– ಚೆನ್ನೈ ಸೂಪರ್ ಕಿಂಗ್ಸ್: ₹ 31.40 ಕೋಟಿ
– ದೆಹಲಿ ಕ್ಯಾಪಿಟಲ್ಸ್: ₹28.95 ಕೋಟಿ
– ಗುಜರಾತ್ ಟೈಟಾನ್ಸ್: ₹23.15 ಕೋಟಿ
– ಕೋಲ್ಕತ್ತಾ ನೈಟ್ ರೈಡರ್ಸ್: ₹ 32.70 ಕೋಟಿ
– ಲಕ್ನೋ ಸೂಪರ್ ಜೈಂಟ್ಸ್: ₹13.15 ಕೋಟಿ
– ಮುಂಬೈ ಇಂಡಿಯನ್ಸ್: ₹15.25 ಕೋಟಿ
– ಪಂಜಾಬ್ ಕಿಂಗ್ಸ್: ₹29.10 ಕೋಟಿ
– ರಾಜಸ್ಥಾನ್ ರಾಯಲ್ಸ್: ₹14.50 ಕೋಟಿ
– ರಾಯಲ್ ಚಾಲೆಂಜರ್ಸ್ ಬೆಂಗಳೂರು: ₹23.25 ಕೋಟಿ
– ಸನ್‌ರೈಸರ್ಸ್ ಹೈದರಾಬಾದ್: ₹34.00 ಕೋಟಿ

IPL 2024 Auction Who will be the captain of which team in IPL 2024 Remaining Purse in IPL Teams

Comments are closed.