ಸ್ಟಾಪ್-ಕ್ಲಾಕ್ ರೂಲ್ಸ್‌ ಜಾರಿಗೆ ತಂದ ಐಸಿಸಿ, ಪ್ರತೀ ಓವರ್‌ ಆರಂಭಕ್ಕೆ 60 ಸೆಕೆಂಡ್‌ : ಏನಿದು ಸ್ಟಾಪ್-ಕ್ಲಾಕ್ ನಿಯಮ ?

ICC stop-clock rules WI vs ENG 1st T20 :ಇಂಗ್ಲೆಂಡ್‌ ಹಾಗೂ ವೆಸ್ಟ್‌ ಇಂಡಿಸ್‌ ಪಂದ್ಯಕ್ಕೆ ಸ್ಟಾಪ್‌ ಕ್ಲಾಕ್‌ ನಿಯಮ ಜಾರಿಗೆ ತರಲು ಮುಂದಾಗಿದೆ. ಇದೇ ಮೊದಲ ಬಾರಿಗೆ T20 ಪಂದ್ಯಕ್ಕೆ ಹೊಸ ನಿಯಮ ಜಾರಿಯಾಗುತ್ತಿದೆ. ಅಷ್ಟಕ್ಕೂ ಏನಿದು ಸ್ಟಾಪ್‌ ಕ್ಲಾಕ್‌ ನಿಯಮ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ICC stop-clock rules WI vs ENG 1st T20 : ‌ಕ್ರಿಕೆಟ್‌ ಲೋಕದಲ್ಲಿ ಹೊಸ ಹೊಸ ರೂಲ್ಸ್‌ ಜಾರಿಯಾಗುತ್ತಿದೆ. ಇದೀಗ ಅಂತರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಇಂಗ್ಲೆಂಡ್‌ ಹಾಗೂ ವೆಸ್ಟ್‌ ಇಂಡಿಸ್‌ ಪಂದ್ಯಕ್ಕೆ ಸ್ಟಾಪ್‌ ಕ್ಲಾಕ್‌ ನಿಯಮ (stop-clock rules) ಜಾರಿಗೆ ತರಲು ಮುಂದಾಗಿದೆ. ಇದೇ ಮೊದಲ ಬಾರಿಗೆ T20 ಪಂದ್ಯಕ್ಕೆ ಹೊಸ ನಿಯಮ ಜಾರಿಯಾಗುತ್ತಿದೆ. ಅಷ್ಟಕ್ಕೂ ಏನಿದು ಸ್ಟಾಪ್‌ ಕ್ಲಾಕ್‌ ನಿಯಮ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಕ್ರಿಕೆಟ್‌ ಪಂದ್ಯದ ವೇಳೆಯಲ್ಲಿ ಫೀಲ್ಡಿಂಗ್‌ ಸೈಡ್‌ನಲ್ಲಿ ಉಂಟಾಗುತ್ತಿರುವ ಸಮಯ ವ್ಯರ್ಥವನ್ನು ತಡೆದು, ನಿಗದಿತ ವೇಳೆಯಲ್ಲಿಯೇ ಪಂದ್ಯವನ್ನು ಮುಗಿಸೋದು ಐಸಿಸಿ ಉದ್ದೇಶವಾಗಿದೆ. ಸ್ಟಾಪ್-ಕ್ಲಾಕ್ ನಿಮಯ ಇದೀಗ ಏಕದಿನ ಹಾಗೂ ಟಿ20  ಪಂದ್ಯಗಳಿಗೆ ಇದು ಜಾರಿಯಾಗುತ್ತಿದೆ. ಪ್ರತೀ ಓವರ್‌ಗಳ ನಡುವೆ ವಿಳಂಭ ವೇಳೆಯಲ್ಲಿ 2 ಬಾರಿ ಎಚ್ಚರಿಕೆಯನ್ನು ನೀಡಲಾಗುತ್ತದೆ.

ICC implements stop-clock rules 60 seconds for the start of each over What is the stop-clock rule
Image Credit to Original Source

ಸ್ಟಾಪ್-ಕ್ಲಾಕ್ ನಿಮಯದ ಪ್ರಕಾರ ಪ್ರತೀ ಓವರ್‌ ವಿಳಂಭದ ವೇಳೆಯಲ್ಲಿ 2 ಬಾರಿ ಎಚ್ಚರಿಕೆಯನ್ನು ನೀಡಲಾಗುತ್ತದೆ. ಎರಡು ಎಚ್ಚರಿಕೆಯ ನಂತರ 5 ರನ್ ಪೆನಾಲ್ಟಿ ನೀಡಿ, ಎದುರಾಳಿ ತಂಡಕ್ಕೆ ಐದು ರನ್‌ ನೀಡಲಾಗುತ್ತದೆ. ಹೀಗಾಗಿ ಐಸಿಸಿ ನಿಗದಿ ಪಡಿಸಿರುವ ವೇಳೆಯಲ್ಲಿಯೇ ಪಂದ್ಯವನ್ನು ತಂಡಗಳು ಕಡ್ಡಾಯವಾಗಿ ಮುಗಿಸಲೇ ಬೇಕಾಗುತ್ತದೆ.

ಇದನ್ನೂ ಓದಿ : IPL 2024 : ಡೆಲ್ಲಿ ಕ್ಯಾಪಿಟಲ್ಸ್‌ಗೆ ರಿಷಬ್ ಪಂತ್ ಇಂಪ್ಯಾಕ್ಟ್ ಪ್ಲೇಯರ್ ?

ಫೀಲ್ಡಿಂಗ್‌ ತಂಡಗಳ ವಿಳಂಭದಿಂದಾಗಿ ಕೆಲವೊಮ್ಮೆ ಪಂದ್ಯಾವಳಿ ಮುಕ್ತಾಯದ ವೇಳೆಯಲ್ಲಿ ತಡವಾಗುತ್ತಿದೆ. ಕೆಲವೊಮ್ಮೆ ತಡವಾಗಿ ಪಂದ್ಯವನ್ನು ಮುಗಿಸಿದ್ರೆ ನಾಯಕರಿಗೆ ಐಸಿಸಿ ಇಷ್ಟು ಸಮಯ ದಂಡವನ್ನು ವಿಧಿಸುತ್ತಿತ್ತು. ಆದರೆ ಇನ್ನಷ್ಟು ಪರಿಣಾಮಕಾರಿಯಾಗಿಸುವ ಸಲುವಾಗಿ ಇದೀಗ ಐಸಿಸಿ 5 ರನ್ ಪೆನಾಲ್ಟಿ ನೀಡುವ ರೂಲ್ಸ್‌ ಜಾರಿಗೆ ತಂದಿದೆ.

ಆರಂಭಿಕವಾಗಿ ಸ್ಟಾಪ್-ಕ್ಲಾಕ್ ಪ್ರಯೋಗವು ಡಿಸೆಂಬರ್ 2023ನಲ್ಲಿ ನಡೆಯಲಿರುವ ವೆಸ್ಟ್‌ ಇಂಡಿಸ್‌ ಹಾಗೂ ಇಂಗ್ಲೆಂಡ್‌ ನಡುವಿನ ಮೊದಲ ಟಿ20 ಪಂದ್ಯದಿಂದ ಆರಂಭಗೊಳ್ಳಲಿದೆ. ಮುಂದಿನ ಏಪ್ರಿಲ್ 2024ರ ವರೆಗೆ ಈ ನಿಯಮ ಪ್ರಾಯೋಗಿಕವಾಗಿ ಜಾರಿಯಲ್ಲಿ ಇರಲಿದೆ. ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಈ ನಿಮಯವನ್ನು ಅಳವಡಿಸಲಾಗುತ್ತಿದೆ.

ಇದನ್ನೂ ಓದಿ : IPL 2024 Auction : ಐಪಿಎಲ್‌ 2024 ಯಾವ ತಂಡಕ್ಕೆ ಯಾರು ನಾಯಕರು ? ತಂಡಗಳ ಬಳಿ ಬಾಕಿ ಇರುವ ಮೊತ್ತವೆಷ್ಟು ?

ಪ್ರಾಯೋಗಿಕ ಅವಧಿಯಲ್ಲಿ ಒಟ್ಟು 59 ಪಂದ್ಯಗಳಿಗೆ ಈ ನಿಯಮವನ್ನು ಅಳವಡಿಸಲಾಗುತ್ತಿದೆ. ಒಂದೊಮ್ಮೆ ಈ ನಿಯಮ ಯಶಸ್ವಿ ಆದ್ರೆ, ಮುಂದಿನ ಎಲ್ಲಾ ಪಂದ್ಯಗಳಿಗೂ ಐಸಿಸಿ ಈ ರೂಲ್ಸ್‌ ಜಾರಿಗೆ ತರುವ ಉದ್ದೇಶವನ್ನು ಹೊಂದಿದೆ. ಇನ್ಮುಂದೆ ಐಸಿಸಿ ಆಯೋಜಿಸುವ ಪಂದ್ಯಗಳಿಗೆ ಎಲೆಕ್ಟ್ರಾನಿಕ್ ವಾಚ್ ಕಣ್ಣಿಡಲಿದೆ.

ICC implements stop-clock rules 60 seconds for the start of each over What is the stop-clock rule
Image Credit to Original Source

ಇದೇ ಡಿಸೆಂಬರ್ 13 ರಂದು ನಡೆಯಲಿರುವ ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಮೊದಲ T20 ಪಂದ್ಯದಲ್ಲಿ ಮೊದಲ ಬಾರಿಗೆ ಈ ರೂಲ್ಸ್‌ ಜಾರಿಗೆ ಬರಲಿದೆ. ಸ್ಟಾಪ್-ವಾಚ್ ಅನ್ನು ಪರಿಚಯಿಸಲು ನಿರ್ಧರಿಸಲಾಗಿದೆ. ಪ್ರತೀ ಓವರ್‌ ಮುಗಿದ ನಂತರ ಹೊಸ ಓವರ್‌ ಆರಂಭಿಸಲು ಫೀಲ್ಡಿಂಗ್‌ ತಂಡಕ್ಕೆ ಇನ್ಮುಂದೆ 60 ಸೆಕೆಂಡು ಕಾಲಾವಕಾಶವನ್ನು ನೀಡಲಾಗುತ್ತದೆ.

ನಿಗದಿತ ಅವಧಿಯಲ್ಲಿ ಪಂದ್ಯಾವಳಿ ಆರಂಭವಾಗದೇ ಇದ್ರೆ ಎರಡು ಬಾರಿ ಎಚ್ಚರಿಕೆಯನ್ನು ನೀಡಲಾಗುತ್ತದೆ. ಎರಡೂ ಬಾರಿ ಎಚ್ಚರಿಕೆ ನೀಡಿದ್ರೂ ಕೂಡ ಬೌಲಿಂಗ್‌ ಆರಂಭವಾಗದೇ ಇದ್ರೆ ಅಂತಹ ತಂಡಗಳಿಗೆ ಐದು ರನ್‌ ಗಳ ಪೆನಾಲ್ಟಿಯನ್ನು ನೀಡಲಾಗುತ್ತದೆ. ಒಂದೊಮ್ಮೆ ಈ ರೂಲ್ಸ್‌ ಜಾರಿಯಾದ್ರೆ ಬೌಲರ್‌ಗಳ ಮೇಲೆ ಐಸಿಸಿ ಹಿಡಿತ ಸಾಧಿಸಲಿದೆ.

ಇದನ್ನೂ ಓದಿ : IPL 2024 Auction : ಐಪಿಎಲ್‌ 2024 ಯಾವ ತಂಡಕ್ಕೆ ಯಾರು ನಾಯಕರು ? ತಂಡಗಳ ಬಳಿ ಬಾಕಿ ಇರುವ ಮೊತ್ತವೆಷ್ಟು ?

ಇನ್ನು ಪ್ರತೀ ಪಂದ್ಯದ ಪ್ರತೀ ಓವರ್‌ ವೇಳೆಯಲ್ಲಿಯೂ ಸ್ಟಾಪ್-ಕ್ಲಾಕ್ ನಿಯಮ ಜಾರಿಯಲ್ಲಿ ಇರಲಿದೆ. ಆದರೆ ಪಂದ್ಯದ ಪಾನೀಯ ವಿರಾಮದ ವೇಳೆಯಲ್ಲಿ ಈ ನಿಯಮಕ್ಕೆ ವಿನಾಯಿತಿ ಇರಲಿದೆ. ಫೀಲ್ಡಿರ್‌ ಅಥವಾ ಆಟಗಾರರು ಗಾಯಗೊಂಡ್ರೆ ಚಿಕಿತ್ಸೆ ನೀಡಲು ಸೂಚಿಸಿದ್ರೆ ವಿನಾಯಿತಿ ದೊರೆಯಲಿದೆ.

2022ರಲ್ಲಿಯೇ ಮೊದಲ ಬಾರಿಗೆ ವೈಟ್‌ಬಾಲ್‌ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಟಾಪ್‌ ಕ್ಲಾಕ್‌ ನಿಯಮ ಜಾರಿಗೆ ಬಂದಿತ್ತು. ಈ ನಿಯಮ ಅಳವಡಿಸಿದ ವೇಳೆಯಲ್ಲಿ ಫೀಲ್ಡಿಂಗ್‌ ತಂಡಕ್ಕೆ ದಂಡವಾಗಿ ಒಳಗಿನ ವೃತ್ತದ ಹೊರಗೆ ನಾಲ್ಕು ಫೀಲ್ಡರ್‌ಗೆ ಫೀಲ್ಡಿಂಗ್‌ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಐಸಿಸಿ ಜನರಲ್ ಮ್ಯಾನೇಜರ್ ವಾಸಿಂ ಖಾನ್ ತಿಳಿಸಿದ್ದಾರೆ ಎಂದು ಇನ್‌ಸೈಡ್‌ ಸ್ಪೋರ್ಟ್‌ ವರದಿ ಮಾಡಿದೆ.

ICC implements stop-clock rules, 60 seconds for the start of each over: What is the stop-clock rule?

Comments are closed.