ದಿನಭವಿಷ್ಯ 12 ಅಕ್ಟೋಬರ್‌ 2023 : ಶುಕ್ಲ ಯೋಗ, ಬ್ರಹ್ಮ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ

Horoscope Today : : ದ್ವಾದಶರಾಶಿಗಳ ಮೇಲೆ ಪೂರ್ವ ಫಲ್ಗುಣಿ ಮತ್ತು ಉತ್ತರ ಫಲ್ಗುಣಿ ನಕ್ಷತ್ರಗಳು ಪ್ರಭಾವ ಬೀರುತ್ತದೆ. ಶುಕ್ಲ ಯೋಗ, ಬ್ರಹ್ಮ ಯೋಗದ ಕಾರಣದಿಂದ ಕೆಲವು ರಾಶಿಗಳು ಆರ್ಥಿಕ ಲಾಭವನ್ನು ಪಡೆಯುತ್ತವೆ

Horoscope Today : ಇಂದು ಅಕ್ಟೋಬರ್‌ 12 2023 ಗುರುವಾರ. ದ್ವಾದಶರಾಶಿಗಳ ಮೇಲೆ ಪೂರ್ವ ಫಲ್ಗುಣಿ ಮತ್ತು ಉತ್ತರ ಫಲ್ಗುಣಿ ನಕ್ಷತ್ರಗಳು ಪ್ರಭಾವ ಬೀರುತ್ತದೆ. ಶುಕ್ಲ ಯೋಗ, ಬ್ರಹ್ಮ ಯೋಗದ ಕಾರಣದಿಂದ ಕೆಲವು ರಾಶಿಗಳು ಆರ್ಥಿಕ ಲಾಭವನ್ನು ಪಡೆಯುತ್ತವೆ. ಮೇಷರಾಶಿಯಿಂದ ಹಿಡಿದು ಮೀನರಾಶಿಯ ವರೆಗೆ ಇಂದು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಭವಿಷ್ಯದ ಬಗ್ಗೆ ಸ್ವಲ್ಪ ಚಿಂತೆ ನಿಮ್ಮನ್ನು ಕಾಡಲಿದೆ. ಪ್ರೀತಿ ಪಾತ್ರರ ಜೊತೆಗೆ ಕೋಪಗೊಂಡಿದ್ದರೆ ಅವರಿಗೆ ಉಡುಗೊರೆಯನ್ನು ನೀಡಬಹುದು. ಕುಟುಂಬ ಸದಸ್ಯರಿಗೆ ನೀವು ಸಂಪೂರ್ಣ ಬೆಂಬಲವನ್ನು ನೀಡಲಿದ್ದೀರಿ. ಕೆಲಸ ಕಾರ್ಯಗಳಿಗೆ ಸಹೋದ್ಯೋಗಿಗಳು ಸಹಕಾರ ನೀಡುವರು.

ವೃಷಭರಾಶಿ ದಿನಭವಿಷ್ಯ
ಮೇಲಾಧಿಕಾರಿಗಳು ಹಾಗೂ ಕುಟುಂಬದ ಹಿರಿಯ ಮಾರ್ಗದರ್ಶನ ಪಡೆಯಲಿದ್ದೀರಿ. ಆಸ್ತಿ ಖರೀದಿಗೆ ಮನಸ್ಸು ಮಾಡಿದ್ದರೆ ಅಗತ್ಯವಾಗಿ ದಾಖಲೆಗಳನ್ನು ಪರಿಶೀಲಿಸಿಕೊಳ್ಳುವುದು ಉತ್ತಮ. ಕುಟುಂಬದ ಸದಸ್ಯರಿಂದ ದೂರವಾಣಿ ಮೂಲಕ ಶುಭ ಸುದ್ದಿಯೊಂದನ್ನು ಕೇಳುವಿರಿ. ಸಾಮಾಜಿಕವಾಗಿ ಗೌರವ ವೃದ್ದಿಸುತ್ತದೆ.

ಮಿಥುನರಾಶಿ ದಿನಭವಿಷ್ಯ
ಕುಟುಂಬ ಸದಸ್ಯರಿಗೆ ನೀಡಿದ್ದ ಭರವಸೆಯನ್ನು ಈಡೇರಿಸುತ್ತೀರಿ. ಪೋಷಕರೊಂದಿಗೆ ದೂರ ಪ್ರಯಾಣಕ್ಕೆ ಯೋಚಿಸಿದ್ದರೆ ಅನುಕೂಲಕರ. ಕಳೆದುಕೊಂಡ ಅಮೂಲ್ಯ ವಸ್ತುವೊಂದು ನಿಮ್ಮ ಕೈ ಸೇರಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಿದೆ. ಧಾರ್ಮಿಕ ಕ್ಷೇತ್ರಗಳ ದರ್ಶನ.

ಕರ್ಕಾಟಕರಾಶಿ ದಿನಭವಿಷ್ಯ
ವ್ಯವಹಾರದಲ್ಲಿನ ಸಮಸ್ಯೆ ಪರಿಹಾರಕ್ಕೆ ತಜ್ಞರು ಅಥವಾ ಹಿರಿಯರ ಸಲಹೆಯನ್ನು ಪಾಲಿಸಿ. ಮಕ್ಕಳ ಭವಿಷ್ಯದ ಬಗ್ಗೆ ನಿಮಗೆ ಚಿಂತೆ ಕಾಡಲಿದೆ. ಪ್ರೀತಿ ಪಾತ್ರರ ಭೇಟಿಯಿಂದ ಮನಸ್ಸಿಗೆ ಸಂತಸ ಮೂಡಲಿದೆ. ಪ್ರಮುಖ ಕಾರ್ಯಕ್ಕಾಗಿ ಇಂದು ದೂರ ಪ್ರಯಾಣ ಕೈಗೊಳ್ಳುವಿರಿ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಇದೇ ಕಾರಣಕ್ಕೆ 9 ಲಕ್ಷ ಜನರಿಗೆ ಸಿಗಲ್ಲ ಗೃಹಲಕ್ಷ್ಮೀ ಮೊದಲ ಕಂತಿನ ಹಣ

ಸಿಂಹರಾಶಿ ದಿನಭವಿಷ್ಯ
ಕುಟುಂಬದ ಆಸ್ತಿಗೆ ಸಂಬಂಧಿಸಿದ ವಿವಾದಗಳಲ್ಲಿ ಇಂದು ನಿಮ್ಮ ಪರವಾಗಿ ತೀರ್ಪು ಬರಲಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯಲಿದ್ದಾರೆ. ಬಾಕಿ ಉಳಿದಿರುವ ಎಲ್ಲಾ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಹೊಸ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

Horoscope Today 12 October 2023 Zordic Sign
Image Credit to Original Source

ಕನ್ಯಾರಾಶಿ ದಿನಭವಿಷ್ಯ
ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದ್ರೂ ಕೂಡ ಯಶಸ್ಸು ದೊರೆಯುತ್ತದೆ. ಆದರೆ ಕೆಲವು ಕಾರ್ಯಗಳಲ್ಲಿ ನಿಮಗೆ ಸಮಸ್ಯೆ ಉಂಟಾಗುತ್ತದೆ. ಇದರಿಂದಾಗಿ ನೀವು ಚಿಂತೆಗೆ ಒಳಗಾಗುವ ಸಾಧ್ಯತೆಯಿದೆ. ವ್ಯವಹಾರದಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ.

ತುಲಾರಾಶಿ ದಿನಭವಿಷ್ಯ
ಕೆಲವೊಂದು ವಿಚಾರಗಳಲ್ಲಿ ರಾಜಿ ಮಾಡುವುದು ಅತೀ ಅಗತ್ಯ. ಪ್ರೀತಿಯ ಜೀವನದಲ್ಲಿ ಹೊಸ ತಿರುವುಗಳನ್ನು ಪಡೆದುಕೊಳ್ಳುವಿರಿ. ಸಂಗಾತಿಯೊಂದಿಗೆ ಸುತ್ತಾಟದಿಂದ ನೆಮ್ಮದಿ ದೊರೆಯಲಿದೆ. ವ್ಯವಹಾರದಲ್ಲಿ ಜಗಳವಾಗುವ ಸಾಧ್ಯತೆಯಿದೆ. ಇಲ್ಲದಿದ್ದರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ : ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಅಡ್ವೆಂಚರ್ ಹೊಸ ಬೈಕ್: ಮೊದಲ ಲುಕ್‌ಗೆ ಗ್ರಾಹಕರು ಫೀದಾ

ವೃಶ್ಚಿಕರಾಶಿ ದಿನಭವಿಷ್ಯ
ತಂದೆಯ ಆರೋಗ್ಯದ ಬಗ್ಗೆ ಚಿಂತೆ ನಿಮ್ಮನ್ನು ಕಾಡಲಿದೆ. ಆರೋಗ್ಗಕ್ಕೆ ಸಂಬಂಧಿಸಿದಂತೆ ಸಂಕಷ್ಟಗಳು ನಿಮಗೆ ಎದುರಾಗಲಿದೆ. ಪಾಲುದಾರಿಕೆ ವ್ಯವಹಾರಕ್ಕೆ ಸಂಗಾತಿಯು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ಸಹಕಾರ ದೊರೆಯಲಿದೆ. ದೂರ ಪ್ರಯಾಣ ಲಾಭದಾಯಕವಾಗಲಿದೆ.

ಧನಸ್ಸುರಾಶಿ ದಿನಭವಿಷ್ಯ
ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ಶುಭ ಸುದ್ದಿಯೊಂದನ್ನು ಕೇಳುವಿರಿ. ಸ್ನೇಹಿತರಿಗೆ ಇಂದು ನೀವು ಸಹಕಾರ ಮಾಡುವಿರಿ. ಸರಕಾರಿ ಕೆಲಸದ ವಿಚಾರದಲ್ಲಿ ಶುಭ ಸುದ್ದಿಯೊಂದನ್ನು ಕೇಳುವಿರಿ. ಉದ್ಯೋಗಿಗಳಿಗೆ ಇಂದು ಭಡ್ತಿ ದೊರೆಯುವ ಸಾಧ್ಯತೆಯಿದೆ. ಆರ್ಥಿಕ ಸಮಸ್ಯೆ ಇಂದು ನಿಮ್ಮನ್ನು ಕಾಡಲಿದೆ.

ಮಕರರಾಶಿ ದಿನಭವಿಷ್ಯ
ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರೂ ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ. ಶತ್ರುಗಳ ಬಗ್ಗೆ ಜಾಗರೂಕರಾಗಿ ಇರಬೇಕು. ಇಲ್ಲವಾದ್ರೆ ತೊಂದರೆಯನ್ನು ಎದುರಿಸುವ ಸಾಧ್ಯತೆಯಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಉದ್ಯೋಗಿಗಳು ಕಚೇರಿಯಲ್ಲಿ ಇಂದು ಖುಷಿಯಾಗಿ ಇರುತ್ತಾರೆ.

ಇದನ್ನೂ ಓದಿ : ರೋಹಿತ್‌ ಶರ್ಮಾ ಭರ್ಜರಿ ಶತಕ : ಒಂದೇ ಪಂದ್ಯದಲ್ಲಿ 2 ವಿಶ್ವದಾಖಲೆ ಬರೆದ ಟೀಂ ಇಂಡಿಯಾ ನಾಯಕ

ಕುಂಭರಾಶಿ ದಿನಭವಿಷ್ಯ
ಧಾರ್ಮಿಕ ಕ್ಷೇತ್ರಗಳ ದರ್ಶನದಿಂದ ಮನಸ್ಸಿಗೆ ನೆಮ್ಮದಿ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ. ವ್ಯವಹಾರ ಕ್ಷೇತ್ರದಲ್ಲಿ ನಿಮಗೆ ಹೊಸ ಅವಕಾಶಗಳು ಎದುರಾಗಲಿದೆ. ಸಂಗಾತಿಯ ಸಹಕಾರದಿಂದ ನೆಮ್ಮದಿ ದೊರೆಯಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಲಿದೆ.

ಮೀನರಾಶಿ ದಿನಭವಿಷ್ಯ
ಮೇಲಾಧಿಕಾರಿಗಳಿಂದ ಕೆಲಸ ಕಾರ್ಯಗಳಲ್ಲಿ ಪ್ರಶಂಸೆ ಕೇಳಿಬರಲಿದೆ. ಸಾಮಾಜಿಕವಾಗಿ ಗೌರವ ವೃದ್ದಿಯಾಗಲಿದೆ. ಕುಟುಂಬಸ್ಥರ ಜೊತೆಗೆ ಇಂದು ದೂರ ಪ್ರಯಾಣಕ್ಕೆ ತೆರಳುವ ಸಾಧ್ಯತೆಯಿದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಧಾರ್ಮಿಕ ಕಾರ್ಯದ ಬಗ್ಗೆ ಚರ್ಚೆ ನಡೆಸುವಿರಿ. ದೂರದ ಬಂಧುಗಳ ಆಗಮನದಿಂದ ಮನಸಿಗೆ ನೆಮ್ಮದಿ.

Horoscope Today 12 October 2023 Zordic Sign

Comments are closed.