ದಿನಭವಿಷ್ಯ 16 ಅಕ್ಟೋಬರ್‌ 2023 : ನವರಾತ್ರಿಯ 2ನೇ ದಿನ ಈ ರಾಶಿಯವರಿಗೆ ಬಾರೀ ಅದೃಷ್ಟ 

Horoscope Today 16 October 2023 : ಇಂದು ದ್ವಾದಶ ರಾಶಿಗಳ ಮೇಲೆ ಸ್ವಾತಿ ನಕ್ಷತ್ರದ ಪ್ರಭಾವ ಇರುತ್ತದೆ. ವಿಷ್ಕಂಭ ಯೋಗದ ಜೊತೆಗೆ ಮಂಗಳಕರ ಯೋಗವು ಸಂಭವಿಸುತ್ತದೆ. ನವರಾತ್ರಿಯ ಎರಡನೇ ದಿನ ಹಲವು ರಾಶಿಯವರಿಗೆ ಶುಭಕರ. ಮೇಷರಾಶಿಯಿಂದ ಮೀನರಾಶಿಯ ವರೆಗೆ 12  ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

Horoscope Today : ಇಂದು ಅಕ್ಟೋಬರ್‌ 16 2023 ಸೋಮವಾರ. ಇಂದು ದ್ವಾದಶ ರಾಶಿಗಳ ಮೇಲೆ ಸ್ವಾತಿ ನಕ್ಷತ್ರದ ಪ್ರಭಾವ ಇರುತ್ತದೆ. ವಿಷ್ಕಂಭ ಯೋಗದ ಜೊತೆಗೆ ಮಂಗಳಕರ ಯೋಗವು ಸಂಭವಿಸುತ್ತದೆ. ನವರಾತ್ರಿಯ ಎರಡನೇ ದಿನ ಹಲವು ರಾಶಿಯವರಿಗೆ ಶುಭಕರ. ಮೇಷರಾಶಿಯಿಂದ ಮೀನರಾಶಿಯ ವರೆಗೆ 12  ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಸಮಯವನ್ನು ವಿನಿಯೋಗಿಸುತ್ತೀರಿ. ಈ ರಾಶಿಯ ಜನರು ಇಂದು ತುಂಬಾ ಸಂತೋಷವಾಗಿ ಇರುತ್ತೀರಿ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಅನಿರೀಕ್ಷಿತವಾದ ಆರ್ಥಿಕ ಲಾಭವನ್ನು ಪಡೆಯುವಿರಿ. ಸರಕಾರಿ ಕೆಲಸಗಳಲ್ಲಿ ಸೋಮಾರಿತನ ಬೇಡ.

ವೃಷಭರಾಶಿ ದಿನಭವಿಷ್ಯ
ಆಕಸ್ಮಿಕ ಅಪಘಾತ, ದೈಹಿಕ ನೋವು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆರೋಗ್ಯ ಸಮಸ್ಯೆ ಇಂದು ನಿಮ್ಮ ಕೆಲಸದ ಮೇಲೆ ಪರಿಣಾಮವನ್ನು ಬೀರುತ್ತದೆ. ಕುಟುಂಬದ ವಾತಾವರಣವು ಹೆಚ್ಚು ಭಾವನಾತ್ಮಕವಾಗಿ ಇರುತ್ತದೆ. ಹಣಕಾಸು ವ್ಯವಹಾರವು ಇಂದು ಉತ್ತಮವಾಗಿ ಇರುತ್ತದೆ. ಅನಿರೀಕ್ಷಿತ ಖರ್ಚುಗಳು ನಿಮ್ಮನ್ನು ಕಂಗೆಡಿಸಲಿದೆ.

ಮಿಥುನರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳಲ್ಲಿ ತೊಂದರೆ ಎದುರಿಸುವಿರಿ. ವ್ಯಾಪಾರಕ್ಕೆ ಸಂಬಂಧಿಸಿದ ಪ್ರಯಾಣವು ಲಾಭದಾಯಕವಾಗಿ ಇರುತ್ತದೆ. ಸಾಲ ತೀರಿಸುವಲ್ಲಿ ನೀವು ಸಂಪೂರ್ಣವಾಗಿ ಯಶಸ್ವಿ ಆಗುತ್ತೀರಿ. ಹಿರಿಯರ ಜೊತೆಗೆ ಭಿನ್ನಾಭಿಪ್ರಾಯ ಕಂಡು ಬರುತ್ತದೆ. ಮಹಿಳೆಯರಿಂದ ಸಹಾಯ ದೊರೆಯಲಿದೆ.

ಇದನ್ನೂ ಓದಿ : ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಬಂದಿಲ್ವಾ ? ಈ ಕೆಲಸ ಮಾಡಿದ್ರೆ ಇಂದೇ ಜಮೆ ಆಗುತ್ತೆ

ಕರ್ಕಾಟಕರಾಶಿ ದಿನಭವಿಷ್ಯ
ಹಿರಿಯರು ನಿಮ್ಮ ಮೇಲೆ ಕೋಪಗೊಳ್ಳುವ ಸಾಧ್ಯತೆಯಿದೆ. ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಗೊಂದಲದ ವಾತಾವರಣ ಕಂಡು ಬರುತ್ತದೆ. ಹಣಕಾಸಿನ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದಿದ್ದರೂ ಕೂಡ ಅದರ ಪರಿಣಾಮ ನಿಮಗೆ ಅರ್ಥವಾಗಲಿದೆ.

ಸಿಂಹರಾಶಿ ದಿನಭವಿಷ್ಯ
ಆದಾಯಕ್ಕಿಂತ ಇಂದು ಖರ್ಚು ಅಧಿಕವಾಗಿ ಇರಲಿದೆ. ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ಮಾಡಿ ನಿರೀಕ್ಷೆಗಿಂತ ಅಧಿಕ ಲಾಭವನ್ನು ಪಡೆಯುವಿರಿ. ಹವ್ಯಾಸಗಳಿಗೆ ನೀವು ಖರ್ಚು ಮಾಡುವುದು ನಿಮ್ಮ ಹಣಕಾಸಿನ ವ್ಯವಹಾರಗಳ ಮೇಲೆ ಪರಿಣಾಮವನ್ನು ಬೀರುತ್ತದೆ.

Horoscope Today 16 October 2023 Zodiac Sign
Image credit to Original Source

ಕನ್ಯಾರಾಶಿ ದಿನಭವಿಷ್ಯ
ಅಹಿತಕರ ಘನಟೆಗಳು ನಿಮ್ಮನ್ನು ಕಂಗೆಡಿಸಲಿದೆ. ಆರೋಗ್ಯದ ವಿಚಾರದಲ್ಲಿ ನಿಮಗೆ ನೆಮ್ಮದಿ ದೊರೆಯಲಿದೆ. ಅನಿರೀಕ್ಷಿತ ಪ್ರಯಾಣವನ್ನು ನೀವು ಮಾಡುವ ಸಾಧ್ಯತೆಯಿದೆ. ಕೆಲವು ಅಡಚಣೆಗಳು ನಿಮಗೆ ಇಂದು ಎದುರಾಗಲಿದೆ. ಮನೆಯಲ್ಲಿ ವಾದ ವಿವಾದಗಳು ಸಂಭವಿಸುವ ಸಾಧ್ಯತೆಯಿದೆ.

ತುಲಾರಾಶಿ ದಿನಭವಿಷ್ಯ
ಹೊಸ ಕೆಲಸ ಆರಂಭಿಸಲು ಇಂದು ಸಕಾಲ. ಆದಾಯದ ವಿಚಾರದಲ್ಲಿ ನೀವು ಇಂದು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ಭವಿಷ್ಯಕ್ಕಾಗಿ ನೀವು ಇಂದು ಹೂಡಿಕೆ ಮಾಡುವ ಸಾಧ್ಯತೆಯಿದೆ. ಸರಕಾರಿ ವ್ಯವಹಾರಗಳಲ್ಲಿ ಗೊಂದಲ ಇರುತ್ತದೆ. ಕೆಲಸದ ಒತ್ತಡದ ಮಹಿಳೆಯರನ್ನು ಕಂಗೆಡಿಸಲಿದೆ.

ಇದನ್ನೂ ಓದಿ : ಪತಿ ತನ್ನ ಪತ್ನಿಯ ಪೋನ್‌ ಸಂಭಾಷಣೆ ರೆಕಾರ್ಡ್‌ ಮಾಡುವುದು ಅಪರಾಧ : ಹೈಕೋರ್ಟ್‌ ಮಹತ್ವದ ತೀರ್ಪು

ವೃಶ್ಚಿಕರಾಶಿ ದಿನಭವಿಷ್ಯ
ಕೆಲಸದಲ್ಲಿ ವಿಳಂಭವಾಗಲಿದೆ. ಈ ರಾಶಿಯವರು ಇಂದು ಮಿಶ್ರಫಲಿತಾಂಶವನ್ನು ಪಡೆಯಲಿದ್ದಾರೆ. ಕಠಿಣ ಪರಿಶ್ರಮದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ವಿ ಆಗುತ್ತೀರಿ. ಹಣಕಾಸಿನ ವಿಚಾರದಲ್ಲಿ ಇಂದು ಪ್ರಯೋಜನವನ್ನು ಪಡೆಯುತ್ತೀರಿ. ಆದರೂ ಹಣಕಾಸಿನ ಪರಿಸ್ಥಿತಿ ಅನುಕೂಲಕರವಾಗಿ ಇಲ್ಲ.

ಧನಸ್ಸುರಾಶಿ ದಿನಭವಿಷ್ಯ
ನಿಮ್ಮ ಮಾತು ವ್ಯವಹಾರ ಹಾಗೂ ಕುಟುಂಬದಲ್ಲಿ ವಾದ ವಿವಾದಕ್ಕೆ ಕಾರಣವಾಗಲಿದೆ. ಹಣಕಾಸಿಗೆ ಸಂಬಂಧಿಸಿದ ಯೋಜನೆಗಳು ಮುಂದುವರಿಯಲಿದೆ. ಆರ್ಥಿಕವಾಗಿ ನಿಮಗೆ ಲಾಭವನ್ನು ತಂದುಕೊಡಲಿದೆ. ಹೊಂದಾಣಿಕೆಯಿಂದ ಇಂದು ಕಾರ್ಯಾನುಕೂಲವಾಗಲಿದೆ.

ಮಕರರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳಲ್ಲಿ ವಿಳಂಭವಾಗಲಿದೆ. ನಕಾರಾತ್ಮಕ ಭಾವನೆ ನಿಮ್ಮನ್ನು ಕಾಡಲಿದೆ. ದೈಹಿಕ ಹಾಗೂ ಮಾನಸಿಕವಾಗಿ ನಿಮ್ಮನ್ನು ಹಾನಿಗೊಳಿಸಬಹುದು. ಮನಸ್ಸಿನಲ್ಲಿ ನಾನಾ ವಿಚಾರಗಳು ಹರಿದಾಡಲಿದೆ. ತಾಳ್ಮೆಯಿಂದ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಮಹಿಳೆಯರಿಂದ ಅವಮಾನ ಎದುರಿಸುವಿರಿ.

ಇದನ್ನೂ ಓದಿ : ಪಾಕಿಸ್ತಾನದ ವಿರುದ್ದ ಕೊನೆಗೂ ಕಣಕ್ಕಿಳಿದ ಶುಭಮನ್‌ ಗಿಲ್‌ : ಡೆಂಗ್ಯೂ ಗೆಲುವಿನ ಹಿಂದಿದೆ ಗಿಲ್‌ ರೋಚಕ ಸ್ಟೋರಿ

ಕುಂಭರಾಶಿ ದಿನಭವಿಷ್ಯ
ದೈಹಿಕ ಆರೋಗ್ಯವು ಉತ್ತಮವಾಗಿ ಇರುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಗೌರವ ಹೆಚ್ಚಲಿದೆ. ದೈಹಿಕ ಆರೋಗ್ಯವು ಉತ್ತಮವಾಗಿ ಇರುತ್ತದೆ. ಉದ್ಯಮಿ ಹಾಗೂ ಪಾಲುದಾರರ ಜೊತೆಗೆ ಹಳೆಯ ವಿವಾದಗಳನ್ನು ಮರೆತು ಹೊಸ ವ್ಯವಹಾರವನ್ನು ಆರಂಭಿಸಿ. ಸಹೋದ್ಯೋಗಿಗಳು ನಿಮ್ಮ ನಡವಳಿಕೆಯಿಂದ ಸಂತಸ ಪಡುತ್ತಾರೆ.

ಮೀನರಾಶಿ ದಿನಭವಿಷ್ಯ
ಹೊಸ ಹೂಡಿಕೆಯ ಯೋಚನೆಯಲ್ಲಿದ್ದರೆ ಇಂದೇ ಕಾರ್ಯರೂಪಕ್ಕೆ ತರುವುದು ಸೂಕ್ತ. ನಿಮ್ಮ ಹಣಕಾಸಿನ ಸಮಸ್ಯೆಗಳಿಗೆ ಇಂದು ಪರಿಹಾರ ದೊರೆಯಲಿದೆ. ಸಹೋದ್ಯೋಗಳು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಹೊಂದಾಣಿಕೆಯಿಂದ ನಿಮಗೆ ಕಾರ್ಯಾನುಕೂಲವಿದೆ. ದೂರ ಪ್ರಯಾಣ, ಧಾರ್ಮಿಕ ಕ್ಷೇತ್ರಗಳ ದರ್ಶನದಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.

Horoscope Today 16 October 2023 Zodiac Sign

Comments are closed.