ಮಾಜಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ದ ಐತಿಹಾಸಿಕ ಗೆಲುವು ದಾಖಲಿಸಿದ ಅಫ್ಘಾನಿಸ್ತಾನ

England vs Afghanistan :ಅಫ್ಘಾನಿಸ್ತಾನ ತಂಡದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಆರ್ಭಟಕ್ಕೆ ಇಂಗ್ಲೆಂಡ್‌ ನೆಲಕಚ್ಚಿದ್ದು, ವಿಶ್ವಕಪ್‌ನಲ್ಲಿ ಇದುವರೆಗೆ ಆಡಿರುವ 3 ಪಂದ್ಯಗಳ ಪೈಕಿ 2 ರಲ್ಲಿ ಸೋಲು ಕಂಡಿದ್ದು, ಸದ್ಯ ಅಂಕಪಟ್ಟಿ ಯಲ್ಲಿ 5ನೇ ಸ್ಥಾನದಲ್ಲಿದೆ.

ದೆಹಲಿ : ವಿಶ್ವಕಪ್‌ನಲ್ಲಿ(World Cup 2023) ಮಾಜಿ ಚಾಂಪಿಯನ್‌ ಇಂಗ್ಲೆಂಡ್‌ ತಂಡಕ್ಕೆ ಅಫ್ಘಾನಿಸ್ತಾನ (England vs Afghanistan)  ಸೋಲಿನ ರುಚಿ ತೋರಿಸಿದೆ. ಅಫ್ಘಾನಿಸ್ತಾನ ತಂಡದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಆರ್ಭಟಕ್ಕೆ ಇಂಗ್ಲೆಂಡ್‌ ನೆಲಕಚ್ಚಿದ್ದು, ವಿಶ್ವಕಪ್‌ನಲ್ಲಿ ಇದುವರೆಗೆ ಆಡಿರುವ 3 ಪಂದ್ಯಗಳ ಪೈಕಿ 2 ರಲ್ಲಿ ಸೋಲು ಕಂಡಿದ್ದು, ಸದ್ಯ ಅಂಕಪಟ್ಟಿ ಯಲ್ಲಿ 5ನೇ ಸ್ಥಾನದಲ್ಲಿದೆ.

ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ತಾನ ತಂಡಕ್ಕೆ ಗುರ್ಬಾಜ್‌ ಹಾಗೂ ಇಬ್ರಾಹಿಂ ಜರ್ದಾನ್‌ ಉತ್ತಮ ಆರಂಭವೊದಗಿಸಿದ್ರೆ. ಶತಕದ ಜೊತೆಯಾಟ ನೀಡಿದ್ದ ಈ ಜೋಡಿ ಉತ್ತಮ ಮೊತ್ತ ಪೇರಿಸುವ ಗುರಿಯನ್ನು ಹೊಂದಿತ್ತು.

Afghanistan recorded a historic win against former champions England world cup 2023 afg vs England
Image credit : ICC

ಆದರೆ 28 ರನ್ ಗಳಿಸಿ ಆಡುತ್ತಿದ್ದ ಜರ್ದಾನ್‌ನನ್ನು ಆದಿಲ್‌ ರಶೀದ್‌ ಬಲಿ ಪಡೆಯುವ ಮೂಲಕ ಅಪ್ಘಾನಿಸ್ತಾನ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದಾರೆ. ನಂತರ ರೆಹಮತ್‌ ಕೇವಲ 3 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದಾರೆ. ನಂತರ ಬಂದ ಶಹದಿ ಹಾಗೂ ಅಜಾಮುಲ್ಲಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆದರೆ ಒಂದೆಡೆಯಲ್ಲಿ ಗುರ್ಬಾಜ್‌ ಇಂಗ್ಲೆಂಡ್‌ ಬೌಲರ್‌ಗಳನ್ನು ಚೆಂಡಾಡಿದ್ದರು.

ಇದನ್ನೂ ಓದಿ : ಪಾಕಿಸ್ತಾನದ ವಿರುದ್ದ ಕೊನೆಗೂ ಕಣಕ್ಕಿಳಿದ ಶುಭಮನ್‌ ಗಿಲ್‌ : ಡೆಂಗ್ಯೂ ಗೆಲುವಿನ ಹಿಂದಿದೆ ಗಿಲ್‌ ರೋಚಕ ಸ್ಟೋರಿ

57 ಎಸೆತಗಳನ್ನು ಎದುರಿಸಿದ ಗುರ್ಬಾಜ್‌ ೮೦ರನ್‌ ಬಾರಿಸುವ ಮೂಲಕ ತಂಡಕ್ಕೆ ಉತ್ತಮ ಮೊತ್ತ ಪೇರಿಸುವಲ್ಲಿ ನೆರವಾಗಿದ್ದಾರೆ. ನಂತರ ಕ್ರೀಸ್‌ಗೆ ಬಂದ ಇಕ್ರಮ್‌ ಅತಿಕಿಲ್‌ 66 ಎಸೆತಗಳಲ್ಲಿ 58 ರನ್‌ ಬಾರಿಸಿದ್ದಾರೆ. ಅಂತಿಮ ಹಂತದಲ್ಲಿ ರಶೀದ್‌ ಖಾನ್‌ 23 ಹಾಗೂ ಮುಜೀಬ್‌ 28 ರನ್‌ ನೆರವಿನಿಂದ ಅಪ್ಘಾನಿಸ್ತಾನ ತಂಡ 49.5 ಓವರ್‌ಗಳಲ್ಲಿ 284 ರನ್‌ಗಳಿಗೆ ಆಲೌಟ್‌ ಆಗಿತ್ತು.

Afghanistan recorded a historic win against former champions England world cup 2023 afg vs England
Image credit : ICC

ಇಂಗ್ಲೆಂಡ್‌ ತಂಡದ ಪರ ಆದೀಲ್‌ ರಶೀದ್‌ 3, ಮಾರ್ಕ್‌ವುಡ್‌ 2, ಲಿವಿಂಗ್‌ ಸ್ಟೋನ್‌, ರೂಟ್‌ ಹಾಗೂ ಆರ್‌ ಟೂರ್ಪ್ಲೆ ತಲಾ ಒಂದೊಂದು ವಿಕೆಟ್‌ ಪಡೆದಿದ್ದಾರೆ. ಅಪ್ಘಾನಿಸ್ತಾನ ನೀಡಿದ ಸವಾಲಿನ ಮೊತ್ತವನ್ನು ಬೆನ್ನತ್ತಲು ಹೊರಟ ಇಂಗ್ಲೆಂಡ್‌ ತಂಡಕ್ಕೆ ಫಾರೂಕಿ ಆರಂಭಿಕ ಆಘಾತ ನೀಡಿದ್ದಾರೆ. 2 ರನ್‌ ಗಳಿಸಿ ಆಡುತ್ತಿದ್ದ ಜಾನಿಬ್ರೆಸ್ಟೋ ಅವರನ್ನು ಬಲಿ ಪಡೆದಿದ್ದಾರೆ.

ಇದನ್ನೂ ಓದಿ : ಐಪಿಎಲ್‌ 2024 : ಆರ್‌ಸಿಬಿ ತಂಡ ಸೇರ್ತಾರಾ ರಚಿನ್‌ ರವೀಂದ್ರ

ನಂತರ ಡೇವಿಡ್‌ ಮಲನ್‌ ಹಾಗೂ ಜೋ ರೂಟ್‌ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಯತ್ನಿಸಿದ್ದರೂ ಕೂಡ, ಮುಜೀಬ್‌ ಜೋ ರೂಟ್‌ ಅವರನ್ನು ಬೋಲ್ಡ್‌ ಮಾಡಿದ್ದಾರೆ. ಡೇವಿಟ್‌ ಮಲನ್‌ ಜೊತೆಯಾದ ಹೆರ್ರಿ ಬ್ರೂಕ್ಸ್‌ ಉತ್ತಮ ಜೊತೆಯಾಟದ ಭರವಸೆಯನ್ನು ನೀಡಿದ್ದರು. ಆದರೆ ಡೇವಿಡ್‌ ಮಲನ್‌ ಕೆಟ್ಟ ಹೊಡೆತಕ್ಕೆ ಮನ ಮಾಡಿ ಔಟ್‌ ಆದ್ರು.

ಹೆರ್ರಿ ಬ್ರೂಕ್ಸ್‌ ೬೧ ಎಸೆತಗಳಲ್ಲಿ 66 ರನ್‌ ಬಾರಿಸಿದ್ರೆ, ಉಳಿದ ಆಟಗಾರರು ಎರಡಂಕಿ ಮೊತ್ತಕ್ಕೆ ಔಟಾದ್ರು. ನಾಯಕ ಜೋಸ್‌ ಬಟ್ಲರ್‌ ೯ರನ್‌ ಗಳಿಗೆ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಸ್ಯಾಮ್‌ ಕರನ್‌ 10, ಕ್ರಿಸ್‌ ವೊಕ್ಸ್‌ 9. ಆದಿಲ್‌ ರಶೀದ್‌ 20, ಮಾರ್ಕ್‌ವುಡ್‌ 18 ಹಾಗೂ ರೈಸ್‌ ಟೋರ್ಪಿ 15 ರನ್‌ ಬಾರಿಸಿದ್ದರೂ ಕೂಡ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಾಗಿಲ್ಲ.

Afghanistan recorded a historic win against former champions England world cup 2023 afg vs England
Image credit : England Cricket Twitter

ಮುಜೀಬ್‌ ರೆಹಮಾನ್‌, ರಶೀದ್‌ ಖಾನ್‌ ಹಾಗೂ ಮೊಹಮದ್‌ ನಬಿ ಅವರ ಆರ್ಭಟಕ್ಕೆ ಅಪ್ಘಾನಿಸ್ತಾನ ತಂಡ ನೆಲಕಚ್ಚಿದೆ. ಅಂತಿಮವಾಗಿ ಇಂಗ್ಲೆಂಡ್‌ ತಂಡ 40.3ಓವರ್‌ಗಳಲ್ಲಿ 213 ರನ್‌ ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ ಮಾಜಿ ಚಾಂಪಿಯನ್ನರಿಗೆ ಆತಂಕ ಶರುವಾಗಿದೆ.

Afghanistan recorded a historic win against former champions England world cup 2023 afg vs England

Comments are closed.