ದಿನಭವಿಷ್ಯ 20 ನವೆಂಬರ್‌ 2023 : ದ್ವಾದಶ ರಾಶಿಗಳ ಮೇಲೆ ಧನಿಷ್ಠಾ ನಕ್ಷತ್ರದ ಪ್ರಭಾವ, ಯಾವ ರಾಶಿಗೆ ಲಾಭ

Horoscope Today : ದಿನಭವಿಷ್ಯ 20 ನವೆಂಬರ್‌ 2023 ಸೋಮವಾರ. ದ್ವಾದಶ ರಾಶಿಗಳ ಮೇಲೆ ಇಂದು ಧನಿಷ್ಠಾ ನಕ್ಷತ್ರದ ಪ್ರಭಾವ ಇರುತ್ತದೆ. ಮಕರರಾಶಿ, ಧನಸ್ಸು ರಾಶಿಗಳ ಜೊತೆಗೆ ಕೆಲವು ರಾಶಿಗಳಿಗೆ ಆರ್ಥಿಕ ಲಾಭವನ್ನು ತಂದುಕೊಡಲಿದೆ.

Horoscope Today : ದಿನಭವಿಷ್ಯ 20 ನವೆಂಬರ್‌ 2023 ಸೋಮವಾರ. ದ್ವಾದಶ ರಾಶಿಗಳ ಮೇಲೆ ಇಂದು ಧನಿಷ್ಠಾ ನಕ್ಷತ್ರದ ಪ್ರಭಾವ ಇರುತ್ತದೆ. ಮಕರರಾಶಿ, ಧನಸ್ಸು ರಾಶಿಗಳ ಜೊತೆಗೆ ಕೆಲವು ರಾಶಿಗಳಿಗೆ ಆರ್ಥಿಕ ಲಾಭವನ್ನು ತಂದುಕೊಡಲಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12  ದ್ವಾದಶರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಕುಟುಂಬ ಸದಸ್ಯರ ಜೊತೆಗೆ ಆನಂದದ ಕ್ಷಣಗಳನ್ನು ಅನುಭವಿಸುವಿರಿ. ಸರಕಾರಿ ಉದ್ಯೋಗದಲ್ಲಿ ಇರುವವರಿಗೆ ಗೌರವ ಹೆಚ್ಚಲಿದೆ. ಹಳೆಯ ಸ್ನೇಹಿತರ ಭೇಟಿಯಿಂದ ಅನುಕೂಲಕರ. ಈ ಹಿಂದೆ ನೀಡಿರುವ ಸಾಲದ ಮರುಪಾವತಿ ಆಗಲಿದೆ.

ವೃಷಭರಾಶಿ ದಿನಭವಿಷ್ಯ
ಯಾವುದೇ ಕಾರಣಕ್ಕೂ ಯಾರ ಜೊತೆಗೂ ವಿವಾದಕ್ಕೆ ಇಳಿಯಬೇಡಿ. ಹೊಸ ಹೂಡಿಕೆಯ ಬಗ್ಗೆ ಯೋಚಿಸುತ್ತಿದ್ದರೆ ಅದು ಲಾಭದಾಯಕವಾಗಲಿದೆ. ಬಾಕಿ ಉಳಿದಿರುವ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿ ಆಗುತ್ತೀರಿ.

ಮಿಥುನರಾಶಿ ದಿನಭವಿಷ್ಯ
ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರವಾಗಿ ಇರಬೇಕು. ದೈಹಿಕ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಿ. ನಿಮ್ಮ ಶ್ರಮಕ್ಕೆ ತಕ್ಕಂತೆ ಉದ್ಯೋಗವು ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಿ.

ಕರ್ಕಾಟಕರಾಶಿ ದಿನಭವಿಷ್ಯ
ಯಾವುದೇ ಆರೋಗ್ಯದ ಕುರಿತು ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ. ಹೊಸ ವ್ಯವಹಾರವನ್ನು ಆರಂಭಿಸಲು ಇದು ಸಕಾಲ. ಐಷಾರಾಮಿ ವಸ್ತುಗಳ ಖರೀದಿಗೆ ಹಣವನ್ನು ಖರ್ಚು ಮಾಡುವಿರಿ. ನಿಮ್ಮ ಆದಾಯದಲ್ಲಿ ಏರಿಕೆ ಕಂಡುಬರಲಿದೆ.

ಇದನ್ನೂ ಓದಿ : World Cup 2023 Final : ಆಸ್ಟ್ರೇಲಿಯಾ 6ನೇ ಬಾರಿಗೆ ವಿಶ್ವಚಾಂಪಿಯನ್‌ : ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾಕ್ಕೆ ಸಿಕ್ಕ ಬಹುಮಾನದ ಮೊತ್ತವೆಷ್ಟು ?

ಸಿಂಹರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳ ವಿಚಾರದಲ್ಲಿ ಇಂದು ಸ್ವಲ್ಪ ನಿರಾಸೆಯನ್ನು ಅನುಭವಿಸುವಿರಿ. ಸ್ನೇಹಿತರಲ್ಲಿ ಹಣಕಾಸಿನ ಸಹಾಯವನ್ನು ಕೇಳಿದರೆ ಅದು ದೊರೆಯುತ್ತದೆ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಉಲ್ಬಣವಾಗಲಿದೆ. ಯಾವುದೇ ವ್ಯಕ್ತಿಯನ್ನು ನಂಬಿ ವ್ಯಹಕಾರ ಮಾಡಬೇಡಿ.

Horoscope Today 20 November 2023 Zordic Sign
Image Credit to Original Source

ಕನ್ಯಾರಾಶಿ ದಿನಭವಿಷ್ಯ
ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ಸಹಕಾರ ದೊರೆಯಲಿದೆ. ಜನರಿಗೆ ಸದಾ ಸಹಕಾರ ಮಾಡುತ್ತಿದ್ದರೆ ಇಂದು ಸ್ವಾರ್ಥಿಗಳಾಗಬೇಡಿ. ಎಲ್ಲಾ ಕೆಲಸ ಕಾರ್ಯಗಳನ್ನು ಯಶಸ್ವಿ ಆಗಿ ಪೂರೈಸುತ್ತೀರಿ. ಸಂಗಾತಿಯ ಜೊತೆಗಿನ ವಿವಾದಗಳು ಇಂದು ಕೊನೆಗೊಳ್ಳುತ್ತದೆ.

ತುಲಾರಾಶಿ ದಿನಭವಿಷ್ಯ
ಮಕ್ಕಳ ವಿಚಾರದಲ್ಲಿ ಕೆಲವೊಂದು ಶುಭ ಸುದ್ದಿಗಳನ್ನು ಕೇಳುವಿರಿ. ಸಂಬಂಧಿಕರ ಮನೆಗೆ ಹೋಗುವ ಸಾಧ್ಯತೆಯಿದೆ. ದೀರ್ಘ ಕಾಲದ ಆಸ್ತಿ ವಿವಾದಗಳು ಇಂದು ಬಗೆಹರಿಯಲಿದೆ. ಕುಟುಂಬದಲ್ಲಿಂದು ಶುಭ ಕಾರ್ಯದ ಕುರಿತು ಚರ್ಚೆ ನಡೆಸುವುರಿ. ಸಂಗಾತಿಯ ವಿಚಾರದಲ್ಲಿ ಸಂತಸ.

ಇದನ್ನೂ ಓದಿ : 10ನೇ ತರಗತಿ ಉತ್ತೀರ್ಣರಾದವರಿಗೆ ಗುಡ್‌ನ್ಯೂಸ್‌ : ಅಂಚೆ ಕಚೇರಿಯಲ್ಲಿ ಕೆಲಸ, 81000 ರೂ. ವೇತನ

ವೃಶ್ಚಿಕರಾಶಿ ದಿನಭವಿಷ್ಯ
ಕುಟುಂಬ ಸದಸ್ಯರ ಜೊತೆಗೆ ಸಮಯವನ್ನು ಕಳೆಯುವಿರಿ. ಬಾಕಿ ಉಳಿದ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳುತ್ತದೆ. ಕಚೇರಿಯಲ್ಲಿ ಇಂದು ಆಹ್ಲಾದಕರ ವಾತಾವರಣ ಕಂಡು ಬರಲಿದೆ. ದೂರದ ಬಂಧುಗಳ ಭೇಟಿಯಿಂದ ಮನಸಿಗೆ ನೆಮ್ಮದಿ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಧನಸ್ಸುರಾಶಿ ದಿನಭವಿಷ್ಯ
ವ್ಯಾಪಾರಿಗಳಿಗೆ ಹೊಸ ವ್ಯವಹಾರ ಜಾರಿಗೆ ತರಲು ಉತ್ತಮ. ಬುದ್ದಿವಂತಿಕೆಯಿಂದ ನಿರ್ಧಾರಗಳನ್ನು ಕೈಗೊಳ್ಳುವುದು ಹೆಚ್ಚು ಸೂಕ್ತ. ಕುಟುಂಬ ಸದಸ್ಯರು ನಿಮ್ಮನ್ನು ಬೆಂಬಲಿಸುತ್ತಾರೆ. ಆರ್ಥಿಕ ಪರಿಸ್ಥಿತಿ ಇಂದು ನಿಮ್ಮ ಪಾಲಿಗೆ ಅಷ್ಟೊಂದು ಚೆನ್ನಾಗಿಲ್ಲ.

ಮಕರರಾಶಿ ದಿನಭವಿಷ್ಯ
ಬೆಲೆ ಬಾಳುವ ವಸ್ತುಗಳನ್ನು ನೀವಿಂದು ಪಡೆಯುತ್ತೀರಿ. ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಖರ್ಚು ಮಾಡುವಿರಿ. ಭವಿಷ್ಯದ ವಿಚಾರದಲ್ಲಿ ಇಂದು ಮಹತ್ವದ ನಿರ್ಧಾರವನ್ನು ಕೈಗೊಳ್ಳುವಿರಿ. ಹೊಸ ವ್ಯವಹಾರ ಆರಂಭಿದರೆ ಹೆಚ್ಚು ಲಾಭದಾಯಕವಾಗಲಿದೆ.

ಇದನ್ನೂ ಓದಿ : ರೋಹಿತ್‌ ಶರ್ಮಾಗೆ ಕೊನೆಯ ಐಸಿಸಿ ಸರಣಿ ಆಗುತ್ತಾ ವಿಶ್ವಕಪ್‌ ಫೈನಲ್‌ ? ನಿವೃತ್ತಿ ಪಡೆಯುತ್ತಾರಾ ರೋಹಿತ್‌ ಶರ್ಮಾ

ಕುಂಭರಾಶಿ ದಿನಭವಿಷ್ಯ
ಆರೋಗ್ಯದ ವಿಚಾರದಲ್ಲಿ ಕೆಟ್ಟ ಸುದ್ದಿ. ಆಹಾರ ಪದ್ದತಿಯ ಕಡೆಗೆ ಹೆಚ್ಚಿನ ಗಮನ ಹರಿಸಿ. ಸಂಬಂಧಿಕರೇ ನಿಮಗೆ ದ್ರೋಹ ಮಾಡುವ ಸಾಧ್ಯತೆಯಿದೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರ ಜೊತೆಗೆ ಚರ್ಚೆ ಮಾಡುವುದು ಹೆಚ್ಚು ಸೂಕ್ತ.

ಮೀನರಾಶಿ ದಿನಭವಿಷ್ಯ
ಸಾಮಾಜಿಕವಾಗಿ ನಿಮ್ಮ ಮೇಲೆ ಇರುವ ಗೌರವ ವೃದ್ದಿಸಲಿದೆ. ಸ್ನೇಹಿತರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಹೊಸ ಹೂಡಿಕೆಗಳು ನಿಮಗೆ ಇಂದು ಲಾಭವನ್ನು ತಂದುಕೊಡಲಿದೆ. ಸಂಗಾತಿಯಿಂದ ಸಂತೋಷ ದೊರೆಯಲಿದೆ.

Horoscope Today 20 November 2023 Zordic Sign

Comments are closed.