ಭಾನುವಾರ, ಏಪ್ರಿಲ್ 27, 2025
Homehoroscopeದಿನಭವಿಷ್ಯ 26 ಅಕ್ಟೋಬರ್‌ 2023 : ಈ ರಾಶಿಯವರಿಗಿದೆ ಇಂದು ಭಗವಾನ್‌ ವಿಷ್ಣುವಿನ ಆಶೀರ್ವಾದ

ದಿನಭವಿಷ್ಯ 26 ಅಕ್ಟೋಬರ್‌ 2023 : ಈ ರಾಶಿಯವರಿಗಿದೆ ಇಂದು ಭಗವಾನ್‌ ವಿಷ್ಣುವಿನ ಆಶೀರ್ವಾದ

- Advertisement -

Horoscope Toay : ಇಂದು ಅಕ್ಟೋಬರ್‌ 26 2023 ಗುರುವಾರ. ಚಂದ್ರನು ಇಂದು ಕುಂಭರಾಶಿಗೆ ಸಾಗುತ್ತಾನೆ. ದ್ವಾದಶ ರಾಶಿಗಳ ಶತಭಿಷಾ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಭಗವಾನ್‌ ವಿಷ್ಣುವಿನ ಆಶೀರ್ವಾದ ಕೆಲವು ರಾಶಿಗಳಿಗೆ ಇದ್ದು, ಉತ್ತಮ ಆರ್ಥಿಕ ಪ್ರಯೋಜನ ಪಡೆಯಲಿದ್ದಾರೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಸರಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಅಧಿಕಾರಿಗಳ ಸಹಕಾರದಿಂದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಸಾಲ ಪಡೆದುಕೊಳ್ಳಲು ಇದು ಸಕಾಲ. ಕಚೇರಿಯಲ್ಲಿ ಹೊಸ ಸಮಸ್ಯೆ ಹುಟ್ಟುಕೊಳ್ಳಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ.

ವೃಷಭರಾಶಿ ದಿನಭವಿಷ್ಯ
ಆಧ್ಯಾತ್ಮಿಕ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಲಿದೆ. ಕುಟುಂಬದ ವಾತಾವರಣವು ಹದಗೆಡುತ್ತದೆ. ಉದ್ಯೋಗಿಗಳು ಅವಸರದಲ್ಲಿ ತಪ್ಪುಗಳನ್ನು ಮಾಡುವ ಸಾಧ್ಯತೆಯಿದೆ. ಹಣಕಾಸಿನ ವಿಚಾರದಲ್ಲಿ ಕಷ್ಟಪಡಬೇಕಾಗುತ್ತದೆ. ಮನೆಯಲ್ಲಿ ಶಾಂತಿಯುವ ವಾತಾವರಣ ಇರುತ್ತದೆ. ಆರೋಗ್ಯದಲ್ಲಿ ಚೇತರಿಕೆ.

ಮಿಥುನರಾಶಿ ದಿನಭವಿಷ್ಯ
ಇಂದು ನೀವು ತುಂಬಾ ಭಾವುಕರಾಗಿ ಇರುತ್ತೀರಿ. ಆರೋಗ್ಯ ಹದಗೆಡುವ ಸಾಧ್ಯತೆಯಿದೆ. ಖರ್ಚು ವೆಚ್ಚಗಳು ಅಧಿಕವಾಗಲಿದೆ. ಕುಟುಂಬದಲ್ಲಿ ಅಶಾಂತಿಯ ವಾತಾವರಣ ಇರುತ್ತದೆ. ಆದರೂ ಪರಸ್ಪರ ಸಾಮರಸ್ಯಕ್ಕೆ ಕೊರತೆ ಇರದು. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಇದನ್ನೂ ಓದಿ : ಐಪಿಎಲ್‌ 2024 ರಲ್ಲಿ ಆರ್‌ಸಿಬಿ ಪರ ಆಡಲ್ವಂತೆ ವಿರಾಟ್‌ ಕೊಹ್ಲಿ !

ಕರ್ಕಾಟಕರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳನ್ನು ಇಂದು ಬಹಳ ಎಚ್ಚರಿಕೆಯಿಂದ ಮಾಡಬೇಕು. ವ್ಯಾಪಾರಿಗಳಿಗೆ ನಿರೀಕ್ಷೆಯಷ್ಟು ಲಾಭ ದೊರೆಯಲಾರದು. ಮನೆಯಲ್ಲಿ ಘರ್ಷಣೆ ಉಂಟಾಗುವ ಸಾಧ್ಯತೆಯಿದೆ. ಅಧಿಕಾರಿಗಳ ಜೊತೆಗೆ ಎಚ್ಚರಿಕೆಯಿಂದ ವ್ಯವಹರಿಸಬೇಕು. ಸಣ್ಣ ನಿರ್ಲಕ್ಷ್ಯವು ನಿಮಗೆ ಆರ್ಥಿಕವಾಗಿ ಅವ್ಯವಸ್ಥೆಯನ್ನು ತಂದೊಡ್ಡಲಿದೆ.

Horoscope Today 26 October 2023 Zordic Sign 
Image credit to Original Source

ಸಿಂಹರಾಶಿ ದಿನಭವಿಷ್ಯ
ಕಚೇರಿ ಕೆಲಸ ಕಾರ್ಯಗಳಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ನೀವು ಮಾಡುವ ಯಾವುದೇ ಕೆಲಸ ಕಾರ್ಯಗಳಲ್ಲಿ ಪ್ರಯೋಜನ ದೊರೆಯಲಿದೆ. ಅಗತ್ಯಕ್ಕಿಂತ ಅಧಿಕ ಖರ್ಚು ನಿಮ್ಮನ್ನು ಕಂಗೆಡಿಸಲಿದೆ. ಸ್ನೇಹಿತರು ಮತ್ತು ಸಂಬಂಧಿಕರ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.

ಕನ್ಯಾರಾಶಿ ದಿನಭವಿಷ್ಯ
ಯಾವುದೇ ಕಾರಣಕ್ಕೆ ಇಂದು ಸಾಲವನ್ನು ಪಡೆದುಕೊಳ್ಳಬೇಡಿ. ಆರೋಗ್ಯದ ಬಗ್ಗೆ ಬಹಳ ಎಚ್ಚರಿಕೆಯನ್ನು ವಹಿಸಿ. ಮಾನಸಿಕವಾಗಿ ಅಶಾಂತಿ. ಯಾವುದೇ ನಿರ್ಧಾರವನ್ನು ಕೈಗೊಳ್ಳಲು ಹಿಂಜರಿಕೆ. ಮನೆಯಲ್ಲಿನ ಸಮಸ್ಯೆಗಳು ನಿಮ್ಮನ್ನು ಇಂದು ಕಾಡುವ ಸಾಧ್ಯತೆಯಿದೆ.

ತುಲಾರಾಶಿ ದಿನಭವಿಷ್ಯ
ಈ ರಾಶಿಯವರು ಮಾತು ಮತ್ತು ತಮ್ಮ ನಡವಳಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲೇ ಬೇಕು. ಮನೆಯಲ್ಲಿ ಶುಭ ಕಾರ್ಯಗಳ ಕುರಿತು ಚರ್ಚೆ ನಡೆಯಲಿದೆ. ಉದ್ಯೋಗಳಿಗೆ ಕಚೇರಿ ಕೆಲಸಗಳಲ್ಲಿ ತೊಂದರೆ ಉಂಟಾಗುವ ಸಾಧ್ಯತೆಯಿದೆ. ಸಂಗಾತಿಯಿಂದ ಸಂತಸ.

ಇದನ್ನೂ ಓದಿ : ದೇವರಿಗೂ ಫ್ರೀ ವಿದ್ಯುತ್ : ರಾಜ್ಯ ಸರ್ಕಾರದ ಹೊಸ ಗ್ಯಾರಂಟಿ

ವೃಶ್ಚಿಕರರಾಶಿ ದಿನಭವಿಷ್ಯ
ಕೆಲಸ ಕಾರ್ಯದ ನಿಮಿತ್ತ ದೂರ ಪ್ರಯಾಣ. ಆರೋಗ್ಯವು ಹದಗೆಡುವ ಸಾಧ್ಯತೆಯಿದೆ. ಆರ್ಥಿಕವಾಗಿ ಇಂದು ಹೆಚ್ಚು ಲಾಭದಾಯಕ. ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಹೊಂದಾಣಿಕೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ.

ಧನಸ್ಸುರಾಶಿ ದಿನಭವಿಷ್ಯ
ಈ ರಾಶಿಯವರು ಇಂದು ನಕಾರಾತ್ಮಕ ಫಲಿತಾಂಶಗಳನ್ನು ಎದುರಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಶ್ರಮವನ್ನು ಬಿಟ್ಟುಕೊಡಬೇಡಿ. ನಿಮ್ಮ ಅಸಡ್ಡೆಯಿಂದ ಭವಿಷ್ಯದ ಪ್ರಯೋಜನಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಆರ್ಥಿಕವಾಗಿ ಪ್ರಯೋಜನ ದೊರೆಯಲಿದೆ.

ಮಕರರಾಶಿ ದಿನಭವಿಷ್ಯ
ಆರ್ಥಿಕವಾಗಿ ಅಸ್ಥಿರ ವಾತಾವರಣ. ಹೊಸ ವ್ಯವಹಾರ ಇಂದು ಲಾಭವನ್ನು ತರಲಿದೆ. ಕುಟುಂಬದ ವಾತಾವರಣದಲ್ಲಿ ಸಮಾಧಾನ ಕಂಡುಬರಲಿದೆ. ಉದ್ಯೋಗಸ್ಥರಿಗೆ ಕೆಲಸದ ಸ್ಥಳದಲ್ಲಿ ಧನಾತ್ಮಕ ವಾತಾವರಣ ಕಂಡುಬರಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಇದನ್ನೂ ಓದಿ : ನಟ ದರ್ಶನ್ ತೂಗುದೀಪ್ ಹುಲಿ ಉಗುರಿನ ಪೆಂಡೆಂಟ್ ಅಧಿಕಾರಿಗಳ ವಶಕ್ಕೆ : ಅರಣ್ಯ ಇಲಾಖೆಯಿಂದ ನೋಟೀಸ್ ಜಾರಿ

ಕುಂಭರಾಶಿ ದಿನಭವಿಷ್ಯ
ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಾಗ ಎಚ್ಚರಿಕೆ ಅತೀ ಅಗತ್ಯ. ಆತುರದಲ್ಲಿ ಯಾವುದೇ ಕಾರಣಕ್ಕೂ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಆತುರವು ನಿಮ್ಮ ಭವಿಷ್ಯಕ್ಕೆ ಹಾನಿಕಾರವಾಗಬಹುದು. ಮಧ್ಯಾಹ್ನದ ನಂತರ ಹಿರಿಯರ ಮಾರ್ಗದರ್ಶನ ಪಡೆಯುವುದು ಅತೀ ಮುಖ್ಯ.

ಮೀನರಾಶಿ ದಿನಭವಿಷ್ಯ
ನಿಮ್ಮ ಸಂಪತ್ತು ವೃದ್ದಿಸುವ ಸಾಧ್ಯತೆಯಿದೆ. ಸಮಾಜಿಕವಾಗಿ ಗೌರವ ವೃದ್ದಿಸಲಿದೆ. ಮಾತಿನ ಮೇಲೆ ಹಿಡಿತ ಇರಲಿ. ಆರ್ಥಿವಾಗಿ ಸಾಮಾನ್ಯ ದಿನ, ಆದರೂ ಉತ್ತಮ ಫಲಿತಾಂಶಗಳು ದೊರೆಯಲಿದೆ. ಧಾರ್ಮಿಕ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ಶತ್ರುಗಳ ಬಗ್ಗೆ ಎಚ್ಚರಿಕೆ ಅತೀ ಅಗತ್ಯ.

Horoscope Today 26 October 2023 Zordic Sign 

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular